ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಐಎ ಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿರುವ ಐಪಿಎಸ್ ಅಧಿಕಾರಿ ಡಿ.ರೂಪಾ, ಸತ್ಯವನ್ನೇ ಟ್ವೀಟ್ ಮಾಡಿದ್ದೇನೆ. ಮಹಿಳಾ ಐಎ ಎಸ್ ಅಧಿಕಾರಿ ತನ್ನ ಫೋಟೋಗಳನ್ನು ಪುರುಷ ಅಧಿಕಾರಿಗಳಿಗೆ ಕಳುಹಿಸುವುದು ಯಾಕೆ? ಏನಿದರ ಅರ್ಥ? ಸರ್ಕಾರ ತನಿಖೆ ಮಾಡಲಿ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಡಿ.ರೂಪಾ, ನನ್ನ ಬಳಿ ಇರುವ ಎಲ್ಲಾ ದಾಖಲೆ, ಫೋಟೋಗಳನ್ನು ಸರ್ಕಾರಕ್ಕೆ ಕೊಡುತ್ತೇನೆ. ಕಳೆದ ಒಂದು ತಿಂಗಳಿಂದ ನನ್ನ ಗಮನಕ್ಕೆ ಬಂದಿದೆ. ಹಾಗಾಗಿ ಈಗ ಹೇಳುತ್ತಿದ್ದೇನೆ. ಇನ್ನು ಶಾಸಕರ ಜೊತೆ ರಾಜೀ ಸಂಧಾನ ಎಂದು ಮೀಡಿಯಾಗಳಲ್ಲಿ ಬರುತ್ತಿದೆ. ಹಾಗಾಗಿ ಸಂಧಾನ ಯಾಕೆ ಎಂಬುದನ್ನು ಪ್ರಶ್ನಿಸುತ್ತಿದ್ದಿದ್ದೇನೆ ಎಂದರು.
ಐಎ ಎಸ್ ಅಧಿಕಾರಿಯಾಗಿ ರಾಜಕಾರಣಿಗಳ ಜತೆ, ಶಾಸಕರ ಜತೆ ರಾಜೀ ಸಂಧಾನಕ್ಕೆ ಯಾಕೆ ಹೋಗಬೇಕು? ಸರ್ಕಾರದ ನಿಯಮದಲ್ಲಿಯೇ ಇದು ಇರಲ್ಲ. ದೇಶದ ಇತಿಹಾಸದಲ್ಲಿಯೇ ಮೊದಲ ಬಾರಿ ರಾಜಕಾರಣಿ ಬಳಿ ಸಂಧಾನಕ್ಕೆ ಹೋಗಿದ್ದಾರೆ. ಇದು ತುಂಬಾ ಖೇದ ಅನಿಸುತ್ತಿದೆ. ರೋಹಿಣಿ ಯಾವ ವಿಷಯವನ್ನು ಮುಚ್ಚಿಡುತ್ತಿದ್ದಾರೆ? ಭ್ರಷ್ಟಾಚಾರವೋ? ಬೇರೆ ಇನ್ನೇನನ್ನೋ? ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ಕೋವಿಡ್ ಸಂದರ್ಭದಲ್ಲಿ ಜನ ಸಾಯುತ್ತಿದ್ದರೆ ಸಾರ್ವಜನಿಕರ ಹಣದಲ್ಲಿ ಸ್ವಿಮ್ಮಿಂಗ್ ಪೂಲ್ ಕಟ್ಟಿಸಿದ್ರು, ಪಾರಂಪರಿಕ ಕಟ್ಟಡ ನವೀಕರಣ ಮಾಡಿದರು ಸಾರ್ವಜನಿಕ ತೆರಿಗೆ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ. ಇಂತಹ ಹಲವು ಆರೋಪ ಅವರ ವಿರುದ್ಧವಿದೆ. ಪ್ರತಿ ಬಾರಿ ಅವರನ್ನು ರಕ್ಷಿಸುತ್ತಿರುವುದು ಯಾರು? ಈ ಬಗ್ಗೆಯೂ ತನಿಖೆಯಾಗಲಿ.
ಇದರಲ್ಲಿ ಯಾವುದೇ ವೈಯಕ್ತಿಕವಾದ ವಿಚಾರವಿಲ್ಲ. ಈ ಹಿಂದೆ ನಾನು ಹಾಗೂ ನನ್ನ ಪತಿ ಮನೀಶ್ ಮೌದ್ಗಿಲ್ ರೋಹಿಣೆಗೆ ತುಂಬಾ ಸಹಾಯ ಮಾಡಿದ್ದೆವು. ಆಗೆಲ್ಲ ಸರಿಯಾಗಿಯೇ ಇದ್ದ ಅವರು ಬರ ಬರುತ್ತ ತೀರಾ ಬದಲಾದರು ಬೆಳೆಯುತ್ತಾ ಹೋದಂತೆ ಬೇರೆ ರೀತಿ ಬದಲಾವಣೆಗಳು ಗಮನಕ್ಕೆ ಬಂದಿದ್ದಕ್ಕೆ ಇದು ಸರಿಯಲ್ಲ ಎಂಬುದನ್ನು ಹೇಳುತ್ತಿದ್ದೇನೆ. ಈಗಾಗಲೇ ಸರ್ಕಾರದ ಗಮನಕ್ಕೂ ತಂದಿದ್ದೇನೆ. ಈಗ ರಿಲೀಸ್ ಮಾಡಿರುವುದು ಕೇವಲ ಸ್ಯಾಂಪಲ್ ಮಾತ್ರ, ಇಂತಹ ಹಲವು ಬೇರೆಯರೀತಿ ಫೋಟೋಗಳೂ ಇವೆ. ಎಲ್ಲಾ ದಾಖಲೆಗಳನ್ನು ಸರ್ಕಾರಕ್ಕೆ ಕೊಡುತ್ತೇನೆ. ಸರ್ಕಾರ ಈಗಲಾದರೂ ತನಿಖೆಗೆ ಮುಂದಾಗಲಿದೆಯೇ ನೋಡೋಣ ಎಂದು ಗುಡುಗಿದ್ದಾರೆ.
*ರೋಹಿಣಿ ಸಿಂಧೂರಿ ಖಾಸಗಿ ಫೋಟೋ ವೈರಲ್ ಮಾಡಿದ ಡಿ.ರೂಪಾ*
https://pragati.taskdun.com/rohini-sindhuri-d-roopaphoto-viral/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ