Kannada NewsLatest

*ದೇಶದ ಭವಿಷ್ಯ ಯುವಕರ ಕೈಯಲ್ಲಿದೆ: ಶಾಸಕ ಸತೀಶ ಜಾರಕಿಹೊಳಿ*

 ಪ್ರಗತಿವಾಹಿನಿ ಸುದ್ದಿ; ಯಮಕನಮರಡಿ: ” ಭವ್ಯ ಭಾರತದ ಕನಸು ಈಡೇರಬೇಕಾದರೆ ಯುವಕರು ರಾಜಕೀಯಕ್ಕೆ ಬರಬೇಕು. ಅಂದಾಗ ಮಾತ್ರ ನಮ್ಮ ದೇಶದ ಭವಿಷ್ಯ ಉಜ್ವಲಗೊಳ್ಳುವುದು”  ಎಂದು  ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ಅವರು  ಕರೆ ನೀಡಿದರು.

ಯಮಕನಮರಡಿ ಮತಕ್ಷೇತ್ರದ ದಡ್ಡಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ನೂತನ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರ ಅಭಿನಂದನಾ ಮತ್ತು ಸತ್ಕಾರ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು,

ಈಗಿನಿಂದಲೇ ಯುವಕರು ರಾಜಕೀಯ ಬಂದರೆ, 30 ವರ್ಷಗಳ ಕಾಲ ದೀರ್ಘ ರಾಜಕೀಯ ಮಾಡಲು ಅವಕಾಶ ಸಿಗುತ್ತದೆ. ರಾಜಕೀಯದಲ್ಲಿ ಉತ್ತಮ ಭವಿಷ್ಯ  ಇದೆ. ಹೀಗಾಗಿ ಯುವಕರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳುವುದರ ಜತೆಗೆ ಸದಸ್ಯರು ಗ್ರಾಮಗಳ ಅಭಿವೃದ್ದಿಗೂ ಶ್ರಮಿಸಬೇಕು ಎಂದು ಹೇಳಿದರು.


ನೂತನ ಆಯ್ಕೆಯಾದ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು ಗ್ರಾಮದ ಪ್ರಗತಿಗೆ ಹಗಲಿರುಳು ಶ್ರಮಿಸಬೇಕು.  ಗ್ರಾಮಗಳಲ್ಲಿ ಹೆಚ್ಚಿನ ಅಭಿವೃದ್ದಿ ಒತ್ತು ನೀಡಬೇಕು, ಮುಖ್ಯವಾಗಿ  ದಡ್ಡಿ ಗ್ರಾಮ ಆದರ್ಶ ಗ್ರಾಮವಾಗಿಸಲು ಸದಸ್ಯರು  ಒಗ್ಗಟ್ಟನಿಂದ ಕೆಲಸ ಮಾಡಲು ಮುಂದಾಗಬೇಕು ಎಂದು ತಿಳಿ ಹೇಳಿದರು.

ಕಳೆದ 15 ವರ್ಷಗಳಿಂದ ಯಮಕನಮರಡಿ  ಕ್ಷೇತ್ರದ ಶ್ರೇಯೋಭಿವೃದ್ಧಿಗಾಗಿ ಸಾಕಷ್ಟು ಶ್ರಮಿಸಲಾಗಿದೆ. ಶೈಕ್ಷಣಿಕ ಪ್ರಗತಿಗೆ ಒತ್ತು  ನೀಡುವುದರ ಜತೆ  ಗುಣಮಟ್ಟದ ರಸ್ತೆ, ನೀರಿನ ವ್ಯವಸ್ಥೆಯ ಕಲ್ಪಿಸಲಾಗಿದೆ. ಮೂರು ತಿಂಗಳಿನಲ್ಲಿ ವಿಧಾನಸಭಾ ಚುನಾವಣೆ ಎದುರಾಗಲಿದೆ. ಮತಪ್ರಭುಗಳ  ಆಶೀರ್ವಾದ ನಮ್ಮ ಮೇಲೆ  ಇರಲಿ ಎಂದು ಮನವಿ ಮಾಡಿಕೊಂಡರು.

ರಾಜಕೀಯದಲ್ಲಿ ಅಪಪ್ರಚಾರ ಸಾಮಾನ್ಯ:
ರಾಜಕೀಯದಲ್ಲಿ ಅಪಪ್ರಚಾರ ಸಾಮಾನ್ಯ.  ನಿಮ್ಮ ಮೈಮೇಲೆ ಮಸಿ ಬಿದ್ದಿದೆ ನೋಡಿಕೊಳ್ಳಿ ಎಂದು ಅಷ್ಟೇ ಹೇಳಿದ್ದಕ್ಕೆ ನಾನೇ ಮಸಿ ಎರಚಿದ್ದೇನೆ ಎಂದು ವಿರೋಧಿಗಳು ಅಪಪ್ರಚಾರ ಮಾಡಿದರು. ಅವರು ಎಷ್ಟೇ ಅಪಪ್ರಚಾರ  ಮಾಡಿದರೂ ಸತ್ಯ ಸತ್ಯವಾಗಿ ಇರುತ್ತದೆ.

ನಾವೆಲ್ಲರೂ ಒಂದೇ, ಒಂದಾಗಿ ಬಾಳಬೇಕು. ಬಸವಣ್ಣನವರ, ಛತ್ರಪತಿ ಶಿವಾಜಿ ಮಹಾರಾಜರ, ಸಾವಿತ್ರಿಬಾಯಿ ಫುಲೆ ಮತ್ತು ಶಾಹೂ ಮಹಾರಾಜರ ತತ್ವಗಳನ್ನು ಅಳವಡಿಸಿಕೊಂಡು ಜನರ ಕಲ್ಯಾಣಕ್ಕಾಗಿ ಶ್ರಮಿಸೋಣ ಎಂದರು.

ಈ ಸಂದರ್ಭದಲ್ಲಿ ಪುತ್ರ ರಾಹುಲ ಜಾರಕಿಹೊಳಿ ಸೇರಿ ಗ್ರಾಮದ ಪ್ರಮುಖ ಮುಖಂಡರು ಹಾಗೂ ಹಿರಿಯರು ಇತರರು ಇದ್ದರು.

https://pragati.taskdun.com/belgaum-airport12-flights-suspendedbusinessmenchamber-of-commerce-hall-meeting/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button