Kannada NewsLatest

*ನಾಳೆಯೇ ಅಭ್ಯರ್ಥಿಗಳ 3ನೇ ಪಟ್ಟಿ ಪ್ರಕಟ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ*

ಪ್ರಗತಿವಾಹಿನಿ ಸುದ್ದಿ; ಗೋಕಾಕ: ಕಾಂಗ್ರೆಸ್‌ ಹೈಕಮಾಂಡ್‌ 2ನೇ ಪಟ್ಟಿ ಇಂದು ಬಿಡುಗಡೆಗೊಳಿಸಿದ್ದು, ಶೀಘ್ರವೇ 3ನೇ ಪಟ್ಟಿ ಬಿಡುಗಡೆಗೊಳಿಸಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್‌ ಜಾರಕಿಹೊಳಿ ಹೇಳಿದರು.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಲ್ಲಾ ಆಯಾಮಗಳಿಂದ ಸರ್ವೇ ಮಾಡಿ ಹೈಕಮಾಂಡ್‌ ಅಭ್ಯರ್ಥಿಗಳ ಆಯ್ಕೆ ಮಾಡಿದ್ದು, ಸ್ಥಳೀಯ ನಾಯಕರ ಅಭಿಪ್ರಾಯ ಕೂಡ ಪಡೆದಿದೆ. ಕೆಲವು ಕ್ಷೇತ್ರಗಳ ಆಕಾಂಕ್ಷಿಗಳು ಒಮ್ಮತ ಸೂಚಿಸಿದ್ದಾಗ ತಾವೇ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದಾರೆ ಎಂದು ತಿಳಿಸಿದರು.

ನಾಳೆ 3ನೇ ಪಟ್ಟಿ ಪ್ರಕಟಗೊಳ್ಳುವ ಸಾಧ್ಯತೆ ಇದೆ. ಏಕೆಂದರೆ ಅಭ್ಯರ್ಥಿಗಳು ಮತದಾರರ ಮನೆ ಮನೆಗೆ ತಲುಪಬೇಕು. ಕೆಲವು ಕ್ಷೇತ್ರಗಳಲ್ಲಿ ಹೊಸಬರಿಗೆ ನೀಡಿದ್ದಾರೋ, ಹಳಬರಿಗೆ ಟಿಕೆಟ್‌ ನೀಡದ್ದಾರೋ ಅನ್ನುವುದು ಮುಖ್ಯವಲ್ಲ. ಪಕ್ಷದ ತೀರ್ಮಾಣವೇ ಅಂತಿಮವೆಂದು ಹೇಳಿದರು.
ಚಿತ್ರ ನಟ ಸುದೀಪ್‌ ಅವರಿಗೆ ಯಾವುದೇ ಪಕ್ಷಕ್ಕೆ ಸೇರ್ಪಡೆಯಾಗಲು ಅಥವಾ ಯಾವುದೇ ಪಕ್ಷದ ಪರ ಪ್ರಚಾರ ಮಾಡಲು ನಿರ್ಬಂಧವಿಲ್ಲ. ಆದರೆ ಸುದೀಪ್‌ ಅವರ ನಿಲುವಿನಲ್ಲಿ ಸ್ಪಷ್ಟತೆ ಇಲ್ಲ. ಸಿಎಂ ಹೇಳುತ್ತಾರೆ ನಟ ಸುದೀಪ್‌ ಬೆಜೆಪಿ ಸೇರ್ಪಡೆಯಾಗಿದ್ದಾರೆ ಎಂದು, ನಟ ಸುದೀಪ್‌ ಹೇಳುತ್ತಾರೆ ನನಗೆ ಬೇಕಾದ ವ್ಯಕ್ತಿಗಳ ಪರ ಅಷ್ಟೇ ಪ್ರಚಾರ ಮಾಡುತ್ತೇನೆ ಎಂದು ಹೇಳಿದ್ದಾರೆ. ಕಾರಣ ಸುದೀಪ್‌ ನಿಲುವಿನಲ್ಲಿ ಸ್ಪಷ್ಟತೆ ಇಲ್ಲ ಎಂದರು.
ಸುದೀಪ್‌ ಅಭಿಮಾನಿಗಳು ಎಲ್ಲಾ ಪಕ್ಷದಲ್ಲಿ ಇದ್ದಾರೆ. ಸುದೀಪ್‌ ಅವರ ಈ ನಿರ್ಧಾರದಿಂದ ಅಭಿಮಾನಿಗಳು ಬೇಸರಗೊಂಡಿದಾರೆ. ಬಿಜೆಪಿಯವರು ನಟ ಸುದೀಪ್‌ ಅವನ್ನು ಸಿಎಂ ಮಾಡುತ್ತೇವೆ ಎಂದು ಹೇಳಿ ಎಸ್ಟಿ ಸಮಾಜದ ಮತ ಪಡೆದರೆ ಆಶ್ಚರೆ ಪಡುವ ಅವಶ್ಯಕತೆ ಇಲ್ಲ. ಈಗಾಗಲೇ ಕಳೆದ ಚುನಾವಣೆಯಲ್ಲಿ ಶೀರಾಮುಲು ಅವರನ್ನು ಡಿಸಿಎಂ ಮಾಡುತ್ತೇವೆಂದು ಹೇಳಿ ಮಾತು ತಪ್ಪಿದರು. ಬಿಜೆಪಿ ಸುಳ್ಳು ಹೇಳುವುದರಲ್ಲೇ ನಿಸ್ಸಿಮರಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

Home add -Advt
https://pragati.taskdun.com/sslc-examcopy-case16-teacherssuspended/

Related Articles

Back to top button