ಪ್ರಗತಿವಾಹಿನಿ ಸುದ್ದಿ, ಹೊಸದಿಲ್ಲಿ: ಚಲನಚಿತ್ರದಲ್ಲಿ ನಟಿಸುವ ತೆವಲಿಗೆ ಬಿದ್ದು 82 ದಿನಗಳಿಂದ ಕೆಲಸಕ್ಕೆ ಚಕ್ಕರ್ ಹೊಡೆದಿದ್ದ ಐಎಎಸ್ ಅಧಿಕಾರಿಯೊಬ್ಬರನ್ನು ಉತ್ತರ ಪ್ರದೇಶ ಸರಕಾರ ಅಮಾನತುಗೊಳಿಸಿದೆ.
‘ದೆಹಲಿ ಕ್ರೈಂ 2’ ಚಿತ್ರದಲ್ಲಿ ನಟಿಸಿದ್ದ ಉತ್ತರ ಪ್ರದೇಶ ಸರ್ಕಾರ ಐಎಎಸ್ ಅಧಿಕಾರಿ ಅಭಿಷೇಕ್ ಸಿಂಗ್ ಅಮಾನತುಗೊಂಡವರು.
ಸಿನೆಮಾ ನಟನೆಯ ಶೋಕಿ ಬೆಳೆಸಿಕೊಂಡ 2011 ರ ಬ್ಯಾಚ್ ಯುಪಿ ಕೇಡರ್ ಐಎಎಸ್ ಅಧಿಕಾರಿ ಅಭಿಷೇಕ್ ಅವರಿಗೆ ‘ದೆಹಲಿ ಕ್ರೈಂ-2’ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು. ಆದರೆ ಇತ್ತ ಸರಕಾರಿ ಕರ್ತವ್ಯ ಕೂಡ ನಿಭಾಯಿಸಬೇಕಿದ್ದ ಅಭಿಷೇಕ್ ತಮ್ಮ ಅನುಪಸ್ಥಿತಿಯ ಬಗ್ಗೆ ನೇಮಕಾತಿ ಮತ್ತು ಸಿಬ್ಬಂದಿ ಇಲಾಖೆಗೆ ಮಾಹಿತಿ ನೀಡಿರಲಿಲ್ಲ.
ಕಳೆದ ನವೆಂಬರ್‌ನಲ್ಲಿ ನಡೆದ ಗುಜರಾತ್ ಚುನಾವಣೆಯಲ್ಲಿ ಸಿಂಗ್ ಅವರನ್ನು ವೀಕ್ಷಕರನ್ನಾಗಿ ನೇಮಿಸಲಾಯಿತು. ಆದರೆ ಅವರು ತಮ್ಮ ಹೆಸರನ್ನು ಹೊಂದಿರುವ ವಾಹನದೊಂದಿಗೆ ಸ್ವಂತ ಚಿತ್ರಗಳನ್ನು ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಅವರನ್ನು ನವೆಂಬರ್ 18 ರಂದು ತೆಗೆದುಹಾಕಿತು.ನಂತರ ಅವರು ಯುಪಿ ಸರ್ಕಾರಕ್ಕೆ ಹಿಂತಿರುಗಿರುವ ಬಗ್ಗೆ ವರದಿ ಮಾಡಿಲ್ಲ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ