Latest

ಆಸ್ಟ್ರೇಲಿಯಾದಲ್ಲಿ ಮಾರ್ದನಿಸಿದ ಪ್ರತ್ಯೇಕ ಖಲಿಸ್ತಾನ ಚಳವಳಿ; ಆರಂಭಿಕ ಹಂತದಲ್ಲೇ ಕಟ್ಟಬೇಕಿದೆ ಹೆಡೆಮುರಿ

ಪ್ರಗತಿವಾಹಿನಿ ಸುದ್ದಿ, ಬ್ರಿಸ್ಬೇನ್: ಆಸ್ಟ್ರೇಲಿಯಾದಲ್ಲಿ ಬ್ರಿಸ್ಬೇನ್ ನಗರದಲ್ಲಿರುವ ಶ್ರೀ ಲಕ್ಷ್ಮೀ ನಾರಾಯಣ ದೇವಸ್ಥಾನದ ಗೋಡೆಯ ಮೇಲೆ ಹಿಂದೂ ವಿರೋಧಿ ಬರಹ ಮತ್ತೆ ಮರುಕಳಿಸಿದ್ದು, ಇದು ಖಲಿಸ್ತಾನ್ ವಿಧ್ವಂಸಕರ ನಾಲ್ಕನೇ ಸಲ. ಇದೇ ವರ್ಷದಲ್ಲಿ ಆಸ್ಟ್ರೇಲಿಯಾದಲ್ಲಿ ತಮ್ಮ ಹಿಂದೂ ವಿರೋಧಿ ಬರಹಗಳ ಮೂಲಕ ಖಲಿಸ್ತಾನಿ ಹೋರಾಟ ಮುನ್ನೆಲೆಗೆ ಬರುತ್ತಿದೆ. ಅಲ್ಲಿ ವಾಸಿಸುತ್ತಿರುವ ಭಾರತೀಯ ಆಸ್ಟ್ರೇಲಿಯಾರನ್ನು ಭೀತಿಗೆ ತಳ್ಳುತ್ತಿದೆ.

ಇನ್ನೇನು ಎಲ್ಲವೂ ಶಾಂತವಾಗಿದೆ ಎನ್ನುವಷ್ಟರಲ್ಲಿ, ಒಳ ಬೇಗುದಿಯು ವಿದೇಶದ ನೆಲದಿಂದ ಹೊರ ಬೀಳುತ್ತಿದೆ. ಅಷ್ಟೇ ಅಲ್ಲದೇ ಭಾರತಕ್ಕೆ ಧಿಕ್ಕಾರ, ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಒಬ್ಬ ಟೆರರಿಸ್ಟ್ ಎಂದೂ ಗೀಚಿದ್ದಾರೆ. ಖಲಿಸ್ತಾನಿ ಪ್ರತ್ಯೇಕ ರಾಷ್ಟ್ರಕ್ಕಾಗಿ ಪಂಜಾಬಿಗಳು ಅಡ್ಡಿ ಬರಬಾರದು ಮತ್ತು ಬೆಂಬಲಿಸುವಂತೆ ವಾಕ್ಯಗಳನ್ನು ನಿನ್ನೆ ಶನಿವಾರದಂದು ಬರೆದಿದ್ದಾರೆ. ಎಲ್ಲ ಪಂಜಾಬಿಗಳು ಹಿಂದೂ ವಿರೋಧಿಗಳಲ್ಲ. ಬಹುತೇಕ ಪಾಲು ಭಾರತೀಯರೆಂದು ಹೆಮ್ಮೆಯಿಂದ, ದೇಶ ಸೇವೆಯಲ್ಲಿ ನಿರತರಾಗಿದ್ದಾರೆ. ಕೆಲವೇ ಜನ ಸ್ವ ಧರ್ಮ ಹಿತಾಸಕ್ತಿಗೆ ಕಟ್ಟುಬಿದ್ದವರಿಂದ, ಅಸಹಿಷ್ಣುತೆಯ ಬೀಜ ಬಿತ್ತುವ ಕಾರ್ಯದಲ್ಲಿ ನಿರತರಾಗಿದ್ದಾರೆ.

ದೇವಸ್ಥಾನದ ಅಧ್ಯಕ್ಷ ಸತೀಂದರ್ ಶುಕ್ಲಾ ಶನಿವಾರ ಭಕ್ತರು ದೇವಸ್ಥಾನಕ್ಕೆ ಆಗಮಿಸಿದ ವೇಳೆ ಕೃತ್ಯ ಬೆಳಕಿಗೆ ಬಂದಿದೆ. ಈ ಕುರಿತು ಅಲ್ಲಿನ ಪೊಲೀಸರಿಗೆ ಮಾಹಿತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಇತ್ತೀಚೆಗೆ ಖಲಿಸ್ತಾನಿ ಬೆಂಬಲಿಗರಿಂದ ಬ್ರಿಸ್ಬೇನ್’ನ ಗಾಯತ್ರಿ ದೇವಸ್ಥಾನಕ್ಕೆ ಬೆದರಿಕೆ ಕರೆ ಬಂದಿತ್ತು. ಆಸ್ಟ್ರೇಲಿಯಾದ ಹಿಂದೂಗಳನ್ನು ಹೆದರಿಸುವ ಸಿಖ್ ಫಾರ್ ಜಸ್ಟೀಸ್’ ನ ಮಾದರಿಯಾಗಿದೆ ಎಂದು ಹಿಂದೂ ಮಾನವ ಹಕ್ಕುಗಳ ನಿರ್ದೇಶಕಿ ಸಾರಾ ಎಲ್ ಗೇಟ್ಸ್ ಅವರು ಹೇಳಿದ್ದಾರೆ.

https://pragati.taskdun.com/insulted-shivaji-maharaj-and-shivaji-devotees-by-inaugurating-an-incomplete-idol-in-cms-hand/
https://pragati.taskdun.com/insulted-shivaji-maharaj-and-shivaji-devotees-by-inaugurating-an-incomplete-idol-in-cms-hand/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button