ಪ್ರಗತಿವಾಹಿನಿ ಸುದ್ದಿ, ಬೆಂಗಳೂರು:
ನಾನು ರಾಜಿನಾಮೆ ನೀಡಲು ಹಲವಾರು ಕಾರಣಗಳಿವೆ. ಅವುಗಳಲ್ಲಿ ಜಿಂದಾಲ್ ಸಂಸ್ಥೆಗೆ ಭೂಮಿ ನೀಡುವ ವಿಚಾರ ಪ್ರಮುಖವಾದದ್ದು ಎಂದು ವಿಜಯನಗರ ಶಾಸಕ ಆನಂದ ಸಿಂಗ್ ಸ್ಪಷ್ಟಪಡಿಸಿದ್ದಾರೆ.
ರಾಜ್ಯಪಾಲರನ್ನು ಭೇಟಿ ಮಾಡಿದ ಬಳಿಕ ಮಾತನಾಡಿದ ಅವರು, ಜಿಲ್ಲೆಯ ಹಿತಕ್ಕಾಗಿ, ಜಿಲ್ಲೆಯ ಯುವಕರ ಹಿತಕ್ಕಾಗಿ ನಾನು ರಾಜಿನಾಮೆ ನೀಡಿದ್ದೇನೆ. ವಿಜಯನಗರ ಪ್ರತ್ಯೇಕ ಜಿಲ್ಲೆಯಾಗಬೇಕೆನ್ನುವುದೂ ನನ್ನ ಬೇಡಿಕೆಯಾಗಿದೆ ಎಂದು ಅವರು ತಿಳಿಸಿದರು.
ಅನಿಲ ಲಾಡ್ ಕೂಡ ನನ್ನ ಬೆಂಬಲಕ್ಕಿದ್ದಾರೆ. ಜಿಲ್ಲೆಯ ಅಭಿವೃದ್ಧಿಗಾಗಿ ಪಕ್ಷಾತೀತವಾಗಿ ಕಲಸ ಮಾಡಲು ನಾನು ಎಲ್ಲ ಪಕ್ಷಗಳಲ್ಲೂ ವಿನಂತಿಸಿದ್ದೇನೆ. ಆಪರೇಶನ್ ಕಮಲಕ್ಕೆ ನಾನು ಬಲಿಯಾಗಿಲ್ಲ ಎಂದು ಅವರು, ನಾನು ನನ್ನ ಬೇಡಿಕೆಗಳನ್ನು ಇಟ್ಟಿದ್ದೇನೆ. ಸರಕಾರ ಏನು ಮಾಡುತ್ತದೆ ನೋಡೋಣ ಎಂದರು.
ಇದು ಬ್ಲ್ಯಾಕ್ ಮೇಲ್ ತಂತ್ರವೇ ಎನ್ನುವ ಪ್ರಶ್ನೆಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಬ್ಲ್ಯಾಕ್ ಮೇಲೆ ಎನ್ನುವ ಶಬ್ದ ಬಳಸಬೇಡಿ. ಇದು ನನ್ನ ಬೇಡಿಕೆ. ಅದನ್ನ ಸರಕಾರದ ಮುಂದಿಟ್ಟಿದ್ದೇನೆ ಎಂದರು.
ಶಾಸಕ ಸ್ಥಾನಕ್ಕೆ ಆನಂದ ಸಿಂಗ್ ರಾಜಿನಾಮೆ ನಿರ್ಧಾರ; ರಾಜ್ಯ ರಾಜಕೀಯ ಮತ್ತೆ ಕುತೂಹಲ
ರಾಜಿನಾಮೆ ಖಚಿತಪಡಿಸಿದ ಆನಂದ ಸಿಂಗ್
ರಾಜ್ಯಪಾಲರ ಭೇಟಿಗೆ ತೆರಳಿರುವ ಆನಂದ ಸಿಂಗ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ