*ಸಂತ ಮೀರಾ ಆಂಗ್ಲ ಮಾಧ್ಯಮ ಶಾಲೆ ಅನಗೋಳ ಬೆಳಗಾವಿ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: *ಸಂತ ಮೀರಾ ಆಂಗ್ಲ ಮಾಧ್ಯಮ ಶಾಲೆಯ ಮೈದಾನದಲ್ಲಿ ಗುರುವಾರ ಸಡಗರ ಸಂಭ್ರಮದೊಂದಿಗೆ ಧ್ವಜಾರೋಹಣ ಮತ್ತು ಸಂಪೂರ್ಣ ರಾಷ್ಟ್ರಗೀತೆ ಅಭಿಯಾನ ಜರುಗಿತು.
ಮುಖ್ಯ ಅತಿಥಿಗಳಾದ ಅಲಕಾ ತಾಯಿ ಇನಾಮ್ದಾರ್ (ಅಖಿಲ ಭಾರತೀಯ ಸಹ ಕಾರ್ಯವಾಹಿಕಾ ರಾಷ್ಟ್ರ ಸೇವಿಕ ಸಮಿತಿ) ಆಗಮಿಸಿ ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಿದರು.
ದೀಪ ಚಂದ್ರ ಸಿಂಗ್ (ಮಿಲಿಟರಿ ವಿಂಗ್ ಕಮಾಂಡರ್) ಉಪಸ್ಥಿತರಿದ್ದರು. ಗೌರವಾನ್ವಿತ ಅತಿಥಿಗಳಾದ ಕಿಶೋರ್ ಕಾಕಡೆ (ಚೇರ್ಮನ್ ಆಫ್ ಕಾಕಡೆ ಫೌಂಡೇಶನ್) ಪರಮೇಶ್ವರ ಹೆಗಡೆ (ಚೇರ್ಮನ್ ಸ್ಕೂಲ್ ಮ್ಯಾನೇಜ್ ಮೆಂಟ್ ಕಮಿಟಿ), ರಾಘವೇಂದ್ರ ಕುಲಕರ್ಣಿ (ಆಡಳಿತ ಅಧಿಕಾರಿ), ಸುಜಾತ ದಪ್ತರದಾರ್ (ಮುಖ್ಯಾಧ್ಯಾಪಕಿ), ಋತುಜ ಜಾಧವ್ (ಸಹ ಮುಖ್ಯಾಧ್ಯಾಪಕಿ) ಧ್ವಜಾರೋಹಣ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಸಂಪೂರ್ಣ ರಾಷ್ಟ್ರಗೀತೆಯಲ್ಲಿ ಇತರ ಶಾಲೆಗಳಿಂದ ಆಗಮಿಸಿದ ಮಕ್ಕಳು, ಶಾಲೆಯ ಆಡಳಿತ ಮಂಡಳಿ ಸದಸ್ಯರು, ಜನಕಲ್ಯಾಣ ಟ್ರಸ್ಟ್ ಸದಸ್ಯರು, ಸಂತ ಮೀರಾ ಶಾಲೆಯ ಎಲ್ಲ ಮಕ್ಕಳು, ಪಾಲಕರು, ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಅಭೂತಪೂರ್ವ ರಾಷ್ಟ್ರಗೀತೆ ಅಭಿಯಾನಕ್ಕೆ ಸಾಕ್ಷಿಯಾದರು.
ಎಲ್ಲ ಗಣ್ಯರಿಂದ ಸರಸ್ವತಿ, ಓಂಕಾರ, ಭಾರತಮಾತೆಗೆ ಪೂಜೆ ನೆರವೇರಿತು. ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವು ಪ್ರಾರಂಭವಾಯಿತು. ಅತಿಥಿಗಳ ಸ್ವಾಗತ ಮತ್ತು ಪರಿಚಯವನ್ನು ಅದಿತಿ ಹಿರೇಮಠ್ ಮಾಡಿದಳು. ಮಕ್ಕಳು ಸಾಮೂಹಿಕ ದೇಶಭಕ್ತಿ ಗೀತೆಯನ್ನು ಹಾಡಿದರು. ಶಾಲೆ ವಿದ್ಯಾರ್ಥಿಗಳು ಗಣರಾಜ್ಯೋತ್ಸವದ ಬಗ್ಗೆ ಮಾತನಾಡಿದರು.
ಗೌರವಾನ್ವಿತ ಅತಿಥಿಗಳಾದ ಕಿಶೋರ್ ಕಾಕಡೆ, ಅಧ್ಯಕ್ಷತೆ ವಹಿಸಿದ್ದ ಪರಮೇಶ್ವರ್ ಹೆಗಡೆ ಮಾತನಾಡಿದರು. ಎಲ್ಲೆಡೆ ಸಂತಸ ಸ್ವಾಭಿಮಾನ ಭಾರತ ಮಾತೆಗೆ ಜಯ ಘೋಷಣೆಗಳು ಮುಗಿಲು ಮುಟ್ಟುವಂತಿತ್ತು. ವಿವಿಧ ಶಾಲೆಯ ಮಕ್ಕಳು ಪಾಲಕರು ಎಲ್ಲ ಶಿಕ್ಷಕ, ಶಿಕ್ಷಕಿಯರು ಸಂತ ಮೀರಾ ಶಾಲೆಯ ಮಕ್ಕಳು ಮಿಲ್ಟ್ರಿ ಕಮಾಂಡರ್ ಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಒಟ್ಟು 1200 ಕ್ಕೂ ಹೆಚ್ಚು ಜನರು ಭಾಗವಹಿಸಿ 74ನೇ ಗಣರಾಜ್ಯೋತ್ಸವ ಮತ್ತು ರಾಷ್ಟ್ರಗೀತೆ ಅಭಿಯಾನಕ್ಕೆ ಸಾಕ್ಷಿಯಾದರು. ಕಾರ್ಯಕ್ರಮದ ನಿರೂಪಣೆಯನ್ನು ದೃಷ್ಟಿ ದನ್ನಾ ಮಾಡಿದಳು. ಕಾರ್ಯಕ್ರಮದ ವಂದನಾರ್ಪಣೆಯನ್ನು ಸಾಹಿಲ್ ಗುಡೆಕರ್ ಮಾಡಿದನು. ಗಣರಾಜ್ಯೋತ್ಸವ ಬಗ್ಗೆ
ಗೌಶಿಯ ಮಡಿವಾಳ್ ಮತ್ತು 10ನೇ ತರಗತಿಯ ವಿದ್ಯಾರ್ಥಿ ಪೃಥ್ವಿರಾಜ್ ಶಿಂಧೆ ಮಾತನಾಡಿದರು.
ಕಾರ್ಯಕ್ರಮವು ಶಾಂತಿಮಂತ್ರದೊಂದಿಗೆ ಮುಕ್ತಾಯಗೊಂಡಿತು. ಮಕ್ಕಳಿಗೆ ಸಿಹಿತಿಂಡಿ ಹಂಚಲಾಯಿತು. ಕಾರ್ಯಕ್ರಮದ ನಂತರ ಮೇಜರ್ ದೀಪ್ ಚಂದ್ರ ಸಿಂಗ್ ಮತ್ತು ಕಮಾಂಡ್ ಟೀಮ್ ಮಕ್ಕಳೊಂದಿಗೆ ಸಂವಾದ ನಡೆಸಿದರು.
https://pragati.taskdun.com/a-grand-republic-day-celebration-in-belgaum/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ