Latest

*ಉಗ್ರರನ್ನು ಕರೆತಂದು ಟಿಕೆಟ್ ಕೊಡ್ತಿದ್ದಾರೆ, ನಾಳೆ ಅವರಿಗೂ ಭದ್ರತೆ ಕೊಡಬೇಕಾದ ಸ್ಥಿತಿ; SDPI ವಿರುದ್ಧ ಆರ್.ಅಶೋಕ್ ಆಕ್ರೋಶ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಎಸ್ ಡಿ ಪಿ ಐ ಸಂಘಟನೆ ಪುತ್ತೂರು ಕ್ಷೇತ್ರದಿಂದ ಎನ್ ಐ ಎ ಬಂಧನದಲ್ಲಿರುವ ಶಾಫಿ ಬೆಳ್ಳಾರೆಯನ್ನು ಅಭ್ಯರ್ಥಿಯನ್ನಾಗಿ ಘೋಷಿಸಿರುವ ಬೆನ್ನಲ್ಲೇ ಕಿಡಿ ಕಾರಿರುವ ಕಂದಾಯ ಸಚಿವ ಆರ್.ಅಶೋಕ್, ಮೊದಲು ಎಸ್ ಡಿಪಿಐ ಸಂಘಟನೆ ಬ್ಯಾನ್ ಮಾಡಬೇಕು ಎಂದಿದ್ದಾರೆ.

ಪಿಎಫ್ ಐ ರೀತಿ ಎಸ್ ಡಿ ಪಿ ಐ ಸಂಘಟನೆ ನಿಷೇಧಿಸಬೇಕು. ಈ ಬಗ್ಗೆ ಸಿಎಂ ಬಸವರಾಜ್ ಬೊಮ್ಮಾಯಿ ಜೊತೆ ಚರ್ಚಿಸುತ್ತೇನೆ. ಎಸ್ ಡಿ ಪಿ ಐ ಅವರು ಉಗ್ರರನ್ನು ಕರೆ ತಂದು ಟಿಕೆಟ್ ಕೊಡ್ತಿದ್ದಾರೆ. ಆಗ ಅವರಿಗೂ ಭದ್ರತೆ ಕೊಡಬೇಕಾಗುತ್ತದೆ. ಬಳಿಕ ಅವರನ್ನು ಬಿಡುಗಡೆ ಮಾಡುವಂತೆ ಕೋರ್ಟ್ ಗೆ ಹೋಗ್ತಾರೆ ಎಂದು ವಾಗ್ದಾಳಿ ನಡೆಸಿದರು.

ಪ್ರವೀಣ್ ನೆಟ್ಟಾರು ಹತ್ಯೆಯಲ್ಲಿ ಭಾಗಿಯಾಗಿದ್ದವನನ್ನು ಚುನಾವಣಾ ಅಭ್ಯರ್ಥಿಯನ್ನಾಗಿ ಘೋಷಿಸಿದ್ದಾರೆ. ಎಸ್ ಡಿ ಪಿ ಐ ದೇಶ ವಿರೋಧಿ ಚಟುವಟಿಕೆಯ ಒಂದು ಅಂಗ ಸಂಘಟನೆ ಎಂದು ಕಿಡಿಕಾರಿದರು.

*NIA ಬಂಧನದಲ್ಲಿರುವ ಶಾಫಿ ಬೆಳ್ಳಾರೆಯನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದ SDPI*

https://pragati.taskdun.com/vidhanasabha-electionsdpicandidatehafi-bellare/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button