ಪ್ರಗತಿವಾಹಿನಿ ಸುದ್ದಿ, ಹೊಸದಿಲ್ಲಿ: ವ್ಯಕ್ತಿಯೊಬ್ಬನ ಶಿರಚ್ಛೇದ ಮಾಡಿ, ಅದನ್ನು ಚಿತ್ರೀಕರಿಸಿ, ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿರುವ ಪಾಕಿಸ್ತಾನ ಮೂಲದ ಹ್ಯಾಂಡ್ಲರ್‌ಗೆ ವಿಡಿಯೋ ಕಳುಹಿಸಿದ ಇಬ್ಬರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ದೆಹಲಿ ಪೊಲೀಸರ ವಿಶೇಷ ವಿಭಾಗವು ಕೊಲೆಯಾದ ಯುವಕನ ಗುರುತನ್ನು ಇನ್ನೂ ಬಹಿರಂಗಪಡಿಸಿಲ್ಲ.
ಇಬ್ಬರು ಆರೋಪಿಗಳಾದ ನೌಶಾದ್ (56) ಮತ್ತು ಜಗಜಿತ್ ಸಿಂಗ್ (29) ಕೊಲೆಯ ಬಳಿಕ ಯುವಕನ ದೇಹವನ್ನು ಎಂಟು ತುಂಡುಗಳಾಗಿ ವಿಲೇವಾರಿ ಮಾಡುವ ಮೊದಲು ಹತ್ಯೆಯ 37 ಸೆಕೆಂಡುಗಳ ವೀಡಿಯೊವನ್ನು ಚಿತ್ರೀಕರಿಸಿದ್ದಾರೆ.
ದೆಹಲಿಯ ಭಲ್ಸ್ವಾ ಡೈರಿ ಪ್ರದೇಶದಲ್ಲಿ ಪೊಲೀಸರು ತುಂಡರಿಸಿದ ದೇಹದ ಕೆಲವು ಭಾಗಗಳನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಡಿಸೆಂಬರ್ 14-15 ರಂದು ಕೊಲೆ ನಡೆದಿದೆ ಎಂದು ಪೊಲೀಸರು ಶಂಕಿಸಿದ್ದಾರೆ.
ನೌಶಾದ್ ಮತ್ತು ಜಗಜಿತ್, ಐಸಿಸ್‌ನಿಂದ ಪ್ರೇರಿತರಾಗಿದ್ದರು. ಮತ್ತು ಭಯೋತ್ಪಾದಕ ಸಂಘಟನೆಯಾದ ಲಷ್ಕರ್-ಎ-ತೊಯ್ಬಾದೊಂದಿಗೆ ನಂಟು ಹೊಂದಿರುವ ಸೊಹೈಲ್‌ಗೆ ತಮ್ಮ ನಿಷ್ಠೆ ಸಾಬೀತುಪಡಿಸಲು ವೀಡಿಯೊ ಮಾಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಆರೋಪಿಗಳು 2011 ರಲ್ಲಿ ಸೊಹೈಲ್ ನನ್ನು ಭೇಟಿಯಾಗಿ ತೀವ್ರಗಾಮಿಯಾದರು. ಸೊಹೈಲ್ 2013ರಲ್ಲಿ ಜೈಲಿನಿಂದ ಹೊರಬಂದು ಪಾಕಿಸ್ತಾನಕ್ಕೆ ತೆರಳಿದ್ದ. 2018 ರಲ್ಲಿ, ನೌಶಾದ್ ಜೈಲಿನಿಂದ ಹೊರಬಂದಿದ್ದ. ಆದರೆ ಎರಡು ವರ್ಷಗಳ ನಂತರ ಉತ್ತರಾಖಂಡದಿಂದ ಸುಲಿಗೆ ಪ್ರಕರಣದಲ್ಲಿ ಬಂಧಿಸಲಾಯಿತು. ಈ ಜೈಲು ಅವಧಿಯಲ್ಲೇ ಅವರು ಕೆನಡಾ ಮೂಲದ ದರೋಡೆಕೋರ ಅರ್ಷದೀಪ್ ಸಿಂಗ್ ಗಿಲ್ ಸಹವರ್ತಿ ಜಗಜಿತ್ ಸಿಂಗ್ ನನ್ನು ಭೇಟಿಯಾದರು ಎಂದು ಮೂಲಗಳು ತಿಳಿಸಿವೆ.
*ಇಂದಿನಿಂದ 2 ದಿನ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ*
https://pragati.taskdun.com/bjp-national-executive-meetingdelhi/
ದುರಂತ ಸಾವಿಗೆ ಮೊದಲು ಸೆಲ್ಫಿ ಕ್ಲಿಕ್ಕಿಸಿದ್ದ ಮಾಸ್ಕೋ ಟ್ರಾವೆಲ್ ಬ್ಲಾಗರ್
https://pragati.taskdun.com/a-moscow-travel-blogger-who-clicked-a-selfie-before-her-tragic-death/
*ಕೆಪಿಸಿಸಿ ಕಿಸಾನ್ ಸೆಲ್ ರಾಜ್ಯ ಸಂಚಾಲಕರ ನಿವಾಸದ ಮೇಲೆ IT ದಾಳಿ*
https://pragati.taskdun.com/kpcc-kisan-cellakmalit-raidchikkamagaluru/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ