Latest

*ಧ್ವನಿ ಇಲ್ಲದವರ ಸಂಕಷ್ಟ ನಿವಾರಣೆಗೆ ಬಜೆಟ್ ನಲ್ಲಿ ಕಾರ್ಯಕ್ರಮ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*

ಪ್ರಗತಿವಾಹಿನಿ ಸುದ್ದಿ; ದಾವಣಗೆರೆ: ಸಹಾಯ ಮತ್ತು ಧ್ವನಿ ಇಲ್ಲದವರ ಸಂಕಷ್ಟ ನಿವಾರಣೆಗೆ ಕೆಲವು ಕಾರ್ಯಕ್ರಮಗಳನ್ನು ಈ ಬಾರಿಯ ಬಜೆಟ್ ನಲ್ಲಿ ರೂಪಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ದಾವಣಗೆರೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ದುಡಿಯುವ ವರ್ಗ, ರೈತರು, ಕಾರ್ಮಿಕರು, ದೀನದಲಿತರು, ಹೆಣ್ಣುಮಕ್ಕಳನ್ನು ಗಮನದಲ್ಲಿಟ್ಟುಕೊಂಡು ಬಜೆಟ್ ರೂಪಿಸಲಾಗುವುದು. ಆರ್ಥಿಕ ವಲಯದಲ್ಲಿ ಸುಧಾರಣೆ, ಸಾಮಾಜಿಕ ವಲಯದಲ್ಲಿ ಇನ್ನಷ್ಟು ಸಾಮಾಜಿಕವಾಗಿ ಎಲ್ಲಾ ಸಮುದಾಯಗಳ ಆರೋಗ್ಯ, ಶಿಕ್ಷಣಕ್ಕೆ ಒತ್ತು, ಅಭಿವೃದ್ಧಿಯಲ್ಲಿ ಎಲ್ಲಾ ವರ್ಗಗಳನ್ನು ಒಳಗೊಂಡಿರುವ ಉದ್ಯೋಗ ಸೃಷ್ಟಿಗೆ ಹಲವಾರು ಯೋಜನೆಗಳನ್ನು ರೂಪಿಸಲಾಗುತ್ತಿದೆ ಎಂದರು.

ಸಚಿವ ಸಂಪುಟ ವಿಸ್ತರಣೆ
ಸಚಿವ ಸಂಪುಟ ವಿಸ್ತರಣೆ ಬಗ್ಗೆ ಪ್ರತಿಕ್ರಿಯೆ ನೀಡಿ ಸೂಕ್ತ ಸಮಯದಲ್ಲಿ ಸೂಕ್ತ ನಿರ್ಣಯ ಕೈಗೊಳ್ಳಲಾಗುವುದು ಎಂದರು.

*ಬಿಜೆಪಿ ಶಾಸಕರೇ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಪತ್ರ ಬರೆದಿದ್ದಾರೆ; ಸರ್ಕಾರದಲ್ಲಿ ಕೇವಲ ಲಂಚ, ಬಿ ರಿಪೋರ್ಟ್ ಗಳದ್ದೇ ಸದ್ದು ; ಡಿ.ಕೆ.ಶಿವಕುಮಾರ್ ವಾಗ್ದಾಳಿ*

Home add -Advt

https://pragati.taskdun.com/d-k-shivakumarprajadhwanihosadurga/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button