Latest

ಕಾಂಗ್ರೆಸ್ ಪಕ್ಷಕ್ಕೆ ಕಾರ್ಯಕರ್ತರು, ಮತದಾರರೇ ಜೀವಾಳ: ಡಿಕೆಶಿ

ಪ್ರಗತಿವಾಹಿನಿ ಸುದ್ದಿ; ಪಿರಿಯಾಪಟ್ಟಣ:ನಮಗೆ ಪಕ್ಷದ ಕಾರ್ಯಕರ್ತರು ಹಾಗೂ ಮತದಾರರೇ ಜೀವಾಳ. ಕಾರ್ಯಕರ್ತರು, ಮತದಾರರು ಇಲ್ಲ ಎಂದರೆ ನಾವು  ನಾಯಕರಾಗಿರಲು ಸಾಧ್ಯವಿಲ್ಲ. ನೀವು ಮನೆ ಮನೆಗೂ ಹೋಗಿ ಜನರ ಮನಗೆದ್ದು ಮತಹಾಕಿಸಿದಾಗ ನಾವು ನಾಯಕರಾಗುತ್ತೇವೆ” ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.

ಪಿರಿಯಾಪಟ್ಟಣ ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿದ ಅವರು, “ಕಳೆದ ಬಾರಿ ಕಾಂಗ್ರೆಸ್ ಉತ್ತಮ ಆಡಳಿತ ನೀಡಿದ್ದರೂ ಈ ಕ್ಷೇತ್ರದಲ್ಲಿ ನಮ್ಮನ್ನು ಸೋಲಿಸಲಾಗಿತ್ತು. ಯಾಕೆ ಎಂಬ ಚರ್ಚೆ ಈಗ ಬೇಡ. ನಮ್ಮ ಸರ್ಕಾರ 80 ಕ್ಷೇತ್ರಗಳಲ್ಲಿ ಗೆದ್ದಿದ್ದರೂ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಜೆಡಿಎಸ್ ಗೆ ಬೇಷರತ್ ಬೆಂಬಲ ನೀಡಿ ಸರ್ಕಾರ ನಡೆಸಲು ಅವಕಾಶ ನೀಡಿದೆವು. ಆದರೆ ಅವರು ಈ ಅಧಿಕಾರ  ಉಳಿಸಿಕೊಂಡು ಹೋಗಲು ವಿಫಲರಾದರು. ನಂತರ ಬಂದ ಈ ಸರ್ಕಾರ ಭ್ರಷ್ಟ ಸರ್ಕಾರ ಎಂದು ಕುಖ್ಯಾತಿ ಪಡೆದಿದೆ” ಎಂದು ಜರಿದರು.

“ಈ ಸರ್ಕಾರ ಭ್ರಷ್ಟ ಸರ್ಕಾರ ಎಂದು ನಾವು ಹಣೆಪಟ್ಟಿ ನೀಡಿಲ್ಲ. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಈ ಸರ್ಕಾರದಲ್ಲಿ ಏನೇ ಕೆಲಸ ಆಗಬೇಕಾದರೂ 40% ಕಮಿಷನ್ ನೀಡಬೇಕು ಎಂದು ಪ್ರಧಾನಿಗೆ ಪತ್ರ ಬರೆದರು. ಇನ್ನು ಗುತ್ತಿಗೆದಾರ ಸಂತೋಷ್ ಪಾಟೀಲ್ ಮಂತ್ರಿಯೊಬ್ಬ 40% ಲಂಚ ಕೇಳುತ್ತಿದ್ದಾರೆ ಎಂದು ಅವರ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆ ಮೂಲಕ ಲಂಚಕ್ಕೊಬ್ಬ, ಮಂಚಕ್ಕೊಬ್ಬ ಅಧಿಕಾರ ಕಳೆದುಕೊಂಡರು. ಈ ಭ್ರಷ್ಟ ಸರ್ಕಾರ ಅಧಿಕಾರಕ್ಕೆ ಬರಲು ಯಾರು ಕಾರಣ?” ಎಂದು ಡಿಕೆಶಿ ಪ್ರಶ್ನಿಸಿದರು.

“ರಾಜ್ಯದ ಬಜೆಟ್ ಕೇವಲ ಒಂದು ಪ್ರಣಾಳಿಕೆ ಇದನ್ನು ಜಾರಿಗೆ ತರುವುದು ಸಾಧ್ಯವಿಲ್ಲ. ಹೀಗಾಗಿ ಈ ಬಜೆಟ್ ಮಂಡಿಸುವ ಮುನ್ನ ಕಳೆದ ವರ್ಷ ನೀವು ಮಂಡಿಸಿದ ಬಜೆಟ್ ನಲ್ಲಿ ಘೋಷಿಸಿದ ಭರವಸೆಗಳಲ್ಲಿ ಶೇ.50ರಷ್ಟು ಅನುದಾನ ಖರ್ಚು ಮಾಡಿಲ್ಲ. ಇನ್ನು 104 ಸೀಟು ಗೆಲ್ಲುವಾಗ ನೀವು ಕೊಟ್ಟ ಪ್ರಣಾಳಿಕೆಯಲ್ಲಿ 600 ಭರವಸೆ ನೀಡಿದ್ದು, ಅದರಲ್ಲಿ ಕೇವಲ 50 ಭರವಸೆ ಮಾತ್ರ ಈಡೇರಿಸಿದದ್ದೀರಿ. ಹೀಗಾಗಿ ಉಳಿದ 550 ಭರವಸೆ ಯಾಕೆ ಈಡೇರಿಸಿಲ್ಲ? ಈ ಎರಡು ವಿಚಾರವಾಗಿ ರಾಜ್ಯದ ಜನರಿಗೆ ಉತ್ತರ ನೀಡಲಿ” ಎಂದು ಸವಾಲೆಸೆದರು.

“ಬಿಜೆಪಿಯವರು ಯಡಿಯೂರಪ್ಪನವರ ಕಣ್ಣಲ್ಲಿ ನೀರು ಹಾಕಿಸಿ ಅಧಿಕಾರದಿಂದ ಕೆಳಗೆ ಇಳಿಸಿದ್ದು ಯಾಕೆ? ಅಮಿತ್ ಶಾ ಅವರು ಆರಂಭದಲ್ಲಿ ಬೊಮ್ಮಾಯಿ ಅವರ ನೇತೃತ್ವದಲ್ಲಿ ಚುನಾವಣೆ ಮಾಡುತ್ತೇವೆ ಎಂದು ಹೇಳಿ, ಈಗ ಪ್ರಧಾನಿ ಮೇದಿ ಅವರ ನೇತೃತ್ವದಲ್ಲಿ ಚುನಾವಣೆ ಎಂದು ಹೇಳಿದ್ದಾರೆ. ಬೊಮ್ಮಾಯಿ ಅವರ ಸರ್ಕಾರದ ಬಗ್ಗೆ ಅವರದೇ ಪಕ್ಷದ ನಾಯಕರಾದ ಯತ್ನಾಳ್, ಗೂಳಿಹಟ್ಟಿ ಶೇಖರ್, ವಿಶ್ವನಾಥ್, ಅವರು ಏನೆಲ್ಲಾ ಮಾತನಾಡುತ್ತಿದ್ದಾರೆ, ದೂರುತ್ತಿದ್ದಾರೆ ಎಂಬುದು ಇಡೀ ರಾಜ್ಯದ ಜನತೆ ನೋಡುತ್ತಿದೆ. ವಿಶ್ವನಾಥ್ ಅವರು ದಳ, ಬಿಜೆಪಿಗೆ ಹೋಗಿದ್ದಾರೆ. ಈಗ ಅವರು ಕಾಂಗ್ರೆಸ್ ಪಕ್ಷದ ಸದಸ್ಯನಾಗಿ ಸಾಯಬೇಕು ಎಂದು ಆಸೆ ವ್ಯಕ್ತಪಡಿಸಿದ್ದಾರೆ. ನಮ್ಮ ನಾಯಕರೆಲ್ಲ ಅವರ ಮನೆಗೆ ಹೋಗಿ ಭೇಟಿ ಮಾಡಿ ಬಂದಿದ್ದೇವೆ. ಶೀಘ್ರದಲ್ಲಿ ಅವರನ್ನು ಕಾಂಗ್ರೆಸ್ ಪಕ್ಷ ಸೇರಿಸಿಕೊಳ್ಳುವ ಮುಹೂರ್ತ ನಿಗದಿ ಮಾಡುತ್ತೇವೆ” ಎಂದರು.

ರಾಜ್ಯ ಹಾಗೂ ಸ್ಥಳೀಯ ಕಾಂಗ್ರೆಸ್ ಮುಖಂಡರು ಈ ಸಂದರ್ಭದಲ್ಲಿ ಹಾಜರಿದ್ದರು.

*ಕರ್ನಾಟಕ ಬಜೆಟ್ ಗೆ ಕ್ಷಣಗಣನೆ; ಹಣಕಾಸು ಇಲಾಖೆ ಅಧಿಕಾರಿಗಳಿಂದ ಸಿಎಂಗೆ ಬಜೆಟ್ ಪ್ರತಿ ಹಸ್ತಾಂತರ*

https://pragati.taskdun.com/karnataka-buidget-2023cm-basavaraj-bommaividhanasoudha/

*ಬಜೆಟ್ ಮಂಡನೆಗೂ ಮುನ್ನ ಸಿಎಂ ಬೊಮ್ಮಾಯಿ ದೇವಸ್ಥಾನಗಳ ಭೇಟಿ; ವಿಶೇಷ ಪೂಜೆ*

https://pragati.taskdun.com/karnataka-buidget-2023cm-basavaraj-bommaitemple-run/

ಅಸ್ವಾಭಾವಿಕ ಮರಣ: ಅವಲಂಬಿತರಿಗೆ ತಾತ್ಕಾಲಿಕ ಪರಿಹಾರಕ್ಕೆ ಪೂರಕ ದಾಖಲಾತಿ ಸಲ್ಲಿಸಲು ಸೂಚನೆ

https://pragati.taskdun.com/unnatural-death-intimation-to-dependents-to-file-supplemental-filing-for-provisional-relief/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button