Karnataka NewsLatest

ರಾಜಿನಾಮೆ ವಾಪಸ್ ಪಡೆಯುವ ಪ್ರಶ್ನೆಯೇ ಇಲ್ಲ

ಪ್ರಗತಿವಾಹಿನಿ ಸುದ್ದಿ, ಮುಂಬಯಿ:

ಯಾವುದೇ ಕಾರಣದಿಂದ ರಾಜಿನಾಮೆ ವಾಪಸ್ ಪಡೆಯುವ ಪ್ರಶ್ನೆಯೇ ಇಲ್ಲ ಎಂದು ಮುಂಬೈನಲ್ಲಿರುವ ಅತೃಪ್ತ ಶಾಸಕ ಸೋಮಶೇಖರ್‌ ಹೇಳಿದರು.

Home add -Advt

ನಾವು ಹತ್ತು ಜನ ಶಾಸಕರು ಇಲ್ಲಿದ್ದು, ನಾವು ನಮ್ಮ ರಾಜೀನಾಮೆಯನ್ನು ವಿಧಾನಸಭಾ ಅಧ್ಯಕ್ಷರು ಹಾಗೂ ರಾಜ್ಯಪಾಲರಿಗೆ ಸಲ್ಲಿಸಿದ್ದು, ನಾಳೆ ರಾಮಲಿಂಗರೆಡ್ಡಿ, ಮುನಿರತ್ನ, ಆನಂದ್‌ ಸಿಂಗ್‌ ಅವರು ನಮ್ಮನ್ನು ಸೇರಿಕೊಳ್ಳಲಿದ್ದಾರೆ ಎಂದು ಅವರು ಹೇಳಿದರು.

ಇಂದು ಮುಂಬೈಯಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ಯಾವುದೇ ಆಮಿಷಕ್ಕೆ ಬಗ್ಗುವುದಿಲ್ಲ, ಕಾಂಗ್ರೆಸ್‌ ಶಾಸಕಾಂಗ ಸಭೆಗೆ ಯಾವುದೇ ಕಾರಣಕ್ಕೂಹೋಗುವುದಿಲ್ಲ. ನಮ್ಮ ಬೇಡಿಕೆ ಸಿಎಂ ಬದಲಾವಣೆ ಮಾಡುವುದಲ್ಲ ಎಂದರು.

ನಾವು 13 ಮಂದಿ ಕೂಡ ಒಗ್ಗಟ್ಟಾಗಿದ್ದು, ನಾವು ಬೆಂಗಳೂರಿಗೆ ವಾಪಸ್ಸು ಬರೋದಿಲ್ಲ ಎಂದರು.

Related Articles

Back to top button