Kannada NewsKarnataka NewsLatest

ಅಭಿವೃದ್ಧಿ ವಂಚಿತ ಖಾನಾಪುರಕ್ಕೆ ಕೇಂದ್ರದ ವಿಶೇಷ ಪ್ಯಾಕೇಜ್: ಕೇಂದ್ರ ಗೃಹ ಸಚಿವ ಅಮಿತ್ ಶಾ ಬಳಿ ಕೋರಿಕೆ ಇಟ್ಟ ಡಾ.ಸೋನಾಲಿ ಸರ್ನೋಬತ್

ಪ್ರಗತಿವಾಹಿನಿ ಸುದ್ದಿ, ಖಾನಾಪುರ  :  ಅರಣ್ಯದಿಂದ ಸುತ್ತುವರಿದಿರುವ, ಅಭಿವೃದ್ಧಿ ವಂಚಿತವಾಗಿರುವ ಮಲೆನಾಡಿನ ಸೆರಗು ಖಾನಾಪುರ ತಾಲೂಕಿನ ಸಮಸ್ಯೆಗಳು ಇದೇ ಮೊದಲ ಬಾರಿಗೆ ಕೇಂದ್ರ ಸರಕಾರದ ಗಮನಕ್ಕೆ ಹೋಗಿದೆ.
ಖಾನಾಪುರ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯೂ ಆಗಿರುವ ಸಾಮಾಜಿಕ ಕಾರ್ಯಕರ್ತೆ ಡಾ.ಸೋನಾಲಿ ಸರ್ನೋಬತ್ ಅವರು ಬೆಳಗಾವಿಗೆ ಆಗಮಿಸಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಬಳಿ  ಖಾನಾಪುರ ಅಭಿವೃದ್ಧಿಗಾಗಿ ಕೇಂದ್ರ ಸರಕಾರದಿಂದ ವಿಶೇಷ ಪ್ಯಾಕೇಜ್ ಕೋರಿದ್ದಾರೆ.

 

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ  ಉಪಸ್ಥಿತಿಯಲ್ಲಿ ಎಂ. ಕೆ. ಹುಬ್ಬಳ್ಳಿಯಲ್ಲಿ ಸಾವಿರಾರು ಬಿಜೆಪಿ ಕಾರ್ಯಕರ್ತರ ಸಮ್ಮುಖದಲ್ಲಿ ವಿಜಯ ಸಂಕಲ್ಪ ಯಾತ್ರೆ ನಡೆಯಿತು.
ಈ ವಿಜಯ ಸಂಕಲ್ಪ ಯಾತ್ರೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮಾಯಿ, ಮಾಜಿ ಮುಖ್ಯಮಂತ್ರಿಗಳಾದ ಬಿ. ಎಸ್. ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಬಿಜೆಪಿ ರಾಜ್ಯಾಧ್ಯಕ್ಷ ನವೀನ್ ಕುಮಾರ್ ಕಟೀಲ್ ಸೇರಿದಂತೆ ಹಲವರು ಭಾಗವಹಿಸಿದ್ದರು.
ಈ ವೇಳೆ ಖಾನಾಪುರ ಬಿಜೆಪಿ ಮುಖಂಡರೂ, ಸಾಮಾಜಿಕ ಕಾರ್ಯಕರ್ತರೂ ಆಗಿರುವ ಡಾ. ಸೋನಾಲಿ ಸರ್ನೋಬತ್ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದಾರೆ. ಖಾನಾಪುರ ಕ್ಷೇತ್ರದಲ್ಲಿ ಹಲವಾರು ಅಭಿವೃದ್ಧಿ ಕಾಮಗಾರಿಗಳಾಗಬೇಕಿದ್ದು, ಕೇಂದ್ರ ಸರಕಾರದಿಂದ ವಿಶೇಷ ಪ್ಯಾಕೇಜ್ ಒಂದನ್ನು ನೀಡಬೇಕು ಎಂದು ಮನವಿ ಮಾಡಿದ್ದಾರೆ. ಆಗಬೇಕಿರುವ ಅಭಿವೃದ್ಧಿ ಕಾಮಗಾರಿಗಳ ಪಟ್ಟಿಯೊಂದನ್ನು ಅಮಿತ್ ಶಾ ಅವರಿಗೆ ನೀಡಿದರು. ಅವುಗಳನ್ನು ಗಮನಿಸಿದ ಅಮಿತ್ ಶಾ ಈ ಬಗ್ಗೆ ಖಂಡಿತ ಗಮನಹರಿಸುವುದಾಗಿ ನಗುಮುಖದಿಂದಲೇ ಭರವಸೆ ನೀಡಿದರು.
ಇದೇ ಮೊದಲ ಬಾರಿಗೆ, ತೀರಾ ಹಿಂದುಳಿದ ಖಾನಾಪುರ ಕ್ಷೇತ್ರದ ಸಮಸ್ಯೆಗಳನ್ನು ಕೇಂದ್ರ ಸರಕಾರದ ಗಮನಕ್ಕೆ ತಂದ ಕೀರ್ತಿ ಡಾ.ಸೋನಾಲಿ ಸರ್ನೋಬತ್ ಅವರಿಗೆ ಸಂದಿದೆ. ಅಮಿತ್ ಶಾ ಅವರೂ ಪೂರಕವಾಗಿ ಸ್ಪಂದಿಸಿರುವುದರಿಂದ ಮುಂದಿನ ದಿನಗಳಲ್ಲಿ ಕೇಂದ್ರದ ಪ್ಯಾಕೇಜ್ ನಿರೀಕ್ಷೆ ಮಾಡುವಂತಾಗಿದೆ.
ಈ  ಸಂದರ್ಭದಲ್ಲಿ ಡಾ. ಸರ್ನೋಬತ್ ಅವರು ಅಮಿತ್ ಶಾ ಅವರಿಗೆ  ತಾವು ಬರೆದಿರುವ “ಸ್ಮಾರ್ಟ್ ಸಿಟಿ ಈಸ್ ಬೀಯಿಂಗ್ ಸ್ಮಾರ್ಟ್” ಮತ್ತು “ಡಯಟ್ ಆಡ್ ಮಿ”  ಪುಸ್ತಕಗಳನ್ನು ನೀಡಿದರು.

https://pragati.taskdun.com/amit-shahs-arrival-on-saturday-4-assembly-constituencies-target-more-than-75-thousand-people-are-expected/

 

75 ವರ್ಷದ ನಂತರ ಈ ಹಳ್ಳಿಗರಿಗೆ ಸ್ವಾತಂತ್ರ್ಯ ಬಂತು! Thanks to Dr.Sonali Sarnobat

https://pragati.taskdun.com/after-75-years-these-villagers-got-freedom-thanks-to-dr-sonali-sarnobat/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button