ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಇಲ್ಲಿನ ಕೆಎಲ್ಎಸ್ ಜಿಐಟಿಯು ಸ್ಟಾರ್ಟ್ಅಪ್ ಕುರಿತು ನಿರ್ಮಿಸಲಾದ ‘ಮೇಡ್ ಇನ್ ಬೆಂಗಳೂರು’ ಚಲನಚಿತ್ರದ ವಿಶೇಷ ಉಚಿತ ಪ್ರದರ್ಶನವನ್ನು ಜ.19 ರಂದು ಬೆಳಗಾವಿಯ ಸ್ವರೂಪ ನರ್ತಕಿ ಥಿಯೇಟರ್ನಲ್ಲಿ ಆಯೋಜಿಸಲಾಗಿತ್ತು.
ಜಿಐಟಿಯ 500 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಚಲನಚಿತ್ರವನ್ನು ಪರದೆಯ ಮೇಲೆ ವೀಕ್ಷಿಸಿದರು.
ವಿದ್ಯಾರ್ಥಿ ಸ್ಟಾರ್ಟ್-ಅಪ್ಗಳ ಆಲೋಚನೆಗಳನ್ನು ಬೆಂಬಲಿಸುತ್ತ, ಪೋಷಿಸುತ್ತ ಬಂದಿರುವ ಜಿಐಟಿಯ ಅನೇಕ ಹಳೆಯ ವಿದ್ಯಾರ್ಥಿಗಳು ಈಗ ರಾಷ್ಟ್ರೀಯ ಮತ್ತು ಜಾಗತಿಕ ಮಟ್ಟದಲ್ಲಿ ಮಾನ್ಯತೆ ಪಡೆದ ಸ್ಟಾರ್ಟ್-ಅಪ್ಗಳ ಸಿಇಒಗಳಾಗಿದ್ದಾರೆ. ಈ ಚಲನಚಿತ್ರವು ಸ್ಟಾರ್ಟ್ ಅಪ್ ಸಂಸ್ಕೃತಿ ಮತ್ತು ಯುವ ಉದ್ಯಮಿಯಾಗುವ ಪ್ರಯಾಣವನ್ನು ತಿಳಿಸುತ್ತದೆ.
ಈ ಚಲನಚಿತ್ರ ಯುವ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಸ್ಟಾರ್ಟ್-ಅಪ್ಗಳ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಯಶಸ್ವಿ ಉದ್ಯಮಿಯಾಗಲು ಅಗತ್ಯವಾದ ಬದ್ಧತೆ ಮತ್ತು ತಂಡದ ಕೆಲಸಗಳು, ಸಂಯೋಜಿತ ಕಾರ್ಯನಿರ್ವಹಣೆ ಇತ್ಯಾದಿಗಳ ಮಾಹಿತಿ ಒದಗಿಸುತ್ತದೆ.
ಕೆಎಲ್ಎಸ್ ಜಿಐಟಿಯ ಅಧ್ಯಕ್ಷ ರಾಜೇಂದ್ರ ಬೆಳಗಾಂವಕರ ಅವರು ವಿದ್ಯಾರ್ಥಿಗಳಲ್ಲಿ ಸ್ಟಾರ್ಟ್-ಅಪ್ಗಳ ಕುರಿತು ಮಾಹಿತಿ ಅರಿಯಲು ಈ ಪ್ರದರ್ಶನಕ್ಕೆ ಬೆಂಬಲಿಸಿದ್ದರು.
ಕೆಎಲ್ಎಸ್ ಜಿಐಟಿ, ಪ್ರಾಂಶುಪಾಲ ಡಾ. ಜಯಂತ್ ಕೆ.ಕಿತ್ತೂರು, ಡೀನ್, ಎಚ್ಒಡಿಗಳು, ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಈ ಚಿತ್ರ ತಂಡವನ್ನು, ಯುವ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿದ್ದಕ್ಕಾಗಿ ಶ್ಲಾಘಿಸಿದ್ದಾರೆ ಮತ್ತು ಈ ವಿಶೇಷ ಪ್ರದಶನಕ್ಕೆ ಅನುವು ಮಾಡಿ ಕೊಟ್ಟಿದ್ದಕ್ಕಾಗಿ ಅವಿನಾಶ್ ಪೋತದಾರ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ.
*ಪ್ರವೀಣ್ ನೆಟ್ಟಾರು ಹತ್ಯೆ ಕೇಸ್; ಮತ್ತಿಬ್ಬರು ಆರೋಪಿಗಳ ಮಾಹಿತಿ ನೀಡಿದವರಿಗೆ 10 ಲಕ್ಷ ಘೋಷಣೆ*
https://pragati.taskdun.com/bjp-leaderpraveen-nettaru-murder-caseniaannounce-10-lakhtwo-accused-identify/
ಬಿಸಿಸಿಐ ಐಸಿಸಿ, ಫಿಫಾದೊಂದಿಗೆ ಬೈಜೂಸ್ ಪ್ರಾಯೋಜಕತ್ವ ನವೀಕರಿಸುವುದಿಲ್ಲ
https://pragati.taskdun.com/bcci-will-not-renew-baijus-sponsorship-with-icc-fifa/
*ಹಾವೇರಿ BJP ಪಾಳಯದಲ್ಲಿ ಸಂಚಲನ ಮೂಡಿಸಿದ ಡಿ.ಕೆ.ಶಿವಕುಮಾರ್ ಹೇಳಿಕೆ*
https://pragati.taskdun.com/d-k-shivakumarhaveribjp-mlascongress/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ