*ಇಂತಹ ನೂರು ಸಿಡಿ ಬಂದರೂ ಹೆದರಲ್ಲ; ಡಿ.ಕೆ.ಶಿವಕುಮಾರ್ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದ ರಮೇಶ್ ಜಾರಕಿಹೊಳಿ*
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ರಾಜ್ಯ ರಾಜಕಾರಣದಲ್ಲಿ ಮತ್ತೆ ಸಿಡಿ ಸಮರ ಸ್ಫೋಟಗೊಂಡಿದ್ದು, ಇಂತಹ ನೂರು ಸಿಡಿ ಬರಲಿ ನಾನು ಹೆದರಲ್ಲ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಾಗ್ದಾಳಿ ನಡೆಸಿದ್ದಾರೆ.
ಬೆಳಗಾವಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಮೇಶ್ ಜಾರಕಿಹೊಳಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿರುವ ರಮೇಶ್ ಜಾರಕಿಹೊಳಿ, ಡಿಕೆಶಿ ಗೆ ನನ್ನ ಹೆದರಿಕೆಯಿದೆ. ನಾನೊಬ್ಬನೇ ಅವನನ್ನು ಎದುರಿಸುವ ವ್ಯಕ್ತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೇವನಹಳ್ಳಿ ಮನೆಯಲ್ಲಿ 90 ರಿಂದ 110 ಸಿಡಿ ಸಿಕ್ಕಿವೆ. ಇಡೀ ರಾಜ್ಯದ ಜನರ ಸಿಡಿಗಳು ಆ ಮನೆಯಲ್ಲಿ ಸಿಕ್ಕಿವೆ. ಸಿಡಿ ಕೇಸ್ ಆರೋಪಿಗಳು ಒಬ್ಬ ದೇವನಹಳ್ಳಿಯವ, ಇನ್ನೊಬ್ಬ ಶಿರಾದವನು. ಸಿಡಿ ಕೇಸ್ ನಿಂದ ನಾನು ಸಫರ್ ಆಗಿಲ್ಲ, ಇದರಿಂದ ನಾನು ಹೊರಬಂದಿದ್ದೇನೆ. ಬೇರೆಯವರು ಸಫರ್ ಆಗಬಹುದು ಅಷ್ಟೇ. ಸಿಡಿ ಪ್ರಕರಣವನ್ನು ಸಿಬಿಐಗೆ ಕೊಡುತ್ತೇನೆ. ಈ ಬಗ್ಗೆ ಅಮಿತ್ ಶಾ ಜೊತೆ ಮಾತನಾಡಿದ್ದೇನೆ. ಕೇಸ್ ನಲ್ಲಿ ಮಹಾನಾಯಕನ ಕೈವಾಡ ಇರುವ ಸಾಕ್ಷ್ಯವಿದೆ ಎಂದು ಹೇಳಿದ್ದಾರೆ.
ಡಿ.ಕೆ.ಶಿವಕುಮಾರ್ ನನ್ನ ವೈಯಕ್ತಿಕ ಜೀವನ ಹಾಳುಮಾಡಿದ್ದಾರೆ. ಇನ್ಮುಂದೆ ಡಿಕೆಶಿ ವೈಯಕ್ತಿಕ ವಿಚಾರ ಮಾತನಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
*ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಸಿಎಂ ಬೊಮ್ಮಾಯಿ, ನಳೀನ್ ಕುಮಾರ್ ಕಟೀಲ್, ರಮೇಶ್ ಜಾರಕಿಹೊಳಿ ವಿರುದ್ಧ ದೂರು ದಾಖಲು*
https://pragati.taskdun.com/election-malpractice-jp-nadda-cm-basavaraj-bommai-naleen-kumar-kateel-ramesh-jarakiholi-complaint-filed-congress/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ