ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ರಾಜಹಂಸಗಡ ಕೋಟೆಯಲ್ಲಿ ಭವ್ಯವಾದ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ನಿರ್ಮಾಣದ ನಂತರ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರು ಇನ್ನಷ್ಟು ಅಭಿವೃದ್ಧಿ ಕಾರ್ಯಗಳ ಸರಣಿಯನ್ನೇ ಕೈಗೊಂಡಿದ್ದಾರೆ.
ರಾಜಹಂಸಗಡ ಕೋಟೆ ರಸ್ತೆ ಅಭಿವೃದ್ಧಿಗಾಗಿ ಲೋಕೋಪಯೋಗಿ ಇಲಾಖೆಯ ಅನುದಾನದಲ್ಲಿ ಅವರು 80 ಲಕ್ಷ ರೂ. ಅನುದಾನ ಮಂಜೂರು ಮಾಡಿಸಿದ್ದು, ಸ್ಥಳೀಯ ಜನಪ್ರತಿನಿಧಿಗಳು, ಗ್ರಾಮದ ಹಿರಿಯರೊಂದಿಗೆ ಸೇರಿ ಕಾಂಗ್ರೆಸ್ ಯುವ ಮುಖಂಡ ಮೃಣಾಲ್ ಭೂಮಿ ಪೂಜೆ ಕೈಗೊಂಡರು. ಈ ಮೂಲಕ ರಾಜಹಂಸಗಡ ಮುಖ್ಯ ರಸ್ತೆಯಿಂದ ಕೋಟೆವರೆಗಿನ ರಸ್ತೆ ಶೀಘ್ರವೇ ಅಭಿವೃದ್ಧಿಗೊಳ್ಳಲಿದೆ.
ಕ್ಷೇತ್ರದ ರಾಜಹಂಸಗಡ ಕೋಟೆಯಲ್ಲಿ ಬೃಹತ್ ಛತ್ರಪತಿ ಶಿವಾಜಿ ಮಹಾರಾಜ ಮೂರ್ತಿ ಪ್ರತಿಷ್ಠಾಪನೆಯಾದ ಹಿನ್ನೆಲೆಯಲ್ಲಿ ಕೋಟೆ ಈಗ ಪ್ರವಾಸಿ ತಾಣವಾಗಿ ಹೊರಹೊಮ್ಮಿದೆ. ಪ್ರತಿನಿತ್ಯ ಪ್ರವಾಸಿಗಳ ಸಂಖ್ಯೆ ಹೆಚ್ಚುತ್ತಲೇ ಸಾಗುತ್ತಿದ್ದು, ಪ್ರವಾಸಿಗಳ ಸುಗಮ ಸಂಚಾರಕ್ಕಾಗಿ ಈ ರಸ್ತೆ ಅಭಿವೃದ್ಧಿ ಪಡಿಸಲಾಗುತ್ತಿರುವುದಾಗಿ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ತಿಳಿಸಿದ್ದಾರೆ.
ರಸ್ತೆ ಅಭಿವೃದ್ಧಿಗೆ ಚಾಲನೆ ನೀಡಿದ ಸಂದರ್ಭದಲ್ಲಿ ದತ್ತಾ ಪವಾರ, ಬಾವುಕಣ್ಣ ಕಣಬರ್ಕರ್, ಜೀವಪ್ಪ ಪವಾರ, ಪ್ರಶಾಂತ ವಾಲೆಕರ್, ಜಯರಾಮ್ ಕುಂಡೆಕರ್, ಪ್ರಶಾಂತ ಇಂಗಳೆ, ಎಸ್.ಎಂ.ಬೆಳವಟ್ಕರ್, ರವೀಂದ್ರ ಪಾಟೀಲ, ಮಲ್ಲಿಕಾರ್ಜುನ, ಲೋಕೂರ್, ಶಶಿ ಪಾಟೀಲ, ಮಹಾದೇವ ಜಾಧವ್, ನಾಮದೇವ ಅನಕಾಳೆಕರ್, ಜಿ.ಕೆ.ಪಾಟೀಲ, ಭರ್ಮಾ ಪಾಟೀಲ, ಸಾತೇರಿ ಕಳಸೇಕರ್ ಹಾಗೂ ಮುಂತಾದವರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ