ಪ್ರಗತಿ ವಾಹಿನಿ ಸುದ್ದಿ, ಪುಣೆ: ಜೂನ್ ತಿಂಗಳ ವೇಳೆಗೆ ಭಾರತದಲ್ಲಿ ಭಾರಿ ಆರ್ಥಿಕ ಹಿಂಜರಿತ ಸಂಭವಿಸುವ ಅಪಾಯವಿದೆ ಎಂದು ಕೇಂದ್ರ ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಸಚಿವ ನಾರಾಯಣ ರಾಣೆ ಎಚ್ಚರಿಕೆ ನೀಡಿದ್ದಾರೆ.
ಪುಣೆಯಲ್ಲಿ ಹಮ್ಮಿಕೊಂಡಿರುವ ಜಿ 20 ರಾಷ್ಟ್ರಗಳ ಮೂಲ ಸೌಕರ್ಯ ಅಭಿವೃದ್ಧಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿರುವ ಅವರು, ಈಗಾಗಲೇ ವಿಶ್ವದ ಅನೇಕ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಭಾರಿ ಆರ್ಥಿಕ ಹಿಂಜರಿತ ಅನುಭವಿಸುತ್ತಿವೆ. ಇದರ ಬಿಸಿ ಜೂನ್ ವೇಳೆಗೆ ಭಾರತಕ್ಕೂ ತಟ್ಟುವ ಸಾಧ್ಯತೆ ಇದೆ.
ಆದರೆ ಕೇಂದ್ರ ಸರಕಾರ ಆರ್ಥಿಕ ಹಿಂಜರಿತದ ದುಷ್ಪರಿಣಾಮಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳತ್ತಿದೆ ಎಂದು ನಾರಾಯಣ ರಾಣೆ ವಿವರಿಸಿದರು.
ಜಿ 20 ಸದಸ್ಯ ರಾಷ್ಟ್ರಗಳಲ್ಲಿ ನಗರಗಳ ಸುಸ್ಥಿರ ಅಭಿವೃದ್ಧಿಯ ಬಗ್ಗೆ ಮುಖಂಡರು ಚರ್ಚೆ ನಡೆಸಿದರು.
ಬೆಳಗಾವಿ: ರಾಷ್ಟ್ರಗಾನ ಅಭಿಯಾನಕ್ಕೆ ಹೆಸರು ನೋಂದಾಯಿಸಲು ಅವಕಾಶ
https://pragati.taskdun.com/registration-opend-for-national-anthem-singing-in-belagavi/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ