Latest

*ಬೆಳಗಾವಿ: ಖತರ್ನಾಕ್ ಬೈಕ್ ಕಳ್ಳರ ಬಂಧನ*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿಯಲ್ಲಿ ಬೈಕ್ ಗಳನ್ನು ಕಳ್ಳತನಮಾಡಿದ್ದ ಇಬ್ಬರು ಖತರ್ನಾಕ್ ಆರೋಪಿಗಳನ್ನು ನಿಪ್ಪಾಣಿ ಪೊಲೀಸರು ಬಂಧಿಸಿದ್ದಾರೆ.

ನಿಪ್ಪಾಣಿ ಸಿಪಿಐ S C ಪಾಟೀಲ, ಪಿ ಎಸ್ ಐ ವಿನೋದ ಪೂಜಾರಿ ಹಾಗೂ ಸಿಬ್ಬಂದಿಯವರು ಇಬ್ಬರು ದ್ವಿಚಕ್ರ ವಾಹನ ಕಳ್ಳರನ್ನು ಬಂಧಿಸಿದ್ದು, ಅವರಿಂದ ಒಟ್ಟು 16,10,000/- ಮೊತ್ತದ 23 ಬೈಕಗಳನ್ನು ವಶಪಡಿಸಿಕೊಂಡಿದ್ದಾರೆ.

ನಿಪ್ಪಾಣಿ ಶಹರ ಹದ್ದಿನ ಶಿರಗುಪ್ಪಿ ರಸ್ತೆಯ ಕ್ರಾಸ್ ಹತ್ತಿರ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಅವರ ವಶದಲ್ಲಿದ್ದ ಬೈಕ್ ಗಳನ್ನು ಜಪ್ತಿ ಮಾಡಲಾಗಿದೆ. ಆರೋಪಿತರು ಧಾರವಾಡ ಜಿಲ್ಲೆಯ ಧಾರವಾಡ ಉಪನಗರ ಠಾಣಿ-02, ಬೆಳಗಾವಿ ಶಹರ ವ್ಯಾಪ್ತಿಯ ಮಾರ್ಕೇಟ ಮೊಲಸ ಠಾಣಿ-01, ಎಪಿಎಮ್‌ಸಿ ಪೊಲೀಸ್ ಠಾಣಿ-01, ಮಾರಿಹಾಳ ಪೊಲೀಸ ಠಾಣೆ 04, ಬೆಳಗಾವಿ ಜಿಲ್ಲೆಯ ಸಂಕೇಶ್ವರ ಠಾಣೆ-01, ಬೈಲಹೊಂಗಲ-01, ನಿಪ್ಪಾಣಿ ಶಹರ ಪೊಲೀಸ್ ಠಾಣಿ-01 ಸೇರಿದಂತೆ ಒಟ್ಟು 23 ಬೈಕ್ ಗಳನ್ನು ಕದ್ದಿದ್ದು, ವಶಕ್ಕೆ ಪಡೆಯಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button