Kannada News

‘ರಾಗ ರಂಜನಿ’ ಕನ್ನಡ ಗೀತೆಗಳ ಸ್ಪರ್ಧೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕನ್ನಡ ಮಹಿಳಾ ಸಂಘದ ಸಾಹಿತ್ಯ ಕಲಾ ವೇದಿಕೆ ವತಿಯಿಂದ ಮಾರ್ಚ್ 19ರಂದು ಬೆಳಗಾವಿಯಲ್ಲಿ ಕನ್ನಡ ಗೀತೆಗಳ ಸ್ಪರ್ಧೆ ರಾಗ ರಂಜನಿ ಆಯೋಜಿಸಲಾಗಿದೆ.

ಅಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಟಿಳಕವಾಡಿ 2ನೇ ರೈಲ್ವೆ ಗೇಟ್ ಬಳಿಯ ವರೇರ್ಕರ್ ಸಭಾಭವನದಲ್ಲಿ ಕಾರ್ಯಕ್ರಮ ನಡೆಯಲಿದೆ.

ದಾಸರ ಪದಗಳನ್ನು ಹಾಡುವ ಸ್ಪರ್ಧೆ ಇದಾಗಿದ್ದು, ಸ್ಪರ್ಧೆಗೆ 5 ಜನ ಮಹಿಳೆಯರ ಅಥವಾ 5 ಜನ ಪುರುಷರ ಗುಂಪು ಇರಬೇಕು. ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಚಿಸುವವರು ಮಾರ್ಚ್ 17ರ ಒಳಗೆ ತಮ್ಮ ಹೆಸರುಗಳನ್ನು ನೋಂದಾಯಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಮೊಬೈಲ್ ನಂಬರ್ ಗಳನ್ನು ಸಂಪರ್ಕಿಸಿ:

  1. ಶುಭದಾ ಕೋಟೂಳಕರ – 9902852367
  2. ಸಂಗೀತ ಪಾಟೀಲ -9980070771
  3. ಗೌರಿ ಸರನೋಬತ್ -948139055

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button