Latest

7ನೇ ವೇತನ ಆಯೋಗದ ವಿಷಯದಲ್ಲಿ ಜೆ.ಪಿ.ನಡ್ಡಾ ಹೇಳಿದ್ದೇನು?

 ಪ್ರಗತಿವಾಹಿನಿ ಸುದ್ದಿ, ಶಿಲ್ಲಾಂಗ್: 7ನೇ ವೇತನ ಆಯೋಗ ಜಾರಿಗೆ ಸಂಬಂಧಿಸಿದಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಪ್ರತಿಕ್ರಿಯಿಸಿದ್ದಾರೆ.

ಕೇಂದ್ರದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಲ್ಲಿ 7ನೇ ವೇತನ ಆಯೋಗ ಜಾರಿ ಮಾಡಿ, ಸಕಾಲದಲ್ಲಿ ಸರಕಾರಿ ನೌಕರರ ವೇತನ ನೀಡಲಾಗುವುದು ಅವರು ಭರವಸೆ ನೀಡಿದ್ದಾರೆ.

ಮೇಘಾಲಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಅವರು ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿದರು.

ಪ್ರಣಾಳಿಕೆಯಲ್ಲಿ ಹಲವು ಭರವಸೆಗಳನ್ನು ನೀಡಿದ್ದು ಮುಖ್ಯವಾಗಿ ಪಿಎಂ-ಕಿಸಾನ್ ಸಮ್ಮಾನ್ ನಿಧಿಯಡಿ ರೈತರಿಗೆ ನೀಡುವ ಸಹಾಯಧನವನ್ನು ವಾರ್ಷಿಕವಾಗಿ 2 ಸಾವಿರ ರೂ.ಗಳಷ್ಟು ಹೆಚ್ಚಿಸಲಾಗುವುದು, ನವಜಾತ ಹೆಣ್ಣು ಮಗುವಿಗೆ 50 ಸಾವಿರ ರೂ.  ಬಾಂಡ್ ನೀಡುವ ಹಾಗೂ ಶಿಶುವಿಹಾರದಿಂದ ಸ್ನಾತಕೋತ್ತರ ಪದವಿವರೆಗೆ ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಭರವಸೆಯನ್ನು ಪ್ರಣಾಳಿಕೆಯಲ್ಲಿ ನೀಡಿದೆ.

ವಿಧವೆಯರ, ಒಂಟಿ ಮಹಿಳೆಯರ ಸಬಲೀಕರಣಕ್ಕಾಗಿ ವಾರ್ಷಿಕ 24ಸಾವಿರ ರೂ. ಆರ್ಥಿಕ  ಬೆಂಬಲ, ಉಜ್ವಲಾ ಯೋಜನೆಯ ಫಲಾನುಭವಿಗಳಿಗೆ ವಾರ್ಷಿಕ 2 ಉಚಿತ ಎಲ್‌ಪಿಜಿ ಸಿಲಿಂಡರ್ ನೀಡುವುದಾಗಿ ನಡ್ಡಾ ಭರವಸೆಯಿತ್ತರು.

7ನೇ ವೇತನ ಆಯೋಗ; ಶೀಘ್ರವೇ ಲಭಿಸಲಿದೆ ಸಿಹಿ ಸುದ್ದಿ

https://pragati.taskdun.com/7th-pay-commission-good-news-coming-soon/

*ಸಚಿವ ಅಶ್ವತ್ಥನಾರಾಯಣ ವಿರುದ್ಧ ಡಿ.ಕೆ.ಶಿವಕುಮಾರ್ ಕೆಂಡಾಮಂಡಲ*

https://pragati.taskdun.com/d-k-shivakumarreactionashwaththanarayana/

*ಟಿಪ್ಪು ಮುಗಿಸಿದಂತೆ ಸಿದ್ದರಾಮಯ್ಯರನ್ನು ಮುಗಿಸಿಬಿಡಿ ಎಂದರೆ ಏನರ್ಥ?; ಮಾಜಿ ಸಿಎಂ ರೋಷಾಗ್ನಿ*

https://pragati.taskdun.com/siddaramaihashwaththanarayanareaction/

 

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button