Latest

*ದಳಪತಿಗಳ ಕೋಟೆಯಲ್ಲಿ ಅಬ್ಬರಿಸಿದ ಡಿ.ಕೆ.ಸುರೇಶ್; ಮಹಾಭಾರತದ ಕಥೆ ಮೂಲಕ ಕಾಂಗ್ರೆಸ್ ಗೆಲುವಿಗೆ ಕರೆ ಕೊಟ್ಟ ಸಂಸದ*

ಪ್ರಗತಿವಾಹಿನಿ ಸುದ್ದಿ; ಹೊಳೆನರಸಿಪುರ: ಈ ಪುತ್ರ ವ್ಯಾಮೋಹ ಯಾರನ್ನೂ ಬಿಡೋದಿಲ್ಲ. ಧೃತರಾಷ್ಟ್ರ ಪ್ರೇಮದಿಂದಲೇ ಮಹಾಭಾರತ ನಡೆಯಿತು. ಒಂದು ಕಡೆ ಪಾಂಡವರು. ಇನ್ನೊಂದು ಕಡೆ ನೂರು ಮಂದಿ ಕೌರವರು. ಪಾಂಡವರು ಬರೀ ಐದು ಗ್ರಾಮ ಕೇಳ್ತಾರೆ. ಆದರೆ ಧೃತರಾಷ್ಟ್ರ ಪ್ರೇಮದಿಂದ ಅವರಿಗೆ ಐದು ಗ್ರಾಮ ಸಿಗೋದಿಲ್ಲ. ಕೊನೆಗೆ ಕುರುಕ್ಷೇತ್ರ ಯುದ್ಧ ನಡೆಯಿತು. ಧರ್ಮರಾಜ್ಯ ಸಂಸ್ಥಾಪನೆ ಆಯಿತು.ನೀವು ಹೊಳೆನರಸೀಪುರದ ಜನ ಈ ಧರ್ಮ ಸೂಕ್ಷ್ಮ ಅರ್ಥ ಮಾಡಿಕೊಂಡು, ಇಂಥದ್ದೇ ಇತಿಹಾಸ ಸೃಷ್ಟಿ ಮಾಡಬೇಕು. ಇಲ್ಲಿಂದ ಕಾಂಗ್ರೆಸ್ ಅಭ್ಯರ್ಥಿಯನ್ನು ವಿಧಾನಸಭೆಗೆ ಆರಿಸಿ ಕಳುಹಿಸುವ ಐತಿಹಾಸಿಕ ನಿರ್ಧಾರವನ್ನು ನೀವು ಮಾಡಬೇಕು. ಆ ಮೂಲಕ ಧರ್ಮರಾಜ್ಯ ಸ್ಥಾಪನೆ ಮಾಡಬೇಕು ಎಂದು ಸಂಸದ ಡಿ.ಕೆ.ಸುರೇಶ್ ಕರೆ ನೀಡಿದ್ದಾರೆ.

ಹೊಳೆನರಸೀಪುರ ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿದ ಸಂಸದ ಡಿ ಕೆ ಸುರೇಶ್, ಅಣ್ಣ (ರೇವಣ್ಣ) ಕೋಣನಾದ್ರೂ ಬಲಿ ಕೊಡ್ಲಿ. ನಿಂಬೆ ಹಣ್ಣನಾದ್ರೂ ಮಂತ್ರಿಸಿ ಇಟ್ಟುಕೊಳ್ಳಲಿ. ಆದರೆ ಒಂದು ಮಾತು ಹೇಳ್ತೇನೆ, ಇದು ನೂರಕ್ಕೆ ನೂರರಷ್ಟು ಸತ್ಯ, ಈಗ ನಿಂಬೆ ಹಣ್ಣು ವರ್ಕೌಟ್ ಆಗಲ್ಲ. ಎಲ್ಲ ರಿವರ್ಸ್ ಹೊಡಿತದೆ. ಈಗಾಗ್ಲೇ ಹೊಡೀತಾ ಇದೆ. ಹೊಳೆನರಸೀಪುರ, ಹಾಸನ, ಅರಸೀಕೆರೇಲಿ ಏನೇನು ಆಗ್ತಾ ಇದೆ ಅಂತ ನೀವೇ ನೋಡ್ತಾ ಇದ್ದೀರಲ್ಲ ಎಂದು ವ್ಯಂಗ್ಯವಾಡಿದರು.

ಹೊಳೆನರಸೀಪುರದಲ್ಲಿ ಫ್ಲೈ ಓವರ್ ಕಟ್ಟಿದ್ದಾರೆ. ಪರವಾಗಿಲ್ಲ ಬೆಂಗಳೂರು ತರ ಇಲ್ಲೂ ಕಟ್ಟಿದ್ದಾರಲ್ಲ ಅಂತ. ಸಿಕ್ಕಾಪಟ್ಟೆ ಡೆವಲಪ್ ಆಗಿರಬಹುದು ಅಂತ ಅಂದುಕೊಂಡೆ. ಯಾಕಪ್ಪಾ ಇದನ್ನು ಕಟ್ಟಿದ್ದಾರೆ, ಜನಕ್ಕೆ ಏನಾದರೂ ಅನುಕೂಲ ಆಗಿದೆಯಾ ಅಂತ ವಿಚಾರಿಸಿದೆ. ಆಗ ಗೊತ್ತಾಯ್ತು. ದೊಡ್ಡವರ ಮನೆಯವರ ಚೌಲ್ಟ್ರಿ, ಥಿಯೇಟರ್ ಗೆ ದಾರಿ ಮಾಡಿಕೊಳ್ಳೋದಿಕ್ಕೆ ಈ ಫ್ಲೈಓವರ್ ಕಟ್ಟಿದ್ದಾರೆ ಅಂತ.

ಹೊಳೆಗೆ ರಿಟೇನ್ ವಾಲ್ ಕಟ್ಟಿದ್ದಾರೆ. ಪರವಾಗಿಲ್ಲ ಅಂದುಕೊಂಡೆ. ಆದರೆ ಅದು ಆ ಫ್ಯಾಮಿಲಿಯವರ ಜಮೀನು ರಕ್ಷಣೆಗಂತೇ. ರೈತರಿಗೆ, ಅವರ ಜಮೀನಿಗೆ ಅನುಕೂಲ ಮಾಡಿಕೊಡಲು ಅಲ್ಲ. ಇಲ್ಲೆಲ್ಲಾ ಉದ್ಧಾರ ಆಗಿರೋರು ಅವರು, ಅವರ ಕುಟುಂಬದವರು ಮಾತ್ರ ಅಂತೇ.

ನಾವು ಯಾವುದೊ ಒಂದು ಕುಟುಂಬ ರಕ್ಷಣೆಗೆ ಬದ್ಧರಾಗಿಲ್ಲ.ಅದಕ್ಕಾಗಿ ಕೆಲಸ ಮಾಡೋರಲ್ಲ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಕೊಟ್ಟಿರೋ ಸಂವಿಧಾನದ ನೆರಳಲ್ಲಿ, ಶ್ರೀಮಾನ್ ಮಲ್ಲಿಕಾರ್ಜುನ ಖರ್ಗೆ ಅವರ ಮಾರ್ಗದರ್ಶನದಲ್ಲಿ ಎಲ್ಲ ವರ್ಗದವರ ರಕ್ಷಣೆಗೆ ಕಾಂಗ್ರೆಸ್ ಕಟಿಬದ್ಧವಾಗಿದೆ. ನಿಮ್ಮೆಲ್ಲರ ರಕ್ಷಣೆಗೆ ನಾವು ಇದ್ದೇವೆ.

ಇವತ್ತು ನಿಮಗೆ ಒಂದು ಸದಾವಕಾಶ ಇದೆ. ಪ್ರಜಾಧ್ವನಿಯನ್ನು ನಿಮ್ಮ ಮುಂದೆ ತಂದಿದ್ದೇವೆ. ನಿಮ್ಮ ರಕ್ಷಣೆಗೆ ಬಂದಿದ್ದೇವೆ. ನೀವು ತೀರ್ಮಾನ ಮಾಡಿ, ಬದಲಾವಣೆ ತನ್ನಿ. ಕಾಂಗ್ರೆಸ್ ಗೆ ಆಶೀರ್ವಾದ ಮಾಡಿ. ಚುನಾವಣೆಯಲ್ಲಿ ಗೆಲ್ಲಿಸಿ ಎಂದು ಹೇಳಿದರು.

7ನೇ ವೇತನ ಆಯೋಗ: ಮುಖ್ಯಮಂತ್ರಿಗಳ ಜೊತೆ ಸರಕಾರಿ ನೌಕರರ ಸಭೆ ಮುಕ್ತಾಯ

https://pragati.taskdun.com/7th-pay-commission-govt-employees-strike/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button