Kannada NewsKarnataka News

ಅವರು ಮಾಡಿದ್ದಕ್ಕಿಂತ 10 ಕೋಟಿ ರೂ. ಹೆಚ್ಚು ಖರ್ಚು ಮಾಡುತ್ತೇವೆ – ಬಹಿರಂಗ ಸಭೆಯಲ್ಲೇ ರಮೇಶ ಜಾರಕಿಹೊಳಿ ಘೋಷಣೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:  ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಯಾವುದೇ ಪರಿಸ್ಥಿತಿಯಲ್ಲಿ ಈ ಬಾರಿ ಕಾಂಗ್ರೆಸ್ ಸೋಲಿಸಲೇಬೇಕು. ಇದಕ್ಕಾಗಿ ಅವರು 3 ಸಾವಿರ ರೂ. ಗಿಫ್ಟ್ ಕೊಟ್ಟರೆ ನಾವು 6 ಸಾವಿರ ರೂ. ಗಿಫ್ಟ್ ಕೊಡುತ್ತೇವೆ. ಅವರು ಖರ್ಚು ಮಾಡಿದ್ದಕ್ಕಿಂತ 10 ಕೋಟಿ ರೂ. ಹೆಚ್ಚು ಖರ್ಚು ಮಾಡುತ್ತೇವೆ ಎಂದು ಮಾಜಿ ಸಚಿವ, ಶಾಸಕ ರಮೇಶ ಜಾರಕಿಹೊಳಿ ಹೇಳಿದ್ದಾರೆ.

ಸುಳೇಬಾವಿಯಲ್ಲಿ ಶುಕ್ರವಾರ ಸಂಜೆ ನಡೆದ ರಮೇಶ ಜಾರಕಿಹೊಳಿ ಅಭಿಮಾನಿಗಳ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.

ನಾವು ಮೊದಲು ಸಂಘಟನೆ ಮಾಡಿ ನಂತರ ಗಿಫ್ಟ್ ಕೊಡುತ್ತೇವೆ. ಅವರು 3 ಸಾವಿರ ರೂ. ಗಿಫ್ಟ್ ಕೊಟ್ಟರೆ, ನಾವು 6 ಸಾವಿರದ್ದು ಕೊಟ್ಟರೆ ಮಾತ್ರ ನಮಗೆ ಓಟ್ ಕೊಡಿ ಎಂದು ಹೇಳಿದರು.

ಅವರು ಕೊಡುವ ಗಿಫ್ಟನ್ನು ಕಡೆಗಣಿಸಿ ಇಲ್ಲಿ ಜನರು ಸಮಾವೇಶಕ್ಕೆ ಬಂದಿದ್ದಾರೆ. ಇಂತವರನ್ನು ಪಡೆದ ನಾನೇ ಧನ್ಯ ಎಂದ ರಮೇಶ ಜಾರಕಿಹೊಳಿ,  ನಾನು ಮಾಜಿ ಆದ ನಂತರ ಅವರ ನಿಜವಾದ ಬಣ್ಣ ಗೊತ್ತಾಯಿತು.  ನಾನು ಮಾಜಿ ಆಗದಿದ್ದರೆ ಅವರ ಗುಣ ಗೊತ್ತಾಗುತ್ತಿರಲಿಲ್ಲ, ಮಾಜಿ ಆದರೆ ನಾನು ಮನೆಗೆ ಹೋಗುತ್ತೇನೆ ಎಂದು ತಿಳಿದಿದ್ದರು. ಆದರೆ ಇದು ಜಾರಕಿಹೊಳಿ ಕುಟುಂಬ, ಎಂದಿಗೂ ಮನೆಗೆ ಹೋಗುವುದಿಲ್ಲ ಎಂದರು.

ಈ ಸಮಾವೇಶದಲ್ಲಿ ಗಿಫ್ಟ್ ಕೊಡೋಣ ಎಂದು ಕೆಲವರು ಹೇಳಿದರು. ಆದರೆ ನಾವು ಮೊದಲು ಸಂಘಟನೆ ಮಾಡೋಣ. ನಂತರ ಗಿಫ್ಟ್ ಕೊಡೋಣ ಎಂದು ಹೇಳಿದ್ದೇನೆ. ಅವರು 2 -3 ಬಾರಿ ಸೇರಿ 3 ಸಾವಿರ ರೂ ಗಿಫ್ಟ್ ಕೊಡಬಹುದು. ನಾವು 6 ಸಾವಿರ ರೂ. ಗಿಫ್ಟ್ ಕೊಟ್ಟರೆ ಮಾತ್ರ ನಮಗೆ ಓಟ್ ಹಾಕಿ ಎಂದ ರಮೇಶ್,  ಅವರು ಖರ್ಚು ಮಾಡಿದ್ದಕ್ಕಿಂತ 10 ಕೋಟಿ ಜಾಸ್ತಿ ಖರ್ಚು ಮಾಡೋಣ ಎಂದು ಹೇಳಿದರು.

ಈ ಸಮಾವೇಶಕ್ಕೆ ಶೇ.70ರಷ್ಟು ಬೇರೆ ಪಕ್ಷದಿಂದ ಬಂದಿದ್ದಾರೆ. ಹಾಗಾಗಿ ಬಿಜೆಪಿ ಬ್ಯಾನರ್ ಅಡಿಯಲ್ಲಿ ಕಾರ್ಯಕ್ರಮ ಮಾಡಿಲ್ಲ ಎಂದು ಅವರು ತಿಳಿಸಿದರು.

ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿಯ ಮಹಾಂತೇಶ ಕವಟಗಿಮಠ ಸೋಲುತ್ತಿರಲಿಲ್ಲ. ನಮ್ಮ ಪಕ್ಷದ ಕೆಲವು ಉದ್ದ ಅಂಗಿ ಹಾಕಿಕೊಂಡು ಬರುವವರಿಂದಲೇ ಅವರು ಸೋತಿದ್ದಾರೆ. ನಮ್ಮಲ್ಲಿನ ಗೊಂದಲದಿಂದ ಸೋತರು. ಕಾಂಗ್ರೆಸ್ ನವರು ಕೆಲಸದಿಂದ ಆಯ್ಕೆಯಾಗಿಲ್ಲ ಎಂದು ರಮೇಶ ಜಾರಕಿಹೊಳಿ ಹೇಳಿದರು.

ಮಂತ್ರಿ ಸ್ಥಾನಕ್ಕೆ ನಾನು ತಲೆ ಕೆಡಿಸಿಕೊಂಡಿಲ್ಲ. ಬೆಳಗಾವಿ ಜಿಲ್ಲೆಯಲ್ಲಿ 14 ಸ್ಥಾನ ಗೆಲ್ಲುತ್ತೇವೆ. ರಾಜ್ಯದಲ್ಲಿ ಮತ್ತೆ ಬಿಜೆಪಿ ಸರಕಾರ ತರುತ್ತೇವೆ ಎಂದು ಘೋಷಿಸಿದರು.

 

ರಮೇಶ್ ಜಾರಕಿಹೊಳಿ ಸಮಾವೇಶಕ್ಕೆ ನಾನು ಹೋಗುವುದಿಲ್ಲ- ಸಂಜಯ ಪಾಟೀಲ

https://pragati.taskdun.com/will-not-go-to-ramesh-jarakiholi-convention-sanjay-patil/

*ಮಂತ್ರಿ ಸ್ಥಾನದ ಆಸೆಯನ್ನೇ ಬಿಟ್ಟಿದ್ದೇನೆ ಎಂದ ಮಾಜಿ ಸಚಿವ*

https://pragati.taskdun.com/k-s-eshwarappabjpshivamoggapressmeet/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button