ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಬಜೆಟ್ ಮೇಲಿನ ಚರ್ಚೆಗೆ ಉತ್ತರ ನೀಡಿರುವ ಸಿಎಂ ಬಸವರಾಜ್ ಬೊಮ್ಮಾಯಿ, ನಾನು ಮಂಡಿಸಿದ ಬಜೆಟ್ ಎರಡು ರೀತಿಯಲ್ಲಿದೆ. ಆರ್ಥಿಕ ಅಭಿವೃದ್ಧಿ, ಸಾಮಾಜಿಕ ಮೂಲಸೌಕರ್ಯ ಸರಿದೂಗಿಸಿಕೊಂಡು ಹೋಗುವುದು. ಆಗ ಮಾತ್ರ ಕರ್ನಾಟಕ ಕಲ್ಯಾಣವಾಗಲಿದೆ ಎಂದು ತಿಳಿಸಿದ್ದಾರೆ.
ವಿಧಾನಸಭೆಯಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ಆರ್ಥಿಕ ಶಿಸ್ತಿನಲ್ಲಿ ಬಜೆಟ್ ನಿರ್ವಹಣೆ ಮಾಡಲಾಗಿದೆ. ಆದಾಯ, ಆರ್ಥಿಕತೆ ಉತ್ತಮವಾಗಿದ್ದರೆ ಅಭಿವೃದ್ಧಿ ಸಾಧ್ಯ. ರಾಜ್ಯದ ಅಭಿವೃದ್ಧಿಗೆ ಬಜೆಟ್ ಸಹಕಾರಿಯಾಗಲಿದೆ. ಕೋವಿಡ್ ನಂತರ ಬಹಳ ವೇಗವಾಗಿ ಆರ್ಥಿಕತೆ ಸುಧಾರಣೆಯಾಯಿತು. ಇದಕ್ಕೆ ಕಾರಣ ಜನರ ಉತ್ಸಾಹ ಎಂದು ಹೇಳಿದರು.
ಕೃಷಿ ಕ್ಷೇತ್ರವನ್ನು ನಂಬಿಕೊಂಡು 60%ರಷ್ಟು ಜನರಿದ್ದಾರೆ. 130 ಕೋಟಿ ಜನಸಂಖ್ಯೆಗೂ ಆಹಾರ ನೀಡುವ ಶಕ್ತಿ ನಮಗಿದೆ. ಆಹಾರ ಕೊಡುವ ರೈತನಿಗೆ ಶಕ್ತಿ ತುಂಬುವ ಪಾಲಿಸಿ ಬರಬೇಕಿದೆ. ಆಗ ಮಾತ್ರ ಕ್ರಿಷಿ ಕ್ಷೇತ್ರ ಸಧೃಢವಾಗಲು ಸಾಧ್ಯವಾಗುತ್ತದೆ. ರೈತನ ಆರೋಗ್ಯದೃಷ್ಟಿಯಿಂದ ಯಶಸ್ವಿನಿ ಯೋಜನೆ ಜಾರಿಗೆ ತರಲಾಗಿದೆ. ಸಾಲದ ವ್ಯಾಪ್ತೊಯ ಮಿತಿ 3 ಲಕ್ಷದಿಂದ 5 ಲಕ್ಷಕ್ಕೆ ಹೆಚ್ಚಿಸಲಾಗಿದೆ. 5 ಲಕ್ಷದವರೆಗೂ 0% ಬಡ್ಡಿ ಸಾಲ ನೀಡಲಾಗುತ್ತದೆ. ಭೂಸಿರಿ ಯೋಜನೆಯಡಿ ಸರ್ಕಾರದಿಂದ 2500 ರೂ ಹಣ ವಿತರಿಸಲಾಗುತ್ತಿದೆ. ನಬಾರ್ಡ್ ನಿಂದ 7500 ರೂಪಾಯಿ ಕೊಡಲಾಗುವುದು ಎಂದು ಹೇಳಿದರು.
ಇದೇ ವೇಳೆ ಮಹಿಳಾ ಕೃಷಿ ಕಾರ್ಮಿಕರ ಸಹಾಯಧನವನ್ನು ಏರಿಕೆ ಮಾಡಲಾಗುವುದು ಎಂದ ಸಿಎಂ ಬೊಮ್ಮಾಯಿ, ದುಡಿಯುವ ಭೂರಹಿತ ಮಹಿಳಾ ಕಾರ್ಮಿಕರ ಸಹಾಯಧನ 1000 ನೀಡಲಾಗುವುದು ಎಂದು ಘೋಷಿಸಿದರು. ಬಜೆಟ್ ಮಂಡನೆ ವೇಳೆ 500 ರೂಪಾಯಿ ಘೋಷಿಸಿದ್ದ ಸಿಎಂ ಇದೀಗ ಮತ್ತೆ 500 ರೂಪಾಯಿ ಹೆಚ್ಚಿಸುವುದಾಗಿ ತಿಳಿಸಿದ್ದಾರೆ.
ಇದೇ ವೇಳೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಸಿಎಂ, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಲೋಕಾಯುಕ್ತವನ್ನು ನಿಷ್ಕ್ರಿಯಗೊಳಿಸಲಾಗಿತ್ತು. ಲೋಕಾಯುಕ್ತ ರದ್ದು ಮಾಡಿ ಎಸಿಬಿ ರಚನೆ ಮಾಡಲಾಗಿತ್ತು. ಆದರೆ ನಮ್ಮ ಅವಧಿಯಲ್ಲಿ ಲೋಕಾಯುಕ್ತವನ್ನು ಮರು ಸ್ಥಾಪಿಸಲಾಗಿದೆ ಎಂದರು.
*ಸಿ.ಟಿ.ರವಿ ಕೃತ್ಯಕ್ಕೆ ಮಾತಿನಲ್ಲೇ ಚಾಟಿ ಬೀಸಿದ ಸಿದ್ದರಾಮಯ್ಯ*
https://pragati.taskdun.com/siddaramaiahc-t-ravinon-vegtemple-visitcongresstweet/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ