Latest

ವೃದ್ದಾಪ್ಯ ವೇತನ, ಅಂಗವಿಕಲ ಮಾಸಾಶನ ದುಪ್ಪಟ್ಟು

ಪ್ರಗತಿವಾಹಿನಿ ಸುದ್ದಿ, ರಾಯಚೂರು :

ವೃದ್ದಾಪ್ಯ ವೇತನವನ್ನು ಒಂದು ಸಾವಿರ ರೂ.ಗಳಿಂದ ಎರಡು ಸಾವಿರಕ್ಕೆ ಹಾಗೂ ಅಂಗವಿಕಲರ ಮಾಸಾಶನವನ್ನು 2500 ರೂ.ಗೆ ಏರಿಸಲಾಗುವುದು ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ರಾಯಚೂರಿನ ಕರೆಗುಡ್ಡ ಗ್ರಾಮದಲ್ಲಿ ಗ್ರಾಮ ವಾಸ್ತವ್ಯದ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಕುಮಾರಸ್ವಾಮಿ ಅವರು ಈ ಘೋಷಣೆ ನೀಡಿದ್ದು, ಮುಂದಿನ ವರ್ಷದಿಂದ ಇದು ಜಾರಿಗೆ ಬರಲಿದೆ ಎಂದಿದ್ದಾರೆ.

 

Home add -Advt

ಈ ಮೊದಲು ಹಿರಿಯ ನಾಗರಿಕರಿಗೆ ಇದ್ದ 600ಮಾಸಾಶನವನ್ನು‌1 ಸಾವಿರಕ್ಕೆ ಹೆಚ್ಚಿಸಿದ್ದೆ. ಈಗ ಅದನ್ನು 2 ಸಾವಿರಕ್ಕೆ ಹಾಗೂ ವಿಕಲಚೇತನರೂ ನೆಮ್ಮದಿಯಿಂದ ಇರಬೇಕು ಎಂಬ ದೃಷ್ಟಿಯಿಂದ ಅವರ ಮಾಸಾಶನವನ್ನು 2500ಕ್ಕೆ ಹೆಚ್ಚಿಸಲು ನಿರ್ಧರಿಸಿದ್ದೇನೆ ಎಂದರು.

ಎನ್ ಪಿಎಸ್ ನೌಕಕರ ನೋವು ನನಗೆ ಅರ್ಥವಾಗಿದ್ದು, ಎನ್ ಪಿಎಸ್ ರದ್ದು ಮಾಡಬೇಕೇ ಬೇಡವೇ ಎಂಬುದಕ್ಕೆ ಸಂಬಂಧಿಸಿದಂತೆ ಸಮಿತಿ ರಚಿಸಲಾಗಿದ್ದು, ವರದಿ ಬಂದ ತಕ್ಷಣ ತಮ್ಮನ್ನು ಕರೆದು ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.

ಕೃಷಿ ಅಭಿವೃದ್ಧಿಗೆ ಸರಕಾರ ಎಲ್ಲ ಕ್ರಮಗಳನ್ನು ಕೈಗೊಳ್ಳಲಿದ್ದು, ಕೃಷಿಕರು ಸುಸ್ಥಿರ ಬದುಕು ರೂಪಿಸಿಕೊಳ್ಳುವುದಕ್ಕೆ ಮುಂದಾಗಬೇಕು ಎಂದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button