Latest

ಚರಂಡಿ ಸ್ವಚ್ಛತೆಗೆ ಹೋಗಿದ್ದ ಇಬ್ಬರು ಕಾರ್ಮಿಕರ ಸಾವು

ಪ್ರಗತಿವಾಹಿನಿ ಸುದ್ದಿ, ದಾವಣಗೆರೆ: ಚರಂಡಿ ಸ್ವಚ್ಛತೆಗೆಂದು ಹೋಗಿದ್ದ ಕಾರ್ಮಿಕರು ವಿಷಗಾಳಿ ಸೇವನೆಯಿಂದ ಅಸ್ವಸ್ಥಗೊಂಡು ಮೃತಪಟ್ಟಿದ್ದಾರೆ.

ಜಗಳೂರು ತಾಲೂಕಿನ ಬಸವಕೋಟೆ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ. ಅದೇ ಗ್ರಾಮದ ಸತ್ಯಪ್ಪ ಮತ್ತು ಮೈಲಪ್ಪ ಮೃತಪಟ್ಟವರು. ಇವರಿಬ್ಬರೂ ಸೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಪಿಡಿಒ ಸೂಚನೆಯಂತೆ ಚರಂಡಿ ಸ್ವಚ್ಛತೆಗೆ ಹೋಗಿದ್ದರು. ಆದರೆ ಸುರಕ್ಷತೆಯ ಯಾವುದೇ ಕ್ರಮ ಅನುಸರಿಸಿರಲಿಲ್ಲ. ಹೀಗಾಗಿ ಚರಂಡಿ ಸ್ವಚ್ಛತೆ ವೇಳೆಗೆ ವಿಷಗಾಳಿ ಸೇವನೆಯಿಂದ ಅಸ್ವಸ್ಥಗೊಂಡಿದ್ದರು.

ಕೂಡಲೇ ಇಬ್ಬರನ್ನೂ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಅಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಯಾವುದೇ ಸುರಕ್ಷಿತತೆಯ ಸಾಧನಗಳಿಲ್ಲದೆ ಇಬ್ಬರಿಗೂ ಕೆಲಸಕ್ಕೆ ಸೂಚಿಸಿದ ಗ್ರಾಮ ಪಂಚಾಯಿತಿ ವಿರುದ್ಧ ಆಕ್ರೋಶ ವ್ಯಕ್ತವಾಗಿದ್ದು ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

https://pragati.taskdun.com/baburama-chinchanasurabjpresigncongress-join/
https://pragati.taskdun.com/mudalagi-is-a-mantra-of-unity-peace-harmony/
https://pragati.taskdun.com/special-article-from-brahma-kumaris-on-new-year-ugadi/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button