Kannada NewsKarnataka News

 ಜ.29ರಿಂದ ವೀರರಾಣಿ ಕಿತ್ತೂರು ಚೆನ್ನಮ್ಮ ಮೆಗಾ ನಾಟಕ

ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ :  ರಂಗಾಯಣ ಹಾಗೂ ಚಿಕ್ಕೋಡಿ ಪಟ್ಟಣದ ಇತಿಹಾಸದಲ್ಲಿಯೇ ಮೊಟ್ಟಮೊದಲ ಬಾರಿಗೆ ಆರ್.ಡಿ.ಕಾಲೇಜ ಆವರಣದಲ್ಲಿ ಮೆಗಾ ನಾಟಕವೊಂದನ್ನು ಯಕ್ಸಂಬಾ ಜೊಲ್ಲೆ ಗ್ರೂಪ್ ಆಯೊಜಿಸಿದ್ದು ಪ್ರದರ್ಶನಗೊಳ್ಳಲು ಕೊನೆ ಹಂತದ ಸಿದ್ಧತೆಯಲ್ಲಿದೆ ಎಂದು ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಹೇಳಿದರು.
ಅವರು ಶನಿವಾರ ಪಟ್ಟಣದ ಆರ್.ಡಿ.ಮೈದಾನದ ಆವರಣದಲ್ಲಿ ಕೊನೆಯ ಹಂತದ ಸಿದ್ದತೆಯನ್ನು ಪರಿಶೀಲಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ವೀರರಾಣಿ ಕಿತ್ತೂರು ಚೆನ್ನಮ್ಮಳ ಜೀವನ ಆಧಾರಿತ ಮೆಗಾ ನಾಟಕಕ್ಕಾಗಿ ಈಗಾಗಲೇ ಮೈದಾನದಲ್ಲಿ ಬೃಹತ್ ಕೋಟೆಯ ಸೆಟ್ ರೆಡಿಯಾಗುತ್ತಿದ್ದು ಎಲ್ಲರ ಗಮನ ಸೆಳೆಯುತ್ತಿದೆ.
ಜ 29 ಹಾಗೂ ಜ.30ರಂದು ಎರಡು ದಿನ ಸಂಜೆ 6ರಿಂದ 9ರ ವರೆಗೆ ಸಾವಿರಾರು ಜನರು ವೀಕ್ಷಿಸಲಿರುವ ಈ ನಾಟಕವನ್ನು ಸುಮಾರು 250 ಜನ ಕಲಾವಿದರು ಮೂರು ತಿಂಗಳು ಶ್ರಮವಹಿಸಿ ಕಟ್ಟಿದ್ದಾರೆ. ಅವರ ಶ್ರಮದ ಫಲವಾಗಿ ಅದ್ಭುತವಾದ ಐತಿಹಾಸಿಕ ನಾಟಕವೊಂದು ಸಿದ್ಧವಾಗಿದ್ದು, ಈಗಾಗಲೇ ಕಾಲೇಜು ಮೈದಾನದಲ್ಲಿ ಕಲಾವಿದರು ಸೇರಿದಂತೆ ಆನೆ, ಒಂಟೆ ಹಾಗೂ ಕುದುರೆಗಳು ಪೂರ್ವ ತಯಾರಿ ನಡೆಸಿವೆ.

ಧಾರವಾಡ ರಂಗಾಯಣದ ನಿರ್ದೇಶಕ ರಮೇಶ ಪರವಿನಾಯಕ್, ಪುರಸಭೆ ಅಧ್ಯಕ್ಷ ಪ್ರವೀಣ ಕಾಂಬಳೆ, ಸಂಜಯ ಅರಗೆ, ಆರ್.ಐ.ಖೋತ,ವಿಶ್ವನಾಥ ಕಾಮಗೌಡ,ನಿಪ್ಪಾಣಿ ನಗರಸಭೆ ಅಧ್ಯಕ್ಷ ಪ್ರವೀಣ ಭಾಟಲೆ, ಪ್ರಭು ಡಬ್ಬನ್ನವರ,ಸತೀಶ ನೂಲಿ ಉಪಸ್ಥಿತರಿದ್ದರು.

ಅಂತರರಾಷ್ಟ್ರೀಯ ಗಾಳಿಪಟ ಉತ್ಸವಕ್ಕೆ ಚಾಲನೆ: ಕಣ್ತುಂಬಿಕೊಂಡು ಸಂಭ್ರಮಿಸಿದ ನಿಪ್ಪಾಣಿಗರು

https://pragati.taskdun.com/launch-of-international-kite-festival-nippanis-celebrate-with-their-eyes-wide-open/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button