Latest

ಮನೆ ಮಂದಿ ಮುಂದೇ ಬಾಲಕಿ ಅತ್ಯಾಚಾರಕ್ಕೆ ಯತ್ನಿಸಿದ ಇಬ್ಬರು ಅಂದರ್

ಪ್ರಗತಿವಾಹಿನಿ ಸುದ್ದಿ, ಬೆಳ್ತಂಗಡಿ: ರಾತ್ರಿ ಮನೆಗೆ ನುಗ್ಗಿ ಮನೆಯ ಜನರೆದುರೇ ಬಾಲಕಿ ಅತ್ಯಾಚಾರಕ್ಕೆ ಯತ್ನಿಸಿದ ಇಬ್ಬರನ್ನು ಜನರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕರಾಯ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕೊಯಿಲ ಗ್ರಾಮದ ಹಸೈನಾರ್(24) ಮತ್ತು ಅಬ್ಬಾಸ್(30) ಬಂಧಿತರು.

ನೀರು ಕೇಳುವ ನೆಪದಲ್ಲಿ ಬಾಲಕಿ ಮನೆಗೆ ಹೋಗಿದ್ದ ದುಷ್ಕರ್ಮಿಗಳು ಬಾಲಕಿ ಕೈಗೆ ಚೀಟಿ ಕೊಟ್ಟು ಅದರಲ್ಲಿರುವ ಮೊಬೈಲ್ ನಂಬರ್ ಗೆ ಕಾಲ್ ಮಾಡದಿದ್ದರೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿ ಹೋಗಿದ್ದರು.

ಶನಿವಾರ ರಾತ್ರಿ 8 ಗಂಟೆ ಸುಮಾರಿಗೆ ಜನರೆಲ್ಲ ಎಚ್ಚರವಾಗಿದ್ದ ಸಂದರ್ಭದಲ್ಲೇ ಬಾಲಕಿ ಮನೆಗೆ ನುಗ್ಗಿ ಆಕೆಯ ಮೇಲೆ ಅತ್ಯಾಚಾರಕ್ಕೆ ಮುಂದಾಗಿದ್ದಾರೆ. ಈ ವೇಳೆ ಬಾಲಕಿ ತಾಯಿ ಜೋರಾಗಿ ಕೂಗಿಕೊಂಡಿದ್ದರಿಂದ ಅಕ್ಕಪಕ್ಕದವರೆಲ್ಲ ಬಂದು ಬಾಲಕಿಯನ್ನು ರಕ್ಷಿಸಿ ನಂತರ ಸ್ಥಳೀಯರ ಸಹಾಯದಿಂದ ಅಬ್ಬಾಸ್ ಮತ್ತು ಹಸೈನಾರನ ಹೆಡೆಮುರಿ ಕಟ್ಟಿ ಪೊಲೀಸರಿಗೆ ಒಪ್ಪಿಸಿದ್ದಾರೆ.

Home add -Advt

ಈ ಕುರಿತು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.

https://pragati.taskdun.com/pu-student-commits-suicide-due-to-exam-fear/
https://pragati.taskdun.com/this-time-the-monsoon-will-advance-before-the-period/
https://pragati.taskdun.com/election-boycott-threat/

Related Articles

Back to top button