Latest

*ಭೀಕರ ಭೂಕಂಪ; ಸಾವಿನ ಸಂಖ್ಯೆ 8000ಕ್ಕೆ ಏರಿಕೆ*

ಪ್ರಗತಿವಾಹಿನಿ ಸುದ್ದಿ; ಟರ್ಕಿ: ಟರ್ಕಿ ಹಾಗೂ ಸಿರಿಯಾದಲ್ಲಿ ಸಂಭವಿಸಿದ ಭೀಕರ ಭೂಕಂಪದಲ್ಲಿ ಸಾವಿನ ಸಂಖ್ಯೆ 8,000ಕ್ಕೆ ಏರಿಕೆಯಾಗಿದೆ ಎಂದು ತಿಳಿದುಬಂದಿದೆ.

100 ವರ್ಷಗಳಲ್ಲಿಯೇ ಕಂಡು ಕೇಳರಿಯದ ಭೂಕಂಪಕ್ಕೆ ಟರ್ಕಿ, ಸಿರಿಯಾ ನಲುಗಿದೆ. ಟರ್ಕಿಯಲ್ಲಿ 11 ಸಾವಿರ ಕಟ್ಟಡಗಳು ನೆಲಸಮವಾಗಿವೆ. ಭೂಕಂಪದಿಂದ ಟರ್ಕಿಯೊಂದರಲ್ಲಿಯೇ 6 ಸಾವಿರ ಜನರು ಸಾವನ್ನಪ್ಪಿದ್ದಾರೆ. ಸಿರಿಯಾದಲ್ಲಿ ಸಾವಿನ ಸಂಖ್ಯೆ 2ಸಾವಿರಕ್ಕೇರಿದೆ. ಟರ್ಕಿಯಲ್ಲಿ ಗಾಯಾಳುಗಳ ಸಂಖ್ಯೆ 32 ಸಾವಿರಕ್ಕೂ ಹೆಚ್ಚಿದ್ದು, ಹಲವರ ಸ್ಥಿತಿ ಗಂಭೀರವಾಗಿದೆ. ಭೂಕಂಪದಲ್ಲಿ ಕಣ್ಮರೆಯಾಗಿರುವವರ ಸಂಖ್ಯೆ ಇನ್ನೂ ತಿಳಿದುಬಂದಿಲ್ಲ.

ವಿಶ್ವ ಆರೋಗ್ಯ ಸಂಸ್ಥೆ ನೀಡಿರುವ ಅಂದಾಜಿನ ಪ್ರಕಾರ ಟರ್ಕಿ ಭೂಕಂಪದಲ್ಲಿ ಮೃತರ ಸಂಖ್ಯೆ 20,000 ತಲುಪಬಹುದು. ಇನ್ನು ಅವಶೇಷಗಳಡಿ, 1.8 ಲಕ್ಷ ಜನರು ಸಿಲುಕಿಕೊಂಡಿರುವ ಸಾಧ್ಯತೆ ಇದೆ. ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆಯಾದರೂ ಪ್ರತಿಕೂಲ ಹವಾಮನದ ಕಾರಣದಿಂದಾಗಿ ರಕ್ಷಣಾಕಾರ್ಯಾಚರಣೆ ವಿಳಂಬವಾಗುತ್ತಿದೆ.

ಟರ್ಕಿಯಲ್ಲಿ ವಿಪರೀತ ಚಳಿ ಇದ್ದರೆ ಸಿರಿಯಾದಲ್ಲಿ ಭಾರಿ ಮಳೆಯಾಗುತ್ತಿದ್ದು, ರಕ್ಷಣ ಕಾರ್ಯಾಚರಾಣೆಗೆ ಅಡ್ಡಿಯಾಗಿದೆ.

*ರಸ್ತೆಯಲ್ಲಿ ಹೋಗುತ್ತಿದ್ದ ಯುವತಿಯನ್ನು ಹಾಡಹಗಲೇ ಎಳೆದೊಯ್ದು ಅತ್ಯಾಚಾರಕ್ಕೆ ಯತ್ನ*

https://pragati.taskdun.com/rape-attemptbangaloregirl/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button