Latest

*ಭೀಕರ ಭೂಕಂಪ; ಸಾವಿನ ಸಂಖ್ಯೆ 37,000ಕ್ಕೆ ಏರಿಕೆ*

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಟರ್ಕಿ ಹಾಗೂ ಸಿರಿಯಾದಲ್ಲಿ ಸಂಭವಿಸಿರುವ ಭೀಕರ ಭೂಕಂಪದಲ್ಲಿ ಸಾವನ್ನಪ್ಪಿದವರ ಸಂಖ್ಯೆ 37,000 ಗಡಿ ದಾಟಿದೆ. ಟರ್ಕಿಯೊಂದರಲ್ಲಿಯೇ 32,000 ಜನರು ಮೃತಪಟ್ಟಿದ್ದಾರೆ.

ಟರ್ಕಿ ಹಾಗೂ ಸಿರಿಯಾದಲ್ಲಿ ಇನ್ನೂ ಕಟ್ಟಡಗಳ ಅವಶೇಷಗಳ ತೆರವು ಕಾರ್ಯಾಚರಣೆ ಮುಂದುವರೆದಿದೆ. ಸಾವಿನ ಸಂಖ್ಯೆ ಕ್ಷಣ ಕ್ಷಣಕ್ಕೂ ಏರಿಕೆಯಾಗುತ್ತಿದೆ.

ಟರ್ಕಿಯಲ್ಲಿ ಫೆಬ್ರವರಿ 6ರಂದು ಒಂದೇ ದಿನ ನಾಲ್ಕು ಭೂಕಂಪ ಸಂಭವಿಸಿತ್ತು. ಅದರಲ್ಲಿ ಮೊದಲೆರಡು ಭೂಕಂಪದ ತೀವ್ರತೆ 7.5 ಕ್ಕೂ ಹೆಚ್ಚು ದಾಖಲಾಗಿತ್ತು. ಭೂಕಂಪದ ಸ್ಥಳದಿಂದ 100 ಕಿ.ಮೀ ವರೆಗಿನ ಪ್ರದೇಶ ಸಂಪೂರ್ಣ ಸ್ಮಶಾನವಾಗಿದ್ದು, ಎಲ್ಲಾ ಮನೆ, ಕಟ್ಟದಗಳು ನೆಲಸಮಗೊಂಡಿವೆ. ಕಳೆದ 8 ದಶಕಗಳಲ್ಲೇ ಟರ್ಕಿಯಲ್ಲಿ ಸಂಭವಿಸಿದ ಅತಿ ಭೀಕರ ಭೂಕಂಪ ಇದಾಗಿದೆ. ಭೂಕಂಪ ಪೀಡಿತ ಉಭಯ ದೇಶಗಳಿಗೂ ಭಾರತ ನೆರವಿನ ಹಸ್ತ ಚಾಚಿದೆ.

*ಬಿಜೆಪಿ ಮುಖಂಡ ನೆಟ್ಟಾರು ಹತ್ಯೆ ಕೇಸ್; ಜೈಲಿನಲ್ಲಿದ್ದ 14 ಆರೋಪಿಗಳ ಸ್ಥಳಾಂತರ*

https://pragati.taskdun.com/bjp-leader-praveen-nettarumurder-case14-accued-shift/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button