Latest

ದೂರು ನೀಡಲು ಬಂದವಳೊಂದಿಗೆ ದುರ್ವರ್ತನೆ; ಇನ್ಸ್ಪೆಕ್ಟರ್ ಅಮಾನತು

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ದೂರು ನೀಡಲು ಬಂದಿದ್ದ ಯುವತಿ ಜೊತೆ ದುರ್ವರ್ತನೆ ತೋರಿದ ಕೂಡಿಗೆಹಳ್ಳಿ ಠಾಣೆ ಪೊಲೀಸ್ ಇನಸ್ಪೆಕ್ಟರ್ ನ್ನು ಅಮಾನತುಗೊಳಿಸಲಾಗಿದೆ.

ರಾಜಣ್ಣ ಅಮಾನತುಗೊಂಡವ. ಪ್ರಕರಣವೊಂದರ ಸಂಬಂಧ ದೂರು ನೀಡಲು ಠಾಣೆಗೆ ಬಂದಿದ್ದ ಯುವತಿಯ ಮೊಬೈಲ್ ಸಂಖ್ಯೆ ಪಡೆದಿದ್ದ ರಾಜಣ್ಣ, ನಂತರ ಆಕೆಯೊಂದಿಗೆ ಅಸಭ್ಯ ಚಾಟಿಂಗ್ ಮಾಡಿದ್ದ. ಇನ್ನೊಮ್ಮೆ ಠಾಣೆಗೆ ಕರೆಸಿ ಡ್ರೈ ಫ್ರುಟ್ ಬಾಕ್ಸ್ ನೀಡಿ ತನ್ನ ರೂಮ್ ಗೆ ಬರುವಂತೆ ಕರೆದಿದ್ದ.

ರಾಜಣ್ಣನ ವರ್ತನೆಯಿಂದ ಬೇಸತ್ತ ಯುವತಿ ದಾಖಲೆಗಳ ಸಮೇತ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದರು. ಈ ಬಗ್ಗೆ ತನಿಖೆಗೆ ಈಶಾನ್ಯ ವಿಭಾಗದ ಡಿಸಿಪಿ ಲಕ್ಷ್ಮೀಪ್ರಸಾದ್ ಅವರು ಯಲಹಂಕ ಎಸಿಪಿಗೆ ಆದೇಶಿಸಿದ್ದರು. ತನಿಖೆಯಲ್ಲಿ ರಾಜಣ್ಣನ ಕೃತ್ಯಗಳು ಸಾಬೀತಾದ ಹಿನ್ನೆಲೆಯಲ್ಲಿ ವರದಿ ಪರಿಶೀಲಿಸಿದ ಪೊಲೀಸ್ ಆಯುಕ್ತರು ಅಮಾನತು ಆದೇಶ ಹೊರಡಿಸಿದ್ದಾರೆ.

https://pragati.taskdun.com/vidhanasabha-electioncongresscandidate-listpostponed-k-shivakumar/
https://pragati.taskdun.com/sbi-employeedeathtriveni-sangamat-narasipura/
https://pragati.taskdun.com/special-puja-to-hindalaga-ganapati-sulebavi-mahalakshmi-mla-lakshmi-hebbalkar-started-election-campaign-on-ugadi-day-itself/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button