Kannada NewsKarnataka News

ಬೆಳಗಾವಿ ಬಳಿ ಹೊಟೆಲ್ ಸಿಬ್ಬಂದಿಯಿಂದ ಗ್ರಾಹಕರ ಮೇಲೆ ಹಲ್ಲೆ: ದೂರು ದಾಖಲು (ವಿಡಿಯೋ ಸಹಿತ)

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಊಟ ಮಾಡಲು ಹೋದ ತಮ್ಮ ತಂಡದ ಮೇಲೆ ಹೊಟೆಲ್ ಸಿಬ್ಬಂದಿ ತೀವ್ರತರವಾಗಿ ಹಲ್ಲೆ ನಡೆಸಿದ್ದಾರೆ ಎಂದು ಬೆಳಗಾವಿಯ ಸೋಶಿಯಲ್ ಮೀಡಿಯಾ ಮಾರ್ವಲಸ್ ಬೆಳಗಾಂ ಅಡ್ಮಿನ್ ರಾಖೇಶ್ ನಂದಗಡಕರ್ ಪೊಲೀಸ್ ದೂರು ದಾಖಲಿಸಿದ್ದಾರೆ.

ಸುಳಗಾದ ವಿಶಾಲ ಕಂಟ್ರಿ ಸೈಡ್ ಎನ್ನುವ ಹೊಟೆಲ್ ಗೆ ಮಾರ್ಚ್ 9ರ ರಾತ್ರಿ ತಾವು ಸುಮಾರು 25 ಜನರು ಊಟಕ್ಕೆ ತೆರಳಿದ್ದಾಗಿಯೂ, ಆ ವೇಳೆ ಅಲ್ಲಿನ ಸಿಬ್ಬಂದಿ ಅತ್ಯಂತ ಕೆಟ್ಟದಾಗಿ ನಡೆದುಕೊಂಡಿದ್ದಲ್ಲದೆ, ಜಗಳ ಮಾಡಿ ಹೊಟೆಲ್ ಪಾತ್ರೆಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ರಾಕೇಶ್ ದೂರಿದ್ದಾರೆ.

Home add -Advt

ತಮ್ಮ ಜೊತೆ ತೆರಳಿದ್ದ ಮಹಿಳೆಯರಿಗೂ ಅವಾಚ್ಯವಾಗಿ ನಿಂದಿಸಿದ್ದಲ್ಲದೆ, ಅಪ್ರಚೋದಿತವಾಗಿ ಹಲ್ಲೆ ನಡೆಸಿದ್ದಾರೆ. ಗಾಯಗೊಂಡಿರುವ ತಮ್ಮ ತಂಡದ ಸದಸ್ಯರು ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದಾರೆ. ಅವರೆಲ್ಲ ಉತ್ತರ ಭಾರತದಿಂದ ಬಂದಿರುವ ಸಿಬ್ಬಂದಿಯಾಗಿದ್ದು, ಅತ್ಯಂತ ಕೆಟ್ಟದ್ದಾಗಿ ವರ್ತಿಸಿದ್ದಾರೆ ಎಂದು ದೂರು ನೀಡಿದ್ದಾರೆ.

ಈ ಕುರಿತ ವೀಡಿಯೋವನ್ನು ಸಹ ಅವರು ಬಿಡುಗಡೆ ಮಾಡಿದ್ದಾರೆ.

Related Articles

Back to top button