ಪ್ರಗತಿವಾಹಿನಿ ಸುದ್ದಿ; ವಿಜಯಪುರ: ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ವಿಠಲವಾಡಿ ತಾಂಡಾದಲ್ಲಿ ನಡೆದಿದೆ.
ಪತಿ ಹಾಗೂ ಪತ್ನಿ ನಡುವೆ ಜಗಳವಾಗಿದ್ದು, ನೊಂದ ಮಹಿಳೆ ತನ್ನ ಮೂವರು ಮಕ್ಕಳೊಂದಿಗೆ ನೀರಿನ ಸಂಪ್ ಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಗೀತಾ ರಾಮು ಚೌಹಾಣ್ (32), ಮಕ್ಕಳಾದ ಸೃಷ್ಟಿ (6), ಕಿಶನ್ (3), ಸಮರ್ಥ (4) ಮೃತರು. ಪತಿ ರಾಮು ಹಾಗೂ ಪತ್ನಿ ಗೀತಾ ಇಬ್ಬರು ನಿನ್ನೆ ರಾತ್ರಿ ಜಗಳ ಮಾಡಿಕೊಂಡಿದ್ದರು. ಜಗಳದ ಬಳಿಕ ಗೀತಾ ಮಕ್ಕಳೊಂದಿಗೆ ದುಡುಕಿನ ನಿರ್ಧಾರ ಮಾಡಿದ್ದು, ನೀರಿನ ಸಂಪ್ ಗೆ ಹಾರಿ ಸಾವನ್ನಪ್ಪಿದ್ದಾರೆ.
ಸ್ಥಳಕ್ಕೆ ತಿಕೋಟಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಜ.29ರಿಂದ ವೀರರಾಣಿ ಕಿತ್ತೂರು ಚೆನ್ನಮ್ಮ ಮೆಗಾ ನಾಟಕ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ