Kannada NewsLatest

*ವಿದ್ಯಾರ್ಥಿ ಸಮೂಹದಿಂದ ಡಾ.ಯಲ್ಲಪ್ಪ ಹಿಮ್ಮಡಿ ಅವರಿಗೆ ಅಭಿನಂದನೆ*

ಪ್ರಗತಿವಾಹಿನಿ ಸುದ್ದಿ; ರಾಯಬಾಗ: ರಾಯಬಾಗಎಸ್.ಪಿ. ಮಂಡಳ ಪದವಿ ಕಾಲೇಜಿನಕನ್ನಡ ಪ್ರಾಧ್ಯಾಪಕ ಸೇವೆಯಿಂದ ನಿವೃತ್ತಿ ಹೊಂದಿದ ಚಿಂತಕ, ಹಿರಿಯ ಸಾಹಿತಿಡಾ.ಯಲ್ಲಪ್ಪ ಹಿಮ್ಮಡಿ ಅವರಿಗೆ ಅವರ ವಿದ್ಯಾರ್ಥಿ ಸಮೂಹದಿಂದ ರಾಯಬಾಗದ ಮಹಾವೀರ ಭವನದಲ್ಲಿ ವೈಚಾರಿಕ ಚಿಂತನ ಪ್ರಧಾನ ಅಭಿನಂದನಾ ಸಮಾರಂಭಜರುಗಿತು.

ಡಾ. ಯಲ್ಲಪ್ಪ ಹಿಮ್ಮಡಿ ಹೆಸರಿನಲ್ಲಿರಚನೆಗೊಂಡ ವೇದಿಕೆ ಅಧಿಕೃತ ನೋಂದಣಿಯ ಮೂಲಕ ನಿರಂತರ ಜನಪರ, ವೈಚಾರಿಕ ಕಾರ್ಯಕ್ರಮಗಳನ್ನು ನಡೆಸಲಾಗುವುದು ಹಾಗೂ ಪ್ರತಿ ವರ್ಷ ಹಿಮ್ಮಡಿ ಹೆಸರಿನಲ್ಲಿರಾಜ್ಯ ಮಟ್ಟದ ಪ್ರಶಸ್ತಿಯೊಂದನ್ನು ನೀಡಲಾಗುವುದು ಎಂದು ಅಭಿನಂದನಾ ಸಮಿತಿ ನಿರ್ಣಯತೆಗೆದುಕೊಂಡಿದೆ.

ಸಂಜೆ ಹಿಮ್ಮಡಿ ದಂಪತಿಗಳಿಗೆ ಅಭಿನಂದನೆಯ ಪ್ರಧಾನ ಸಮಾರಂಭಜರುಗಿತು.ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಖ್ಯಾತ ಇತಿಹಾಸ ತಜ್ಞ ಡಾ. ಶಿವರುದ್ರ ಕಲ್ಲೋಳಿಕರ ಅವರು, ಡಾ. ಹಿಮ್ಮಡಿಅವರು ಪ್ರಖರ ವೈಚಾರಿಕೆ ಬರಹಗಾರ ಮಾತ್ರವಾಗಿರದೆ ದಿಟ್ಟ ಹೋರಾಟಗಾರರು. ತಮ್ಮ ವೈಯಕ್ತಿಅಭಿವೃದ್ಧಿಯನ್ನು ಬದಿಗೊತ್ತಿ ಸಾಮಾಜಿಕ ಸೇವೆ ಹಾಗೂ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಯಲ್ಲಿ ಸಂತಸಕಂಡವರು. ಬಡತನದಲ್ಲಿ ಬೆಂದುಎಲ್ಲ ಬಗೆಯ ಕಷ್ಟಗಳನ್ನು ಎದುರಿಸುತ್ತ ಮನುಷ್ಯತ್ವದ ಪರವಾಗಿ ತುಡಿಯುತ್ತ ಬಂದವರು. ಇವರ ಆತ್ಮಚರಿತ್ರೆ ಹೊರಬಂದರೆ ಒಂದು ಐತಿಹಾಸಿಕ ದಾಖಲೆಯಾಗುತ್ತದೆಎಂದು ಬಣ್ಣಿಸಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಖ್ಯಾತ ಸಾಹಿತಿಡಾ.ರಾಜಪ್ಪ ದಳವಾಯಿ ಅವರು, ಡಾ. ಹಿಮ್ಮಡಿಯವರ ವೈಚಾರಿಕಗರಡಿಯಲ್ಲಿರೂಪಿತಗೊಂಡ ವ್ಯಕ್ತಿತ್ವಗಳ ಒಂದುಗೂಡಿ ಜನಪರ ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಗುರುವಿನ ಪರಂಪರೆ ಕೊಂಡಯ್ಯಬೇಕು. ಬೌದ್ಧಿಕತೆಗೆ ಹೆಸರಾದ ರಾಯಬಾಗದ ನೆಲದಲ್ಲಿ ಹಿಮ್ಮಡಿ ಅವರು ಸಾರ್ಥಕವಾದ ಕೆಲಸ ಕಾರ್ಯಗಳನ್ನು ನಿರ್ವಹಿಸಿದ್ದಾರೆ ಎಂದು ಶ್ಲಾಘೀಸಿದರು.

ಸಮಾರಂಭದ ದಿವ್ಯ ಸಾನಿಧ್ಯ ವಹಿಸಿದ್ದ, ಬಸವಬೆಳವಿಯ ವಿರಕ್ತಮಠದ ಶರಣಬಸವ ದೇವರು, ನೋವುಂಡ ಒಡಲಾಳದಿಂದ ಮೂಡಿದ ಬರಹ ನಿಜವಾದ ಸಾಹಿತ್ಯವಾಗುತ್ತದೆ. ಹಿಮ್ಮಡಿ ಅವರ ಬದುಕು ಬರಹ ಪ್ರಬುದ್ಧವಾಗಿದ್ದ, ಮನುಷ್ಯತ್ವದ ಪರವಾಗಿ ಮೀಡಿತ ಹೊಂದಿದೆ ಎಂದರು. ಅಭಿನಂದನಾ ಸಮಿತಿಯ ಅಧ್ಯಕ್ಷ ಸದಾಶಿವ ದೇಶಿಂಗೆ ಅಧ್ಯಕ್ಷತೆ ವಹಿಸಿದ್ದರು.

ವೈ.ಬಿ. ಹಿಮ್ಮಡಿ ಅವರನ್ನು ಕೇಂದ್ರವನ್ನಾಗಿರಿಸಿಕೊಂಡು ಇಡೀ ದಿನ ಅರ್ಥಪೂರ್ಣ ವೈಚಾರಿಕ ಸರಣಿ ಉಪನ್ಯಾಸ ಕಾರ್ಯಕ್ರಮಗಳು ಜರುಗಿದವು. ಡಾ.ಕೆ.ಎನ್. ದೊಡ್ಡಮನಿ, ಡಾ.ವಿಜಯ ಮಾಲಾ ನಾಗನೂರಿ, ರಾಜು ಸನದಿ, ಈರಣ್ಣ ಬೆಟಗೇರಿ, ಸುಪ್ರಿಯಾ ಕಾಂಬಳೆ, ಅನಿತಾ ಲಂಗೋಟಿಡಾ. ಹಿಮ್ಮಡಿ ಅವರ ವ್ಯಕ್ತಿತ್ವ ಮತ್ತು ಅವರ ಸಾಹಿತ್ಯದ ಬಗ್ಗೆ ವಿಚಾರಗಳನ್ನು ಮಂಡಿಸಿದರು. ಹಿಮ್ಮಡಿ ಅವರ ಗುರುಗಳಾದ ಬೆಳಗಾವಿಯ ಬಿ.ಆರ್. ನಾಯ್ಕರ, ಸಂಕೇಶ್ವರದ ಎಲ್.ವಿ. ಪಾಟೀಲ ಹಾಗೂ ಹಿಮ್ಮಡಿ ಅವರ ವಿದ್ಯಾರ್ಥಿಗಳಾದ ಡಾ.ಮಂಜುಳಾ ಸವದತ್ತಿ ಮತ್ತು ಕು.ಪಿರ್ದೋಶ್ ಮುಶ್ರಫ್‌ ಅವರಿಗೆ ಗೌರವ ಸಮರ್ಪಣೆ ನಡೆಸಲಾಯಿತು. ಪ್ರತಿಭಾ ಮಾರಾಪುರೆ, ಮನೋಹರ ಕಾಂಬಳೆ, ಸರಸ್ವತಿ ಆಲಖನೂರ ಕಾರ್ಯಕ್ರಮ ನಿರ್ವಹಿಸಿದರು.ಶಶಿಕಾಂತ ತಾರದಾಳೆ, ರಸೂಲ್ ಮೋಮಿನ್, ಶ್ರೀಧರ ಕಿಚಡೆ ಸ್ವಾಗತಿಸಿದರು.ಡಾ. ಅರುಣ ಕಾಂಬಳೆ, ಸಾಗರಜಂಡೆನ್ನವರ, ಶಂಕರಕೊಡತೆ ವಂದಿಸಿದರು.

*ಹೆಣ್ಣು ಮಕ್ಕಳಿಗೆ ಹಾಗೂ ಶಾಲಾ ವಿದ್ಯಾರ್ಥಿನಿಯರಿಗೆ ಉಚಿತ ಬಸ್ ಪಾಸ್ ವ್ಯವಸ್ಥೆಗೆ ಸಿಎಂ ಬೊಮ್ಮಾಯಿ ಸೂಚನೆ*

https://pragati.taskdun.com/ksrtcfree-bus-passambari-utsava-buscm-basavaraj-bommai/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button