Latest

*ಬೆಂಗಳೂರಿನಲ್ಲಿ ಪಾಕಿಸ್ತಾನ ಯುವತಿ ಬಂಧನ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಅಕ್ರಮವಾಗಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ವಾಸವಾಗಿದ್ದ ಪಾಕಿಸ್ತಾನದ 19 ವರ್ಷದ ಯುವತಿಯನ್ನು ಬೆಳ್ಳಂದೂರು ಪೊಲೀಸರು ಬಂಧಿಸಿದ್ದಾರೆ.

ಇಕ್ರಾ ಜೀವನಿ 19 ವರ್ಷದ ಬಂಧಿತ ಯುವತಿ. ಬೆಂಗಳೂರಿನಲ್ಲಿದ್ದುಕೊಂಡು ಪಾಕಿಸ್ತಾನದಲ್ಲಿದ್ದ ತನ್ನ ತಾಯಿ ಸಂಪರ್ಕಿಸಲು ಯತ್ನಿಸಿದ್ದಳಲ್ಲದೇ ಹೆಸರು ಬದಲಿಸಿಕೊಂಡು ಪಾಕ್ ಪಾಸ್ ಪೋರ್ಟ್ ಗೆ ಅರ್ಜಿ ಸಲ್ಲಿಸಿದ್ದಳು. ರಾವಾ ಯಾದವ್ ಎಂದು ಇಕ್ರಾ ತನ್ನ ಹೆಸರು ಬದಲಿಸಿಕೊಂಡು ಪಾಸ್ ಪೋರ್ಟ್ ಗೆ ಅರ್ಜಿ ಸಲ್ಲಿಸಿದ್ದಳು.

ಕೇಂದ್ರ ಗುಪ್ತಚರ ಇಲಾಖೆ ಮಾಹಿತಿ ಮೇರೆಗೆ ಇಕ್ರಾ ಜೀವನಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಈ ಹಿಂದೆ ಇಕ್ರಾ ಜೀವಿನಿ ನೇಪಾಳ ಮೂಲಕ ಭಾರತದ ಗಡಿ ದಾಟಿ ಬಂದಿದ್ದಳು. ಡೇಟಿಂಗ್ ಆಪ್ ಮೂಲಕ ಉತ್ತರ ಪ್ರದೇಶ ಮೂಲದ ಮುಲಾಯಂ ಸಿಂಗ್ ಎಂಬಾತನನ್ನು ಪರಿಚಯವಾಗಿ ಮದುವೆಯಾಗಿದ್ದಳು. ಬಳಿಕ ಬೆಂಗಳೂರಿಗೆ ಬಂದು ಸರ್ಜಾಪುರ ರಸ್ತೆಯ ಜುನ್ನಸಂದ್ರದಲ್ಲಿ ವಾಸವಾಗಿದ್ದಳು. ಇಕ್ರಾಳನ್ನು ಬಂಧಿಸಿರುವ ಪೊಲೀಸರು ವಿಚಾರಣೆ ಚುರುಕುಗೊಳಿಸಿದ್ದಾರೆ.

ಇನ್ನು ಮುಲಾಯಂ ಸಿಂಗ್ ಎಚ್‌ಎಸ್‌ಆರ್ ಲೇಔಟ್​ನ ಕಂಪನಿಯೊಂದರಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿದ್ದ. ಈ ವೇಳೆ ಗೇಮಿಂಗ್ ಆ್ಯಪ್ LUDOನಲ್ಲಿ ಪಾಕಿಸ್ತಾನದ ಇಕ್ರಾ ಜೀವನಿ ಪರಿಚಯವಾಗಿದೆ. ಬಳಿಕ ಪರಿಚಯ ಪ್ರೇಮಕ್ಕೆ ತಿರುಗಿ, ಇಬ್ಬರು ಮದುವೆಯಾಗಲು ನಿರ್ಧರಿಸಿದರು. ಈ ಹಿನ್ನೆಲೆಯಲ್ಲಿ ಇಕ್ರಾ ಜೀವನಿಯನ್ನು ಭಾರತಕ್ಕೆ ಕರೆತಂದಿದ್ದ ಮುಲಾಯಂ ಸಿಂಗ್, ಆಕೆಯೊಂದಿಗೆ ಒಟ್ಟಿಗೆ ಬೆಂಗಳೂರಿನಲ್ಲಿ ವಾಸವಾಗಿದ್ದ ಎನ್ನಲಾಗಿದೆ.

ಲಕ್ಷಾಂತರ ರೂ. ಬೆಲೆಯ ಟಯರ್ ಕಳ್ಳನ ಬಂಧನ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button