LatestUncategorized

*ಡಿ.ರೂಪಾ ವಿರುದ್ಧ ರೋಹಿಣಿ ಸಿಂಧೂರಿ ಪತಿ ಸುಧೀರ್ ರೆಡ್ದಿ ಆಕ್ರೋಶ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಐಪಿಎಸ್ ಅಧಿಕಾರಿ ಡಿ.ರೂಪಾ ನಮ್ಮ ಕುಟುಂಬದ ವಿರುದ್ಧ ಅನಗತ್ಯವಾಗಿ ಆರೋಪ ಮಾಡುತ್ತಿದ್ದಾರೆ. ಹೊಟ್ಟೆ ಉರಿಯಿಂದಾಗಿ ಈ ರೀತಿ ಆರೋಪಗಳನ್ನು ಮಾಡುವುದು ಸರಿಯಲ್ಲ ಎಂದು ಐಎ ಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಪತಿ ಸುಧೀರ್ ರೆಡ್ಡಿ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಸುಧೀರ್ ರೆಡ್ಡಿ, ತಮಗಿಂತ 10 ವರ್ಷ ಜ್ಯೂನಿಯರ್ ಇಷ್ಟು ಒಳ್ಳೆ ರೀತಿ ಬೆಳೆದಿದ್ದಾರೆ ಎಂಬ ಜಲಸ್ ನಿಂದಾಗಿ ಆರೋಪ ಮಾಡುತ್ತಿದ್ದಾರೆ. ರೂಪಾ ಅನ್ನೋರು ಯಾರು? ನಾನು ಯಾವತ್ತೂ ಮೀಡಿಯಾದ ಮುಂದೆ ಬಂದವನಲ್ಲ. ಆದರೆ ಒಬ್ಬ ಐಪಿಎಸ್ ಅಧಿಕಾರಿ, ನಮ್ಮ ಪರ್ಸನಲ್ ವಿಚಾರಗಳನ್ನು, ಕುಟುಂಬದ ಬಗ್ಗೆ ಆರೋಪಗಳನ್ನು ಮಾಡುತ್ತಿರುವುದರಿಂದ ಮಾತನಾಡುತ್ತಿದ್ದೇನೆ. ರೋಹಿಣಿಗೆ ಯಾವುದೇ ಪ್ರಚಾರ ಬೇಡ. ಆಕೆ ಯಾವುದೇ ಸಾಮಾಜಿಕ ಜಾಲತಾಣಗಳನ್ನು ಬಳಸುವುದೂ ಇಲ್ಲ. ರೂಪಾ ಅವರು ಹೇಳುತ್ತಿರುವ ಮೂವರು ಅಧಿಕಾರಿಗಳು ಯಾರು? ಹೆಸರು ಬಹಿರಂಗ ಪಡಿಸಲಿ ಎಂದಿದ್ದಾರೆ.

Related Articles

ಮೂವರು ಐಎ ಎಸ್ ಅಧಿಕಾರಿಗಳಿಗೆ ರೋಹಿಣಿ ಫೋಟೋ ಕಳುಹಿಸಿದ್ದಾರೆ ಎನ್ನುತ್ತಿದ್ದಾರೆ. ಆ ಮೂವರು ಅಧಿಕಾರಿಗಳ ಹೆಸರು ಹೇಳಲಿ. ಒಬ್ಬ ಐಎ ಎಸ್ ಅಧಿಕಾರಿಯ ಫೋಟೋಗಳನ್ನು ಈ ರೀತಿ ವೈಯಕ್ತಿಕವಾಗಿ ರಿಲೀಸ್ ಮಾಡುವುದು ಸರಿಯಲ್ಲ, ರೂಪಾ ಅವರು ಬಿಡುಗಡೆ ಮಾಡಿರುವ ಫೋಟೋಗಳು ಈಗಿನದ್ದಲ್ಲ. ನಾನು ಒಬ್ಬ ಸಾಫ್ಟ್ ವೇರ್ ಇಂಜಿನಿಯರ್. ರೂಪಾ ಅವರು ಹ್ಯಾಕ್ ಮಾಡಿ ಫೋಟೋ ತೆಗೆದುಕೊಂಡಿರಬಹುದು ಐಪಿ ಎಸ್ ಅಧಿಕಾರಿಗೆ ಈ ಫೋಟೊಗಳು ಯಾರು ಕೊಟ್ಟಿದ್ದು? ಔಟ್ ಆಫ್ ಕಾಂಟೆಕ್ಟ್ ನಲ್ಲಿರೋ ಫೋಟೋ ತೆಗೆದು ರಿಲೀಸ್ ಮಾಡಿ ಆರೋಪಿಸುವುದು ಯಾಕೆ? ಅವರ ಪರ್ಸನಲ್ ಅಜೆಂಡಾ ಏನು? ಎಂದು ಪ್ರಶ್ನಿಸಿದ್ದಾರೆ.

ನಾನು ಹುಟ್ಟಿದ್ದು ಇಲ್ಲಿಯೇ. ನಾನೊಬ್ಬ ಕನ್ನಡಿಗ. ಆಂಧ್ರದಲ್ಲಿ ನಮ್ಮ ಸಂಬಂಧಿಗಳು ಯಾರೂ ಇಲ್ಲ. ನಮ್ಮ ತಂದೆ ಕಾಲದಿಂದಲೂ ರಿಯಲ್ ಎಸ್ಟೇಟ್ ಮಾಡುತ್ತಿದ್ದೆವು. ಆದರೆ ಅವರು ಈಗ ಇಲ್ಲ. ನಮ್ಮ ಕುಟುಂಬ ಹಣಕಾಸಿನ ವಿಚಾರದಲ್ಲಿ ತುಂಬಾ ಉತ್ತಮರಾಗಿದ್ದೇವೆ. ನಾವು ಯಾವುದೇ ಆಸ್ತಿ, ಜಮೀನನ್ನು ಈಗ ಖರೀದಿಸಿದ್ದಲ್ಲ, ತುಂಬ ಹಿಂದಿನಿಂದಲೂ ಬಂದಿರುವುದು. ರೂಪಾ ಮಾಡುತ್ತಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ. ರೂಪಾ ಅವರ ವಿರುದ್ಧ ಪೊಲೀಸರಿಗೆ ದೂರು ನೀಡುತ್ತೇನೆ ಎಂದು ಹೇಳಿದ್ದಾರೆ.

ಇದೇ ವೇಳೆ ಡಿ.ಕೆ.ರವಿ ವಿಚಾರವಾಗಿಯೂ ರೋಹಿಣಿ ಮೇಲೆ ಆರೋಪ ಮಾಡಿದ್ದಾರೆ. ಡಿ.ಕೆ.ರವಿ ಸಾವಿನ ಬಗ್ಗೆ ಈ ಹಿಂದೆಯೇ ವರದಿ ಬಂದಿದೆ. ಹೀಗಿರುವಾಗ ಈಗ ಆರೋಪ ಮಾಡುವುದು ಸರಿಯಲ್ಲ. ಡಿ.ಕೆ.ರವಿ ಹೋಗಿ ಹಲವು ವರ್ಷವಾಗಿದೆ. ಸತ್ತ ವ್ಯಕ್ತಿಯ ಬಗ್ಗೆ ಆರೋಪ ಮಾಡುವುದು ಸರಿಯಲ್ಲ. ಸತ್ತ ವ್ಯಕ್ತಿ ಬಗ್ಗೆ ನಾನು ಮಾತನಾಡುವುದಿಲ್ಲ ಎಂದು ತಿಳಿಸಿದರು.
*BJP ಉಸ್ತುವಾರಿ ಅರುಣ್ ಸಿಂಗ್ ಆಸ್ಪತ್ರೆಗೆ ದಾಖಲು*

https://pragati.taskdun.com/arun-singhillhospitalizedmangalore/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button