Latest

“ಬೊಮ್ಮಾಯಿ ಹಗರಣ ಬಯಲಿಗೆಳೆಯುತ್ತೇನೆ..” ಬಿಜೆಪಿ ಶಾಸಕ ನೆಹರು ಓಲೆಕಾರ ಏಕವಚನದಲ್ಲಿ ವಾಗ್ದಾಳಿ

ಪ್ರಗತಿವಾಹಿನಿ ಸುದ್ದಿ, ಹಾವೇರಿ: ಟಿಕೆಟ್ ಮಿಸ್ ಆದ ಹಿನ್ನೆಲೆಯಲ್ಲಿ ವ್ಯಘ್ರರಾಗಿರುವ ಶಾಸಕ ನೆಹರು ಓಲೆಕಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.

“ಬೊಮ್ಮಾಯಿ 1500 ಕೋಟಿ ರೂ. ನುಂಗಿ ಹಾಕಿದ ಭಂಡ” ಎಂದಿರುವ ಅವರು, “ಇಷ್ಟು ದಿನ ಬೊಮ್ಮಾಯಿ ರಾಜಕಾರಣವಿತ್ತು. ನಾಳೆಯಿಂದ ನಮ್ಮ ರಾಜಕಾರಣ ಆರಂಭವಾಗಲಿದೆ. ಅವನಿಗೆ ಹೇಗೆ ಟಕ್ಕರ್ ಕೊಡಬೇಕು ಅನ್ನೋದು ಗೊತ್ತಿದೆ. ಪಕ್ಷ ಹಾಳು ಮಾಡುತ್ತಿರುವ ಆತ ಅದು ಹೇಗೆ ಗೆಲ್ತಾನೋ ನೋಡ್ತೀನಿ. ನನಗೆ ಟಿಕೆಟ್ ಮಿಸ್ ಆಗಲು ಬೊಮ್ಮಾಯಿ ಕಾರಣ. ಎನ್ನು ಸ್ವಲ್ಪ ದಿನಗಳಲ್ಲಿ ಬಿಜೆಪಿ ಹೈಕಮಾಂಡ್ ಗೆ ನಾವೇನೆಂದು ಗೊತ್ತಾಗಲಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ತುಂತುರು ನೀರಾವರಿ ಯೋಜನೆಗೆ 1500 ಕೋಟಿ ರೂ. ಖರ್ಚು ಹಾಕಿರುವ ಬೊಮ್ಮಾಯಿ ತಮಗೆ ಬೇಕಾದವರಿಗೆ ಗುತ್ತಿಗೆ ಕೊಟ್ಟಿದ್ದಾರೆ. ಕಾಮಗಾರಿ ಸ್ಥಳದಲ್ಲಿ ಒಂದು ಪೈಪ್ ಕೂಡ ಇಲ್ಲ. ರೈತರು ಯಾವ ಬೆಳೆಯನ್ನೂ ಬೆಳೆಯಲಾಗುತ್ತಿಲ್ಲ ಎಂದು ಓಲೆಕಾರ ಆರೋಪಿಸಿದರು.

ಕಾರ್ಯಕರ್ತರೊಂದಿಗೆ ಸೇರಿ ಮುಂದಿನ ನಿರ್ಧಾರಗಳನ್ನು ಕೈಗೊಳ್ಳುತ್ತಿರುವುದಾಗಿ ಅವರು ತಿಳಿಸಿದ್ದಾರೆ.

Home add -Advt

https://pragati.taskdun.com/mass-resignation-of-office-bearers-in-belagavi-rural/
https://pragati.taskdun.com/contesting-as-a-non-party-candidate-astagi/
https://pragati.taskdun.com/mudigere-mla-mp-kumaraswamy-quits-bjp/

Related Articles

Back to top button