ಪ್ರಗತಿವಾಹಿನಿ ಸುದ್ದಿ; ಬಾಗಲಕೋಟೆ: ಕರ್ನಾಟಕದ ಜನ ಬಹಳ ಪ್ರಬುದ್ಧರಾಗಿದ್ದು ಇಂಥ ಟೀಕೆ ಟಿಪ್ಪಣಿ ಗಳಿಗೆ ಸೊಪ್ಪು ಹಾಕುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಬನಹಟ್ಟಿ ಹೆಲಿಪ್ಯಾಡ್ ಕಾರ್ಯಕ್ರಮಕ್ಕೆ ತೆರಳುವ ಮುನ್ನ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು.
ಕಳೆದ 5 ವರ್ಷಗಳಲ್ಲಿ ತೇರದಾಳ ವಿಧಾನಸಭಾ ಕ್ಷೇತ್ರ ಬಹಳಷ್ಟು ಪ್ರಗತಿಯನ್ನು ಹೊಂದಿ, ಎಲ್ಲಾ ರಂಗಗಳಲ್ಲಿಯೂ ಶಾಸಕ ಸಿದ್ದು ಸವದಿಯವರ ನೇತೃತ್ವದಲ್ಲಿ ಮುಂದುವರೆದಿದೆ. ಇದೇ ರೀತಿ ರಾಜ್ಯದ ಎಲ್ಲಾ ಕ್ಷೇತ್ರಗಳೂ ಅಭಿವೃದ್ಧಿಯಾಗುತ್ತಿದೆ ಎಂದರು.
ಪ್ರಧಾನಿಗಳ ಭೇಟಿ:
ಪ್ರಧಾನಮಂತ್ರಿಗಳು ಮತ್ತು ಕೇಂದ್ರ ಗೃಹ ಸಚಿವರು ರಾಜ್ಯಕ್ಕೆ ಪ್ರತಿ ಬಾರಿ ಬಂದಾಗಲೂ ಸಾವಿರಾರು ಕೋಟಿ ರೂ.ಗಳ ಅಭಿವೃದ್ಧಿಗೆ ಉದ್ಘಾಟನೆ ಮಾಡಲು ಬಂದಿದ್ದು, ನಾಳೆ ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆ, ಸಾಮಾಜಿಕ ಮಹತ್ವವುಳ್ಳ ಲಂಬಾಣಿ ಜನಕ್ಕೆ ಹಕ್ಕುಪತ್ರ ವಿತರಣೆ, ಹೆಲಿಕಾಪ್ಟರ್ ಕಾರ್ಖಾನೆ ಉದ್ಘಾಟನೆ, ಜಲ್ ಜೀವನ್ ಮಿಷನ್ ಉದ್ಘಾಟನೆಗೆ ಬಂದಿದ್ದಾರೆ. ಪ್ರತಿ ಬಾರಿಯೂ ಉದ್ಘಾಟನಾ ಕೆಲಸಕ್ಕೆ ಬಂದಿದ್ದಾರೆ. ಈ ವರ್ಷ ಕೇಂದ್ರ ಮತ್ತು ರಾಜ್ಯ ಸರ್ಕಾರದ ಬಕೆಟ್ ನಲ್ಲಿ ಅತಿ ಹೆಚ್ಚು ಕೇಂದ್ರದಿಂದ ನೆರವು ಬಂದಿದೆ. ರಾಜ್ಯವೂ ಕೂಡ ಅದಕ್ಕೆ ಸರಿಸಮಾನವಾಗಿ ಅನುದಾನ ಮೀಸಲಿಟ್ಟಿದೆ. ಈ ಬಾರಿ ಅಭಿವೃದ್ಧಿ ಪರ್ವ ಎಂದು ತಿಳಿಸಿದರು.
ಆಂತರಿಕ ವಿಚಾರ:
ತೇರದಾಳದಲ್ಲಿ ಹಿಂದುಳಿದ ವರ್ಗದ ವರಿಗೆ ಟಿಕೆಟ್ ನೀಡಿಲ್ಲವೆಂದು ಬಿಜೆಪಿ ಮುಖಂಡರು ಆರೋಪ ಮಾಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಅದು ಪಕ್ಷದ ಆಂತರಿಕ ವಿಚಾರಗಳನ್ನು ಮಾತನಾಡಿ ಸರಿಪಡಿಸಲಾಗುವುದು ಎಂದರು.
ಸ್ವಂತ ವಿಚಾರ:
ಸೋನಿಯಾ ಗಾಂಧಿ ನಿವೃತ್ತಿ ಬಗ್ಗೆ ಸುಳಿವು ನೀಡಿರುವ ಬಗ್ಗೆ ಸುದ್ದಿಗಾರ ಪ್ರಶ್ನೆಗೆ ಉತ್ತರಿಸಿ ಅದು ಅವರ ಸ್ವಂತ ವಿಚಾರ ಎಂದರು.
*HDK ನೇತೃತ್ವದ JDS ಸಭೆ ದಿಢೀರ್ ರದ್ದು; ಹಾಸನ ಟಿಕೆಟ್ ಗೊಂದಲದಲ್ಲಿ ಬಿಗ್ ಟ್ವಿಸ್ಟ್*
https://pragati.taskdun.com/h-d-kumaraswamyjds-meetingcancelled/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ