ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಬೆಂಗಳೂರಿನ ಆರ್. ವಿ. ಡೆಂಟಲ್ ಕಾಲೇಜ್ ನಲ್ಲಿ ಇಂದು ನಡೆದ ಯುವ ಸಂಭಾಷಣೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಪಾಲ್ಗೊಂಡು, ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಕಾಲೇಜಿನಲ್ಲಿ ಚುನಾವಣೆ ನಡೆಸುವ ವಿಚಾರದ ಬಗ್ಗೆ ವಿದ್ಯಾರ್ಥಿಯೊಬ್ಬ ಪ್ರಸ್ತಾಪಿಸಿದ್ದು, ಇದಕ್ಕೆ ಉತ್ತರಿಸಿದ ಸಿಎಂ ಬೊಮ್ಮಾಯಿ, ಓದುವ ಸಮಯದಲ್ಲಿ ಓದಿ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಇದು ಓದುವ ಸಮಯ. ಚೆನ್ನಾಗಿ ಓದಿ, ಕಾಲೇಜು ಸಮಯವನ್ನು ಎಂಜಾಯ್ ಮಾಡಿ. ಕಾಲೇಜಿನಲ್ಲಿ ಚುನಾವಣೆ ಬೇಡ. ಅದೊಂದು ದೊಡ್ಡ ಜವಾಬ್ದಾರಿ. ಓದುವ ಸಮಯದಲ್ಲಿ ವಿದ್ಯಾರ್ಥಿಗಳು ಓದಬೇಕು ಎಂದರು.
ಮುಂದಿನ ದಿನಗಳಲ್ಲಿ ಡಿಜಿಟಲ್ ಶಿಕ್ಷಣ ಹೆಚ್ಚಾಗಲಿದೆ. ಹಳ್ಳಿ, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಇನ್ನೂ ಡಿಜಿಟಲೈಸೇಷನ್ ತಲುಪಿಲ್ಲ. ಟ್ಯಾಬ್, ಮೊಬೈಲ್ ಅನೇಕ ವ್ಯವಸ್ಥೆಗಳು ಮಕ್ಕಳ ಬಳಿ ಇಲ್ಲ. ಇದೆಲ್ಲ ತಲುಪಲು ಕೆಲ ಸಮಯಬೇಕು. ಸರ್ಕಾರದಿಂದಲೇ ಶಿಕ್ಷಣ ಕಲಿಸುವ ತಂತ್ರಾಂಶ ಸಿದ್ಧ ಪಡಿಸಲಾಗುತ್ತಿದೆ. ಬೈಜೂಸ್ ರೀತಿ ಸರ್ಕಾರದ ತಂತ್ರಾಂಶ ಸಿದ್ಧಪಡಿಸಲಾಗುವುದು ಎಂದು ತಿಳಿಸಿದರು.
*ಪುಟ್ಟ ಮಕ್ಕಳಿಗೆ ವಿಷವುಣಿಸಿ ತಾಯಿ ಆತ್ಮಹತ್ಯೆ*
https://pragati.taskdun.com/mothertwo-childrensuicidebidar/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ