ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಸಿಎಂ ಬಸವರಾಜ ಬೊಮ್ಮಾಯಿಯವರು ಮಂಡಿಸಿರುವ ಬಜೆಟ್ ಸ್ವಾಗತಾರ್ಹವೆನಿಸಿದೆ. ನಾಡಿನ ಅಭಿವೃದ್ಧಿಗೆ ಪೂರಕವಾದ ಹಾಗೂ ಜನಸ್ನೇಹಿಯಾದ ಐತಿಹಾಸಿಕ ಬಜೆಟ್ನ್ನು ಮಂಡಿಸಿದ್ದಾರೆ ಎಂದು ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ.ಪ್ರಭಾಕರ ಕೋರೆಯವರು ಹೇಳಿದರು.
ಯುವಸ್ನೇಹಿ ಎಂಬ ಯೋಜನೆಯಡಿ ತಲಾ ೨ ಸಾವಿರ ರೂ.ಗಳ ಆರ್ಥಿಕ ನೆರವನ್ನು ಯುವಜನತೆ ನೀಡುತ್ತಿರುವುದು, ಗ್ರಾಮೀಣ ವಿದ್ಯಾರ್ಥಿಗಳಿಗಾಗಿ ಹಳ್ಳಿ ಮತ್ತು ಯೋಜನೆಯಡಿಯಲ್ಲಿ ಹೆಚ್ಚಿನ ಒತ್ತು ನೀಡಿರುವುದು, ಶಾಲಾ ಕಾಲೇಜಿನ ವಿದ್ಯಾರ್ಥಿನಿಯರಿಗೆ ಉಚಿತ ಬಸ್ ಪಾಸ್ ಘೋಷಿಸಿರುವುದು ಬಜೆಟ್ನ ಮಹತ್ವದ ಸಂಗತಿಗಳಾಗಿವೆ ಎಂದ ಡಾ.ಕೋರೆಯವರು, ಸಿಎಂ ಅವರು ಕಳಸಾ ಮತ್ತು ಬಂಡೂರಿ ನಾಲಾ ತಿರುವು ಯೋಜನೆಗಳಿಗೆ ೧,೦೦೦ ಕೋಟಿ ರೂ.ವನ್ನು ಮೀಸಲಿಟ್ಟಿರುವುದು ಸ್ವಾಗತಾರ್ಹವೆನಿಸಿದೆ.
ಅದರಲ್ಲಿಯೂ ಶಿಕ್ಷಣಕ್ಕಾಗಿ ೩೭,೯೬೦ ಕೋಟಿ ಕೊಡುಗೆ ನೀಡಿರುವುದು ಮತ್ತೊಂದು ವಿಶೇಷವೆನಿಸಿದೆ. ರೈಲ್ವೆ ಯೋಜನೆಗಳಿಗೆ ಅತಿಹೆಚ್ಚು ಅಂದರೆ ೭,೫೬೧ ಕೋಟಿ ರೂ. ಒದಗಿಸಿದೆ. ಆರೋಗ್ಯ ಕೇಂದ್ರಗಳ ಉನ್ನತೀಕರಣ, ನಮ್ಮ ಕ್ಲಿನಿಕ್ ಮತ್ತಿತರ ಆರೋಗ್ಯ ಕಾರ್ಯಕ್ರಮಗಳಿಗೆ ಹೆಚ್ಚಿನ ಆದ್ಯತೆ ನೀಡಿರುವುದು ಮಹತ್ವದ್ದಾಗಿದೆ.
ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗ ಸೃಷ್ಟಿಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಸ್ವಸ್ಥ, ಸುಶಿಕ್ಷಿತ, ಪ್ರಜ್ಞಾವಂತ ಪೀಳಿಗೆಯ ನಿರ್ಮಾಣಕ್ಕೆ ಸಿಎಂ ಬೊಮ್ಮಾಯಿ ಸರ್ಕಾರವು ಮುನ್ನುಡಿ ಬರೆದಿದೆ. ಅದರಲ್ಲಿಯೂ ಗಡಿನಾಡು ಪ್ರದೇಶದಲ್ಲಿ ಕನ್ನಡ ಭಾಷೆ, ಕಲೆ, ಶಿಕ್ಷಣ ಮತ್ತು ಸಂಸ್ಕೃತಿಯ ವಿಕಾಸಕ್ಕೆ ಪ್ರಾಶಸ್ತ್ಯವನ್ನು ನೀಡಿ ಗಡಿ ಪ್ರದೇಶದ ರಸ್ತೆಗಳ ಹಾಗೂ ಸಮಗ್ರ ವಿವಿಧ ಇಲಾಖೆಗಳ ಮುಖಾಂತರ ೧೫೦ ಕೋಟಿ ರೂ. ಒದಗಿಸಿರುವುದು ಅಭಿನಂದನಾರ್ಹವೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
*ಹಣಕಾಸಿನ ನಿರ್ವಹಣೆಯಲ್ಲಿ ದಕ್ಷತೆ: 402 ಕೋಟಿ ರೂ.ಗಳ ರಾಜಸ್ವ ಹೆಚ್ಚಳದ ಬಜೆಟ್: ಸಿಎಂ ಬಸವರಾಜ ಬೊಮ್ಮಾಯಿ*
https://pragati.taskdun.com/basavaraj-bommaikarnataka-budgetpressmeet/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ