ಪ್ರಗತಿವಾಹಿನಿ ಸುದ್ದಿ, ಮಧುಗಿರಿ: ವಿದ್ಯಾರ್ಥಿನಿ ಮೊಬೈಲ್ ಗೆ ಕಿಡಿಗೇಡಿತನದ ಸಂದೇಶಗಳನ್ನು ರವಾನಿಸುತ್ತಿದ್ದ ಶಿಕ್ಷಕರೊಬ್ಬರನ್ನು ಅಮಾನತುಗೊಳಿಸಲಾಗಿದೆ.
ತಾಲೂಕಿನ ದೊಡ್ಡೇರಿ ಹೋಬಳಿಯ ಕೊಟಗಾರಲಹಳ್ಳಿ ಸರಕಾರಿ ಪ್ರೌಢಶಾಲೆಯ ಸಹಶಿಕ್ಷಕ ಪಿ. ನಾಗಭೂಷಣ ಅವರನ್ನು ಅಮಾನತುಗೊಳಿಸಿ ಡಿಡಿಪಿಐ ಕೆ.ಜಿ. ರಂಗಯ್ಯ ಆದೇಶ ಹೊರಡಿಸಿದ್ದಾರೆ.
ನಿರ್ದಿಷ್ಟ ವಿದ್ಯಾರ್ಥಿನಿಗಾಗಿ ತಲೆಕೆಡಿಸಿಕೊಂಡಂತೆ ವರ್ತಿಸುತ್ತಿದ್ದ ಶಿಕ್ಷಕ ಆಕೆ ಪರೀಕ್ಷೆಯಲ್ಲಿ ತಾನೇ ಉತ್ತರ ಬರೆದುಕೊಟ್ಟು ಓಲೈಸಲು ಪ್ರಯತ್ನಿಸುತ್ತಿದ್ದರು. ಇದಲ್ಲದೆ ವಿದ್ಯಾರ್ಥಿನಿಯ ಮೊಬೈಲ್ ಗೆ ಅಸಭ್ಯ ಸಂದೇಶಗಳನ್ನು ಕಳುಹಿಸುತ್ತಿದ್ದರು.
ಈ ಕಾರಣಕ್ಕೆ ಶಾಲಾ ಮುಖ್ಯಶಿಕ್ಷಕರು ನಾಗಭೂಷಣ ಅವರಿಗೆ ಕಾರಣ ಕೇಳಿ ನೋಟಿಸ್ ಜಾರಿಗೊಳಿಸಿದ್ದರು. ಇದಕ್ಕೆ ಪ್ರತಿಯಾಗಿ ತಪ್ಪೊಪ್ಪಿಗೆ ಪತ್ರ ಬರೆದುಕೊಟ್ಟಿರುವ ನಾಗಭೂಷಣ ವರ್ತನೆಗಳನ್ನು ತಿದ್ದಿಕೊಳ್ಳುವ ಭರವಸೆ ನೀಡಿದ್ದಾರೆನ್ನಲಾಗಿದೆ.
ಆದರೆ ಶಿಕ್ಷಕನ ಈ ವರ್ತನೆಗಿಂದ ಮುಂದೆಯೂ ತೊಂದರೆಗಳಾಗುವ ಸಾಧ್ಯತೆಗಳಿರುವ ಹಿನ್ನೆಲೆಯಲ್ಲಿ ಪ್ರಕರಣದ ವಿಚಾರಣೆಯನ್ನು ಕಾಯ್ದಿರಿಸಿದ ಡಿಡಿಪಿಐ ಶಿಕ್ಷಕನನ್ನು ಅಮಾನತುಗೊಳಿಸಿದ್ದಾರೆ.
ಟರ್ಕಿಯಲ್ಲಿ ಭಾರತೀಯ ಸೇನಾ ಕಾರ್ಯಕ್ಕೆ ಭರಪೂರ ಪ್ರಶಂಸೆ
https://pragati.taskdun.com/indian-armys-performance-in-turkey-is-much-appreciated/
ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಪುತ್ರನಿಂದ ಜೀವ ಬೆದರಿಕೆ, ಪೋಲಿಸ್ ರಿಗೆ ಪತ್ರ ಬರೆದ ಸಂಜಯ್ ರಾವುತ್
https://pragati.taskdun.com/chief-minister-eknath-shindes-son-threatened-his-life-sanjay-raut-wrote-a-letter-to-the-police/
ಬೆಳಗಾವಿ ಜಿಲ್ಲೆಯಲ್ಲಿ 5 ದಿನ ಸಿದ್ದರಾಮಯ್ಯ ಪ್ರಜಾಧ್ವನಿ ಯಾತ್ರೆ
https://pragati.taskdun.com/5-days-siddaramaiah-prajadhwani-yatra-in-belgaum-district/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ