
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ‘ಉದರ ನಿಮಿತ್ತಂ ಬಹುಕೃತ ವೇಷಂ’ ಎಂಬುದು ಸದಾ ಸರ್ವದಾ ಪ್ರಸ್ತುತದಲ್ಲಿರುವ ಉಕ್ತಿ. ಅಂತೆಯೇ ನಿತ್ಯ ಇಂಥ ಒಂದಿಲ್ಲ ಒಂದು ವೇಷ ಎಲ್ಲಾದರೊಂದು ಮೂಲೆಯಲ್ಲಿ ಕಣ್ಣಿಗೆ ಬೀಳದಿರದು. ನಾನಾ ರೀತಿಯಲ್ಲಿ ಖ್ಯಾತಿ ಉಳಿಸಿಕೊಳ್ಳಲು, ಕೆಲ ಬಾರಿ ಸಹಿಸಲಸಾಧ್ಯದ ವೇಷಗಳಲ್ಲಿ ಸೆಲೆಬ್ರಿಟಿಗಳೂ ಕಾಣಿಸಿಕೊಳ್ಳುವುದುಂಟು.
ಅದೆಷ್ಟೋ ಸಿನಿ ಸ್ಟಾರ್ ಗಳು ತೊಟ್ಟ ಬಟ್ಟೆಯನ್ನೇ ಕಳಚಿಟ್ಟು ಬರ್ಥ್ ಡೇ ಸೂಟ್ ನಲ್ಲಿ ಕಾಣಿಸಿಕೊಂಡು ವಿವಾದ ಮಾಡಿದ್ದಾರೆ. ಆದರೆ… ಇಲ್ಲೊಬ್ಬ ನಿರೂಪಕಿ, ನಟಿಮಣಿ ಅದರ ‘ಅರ್ಧ ಪ್ರಯೋಗ’ ಮಾಡಿದ್ದಾರೆ ! ಅಂದರೆ ಮೇಲುಡುಗೆಯಾಗಿ ಕೇವಲ ಸ್ವೆಟ್ಟರ್ ಧರಿಸಿ ಪ್ಯಾಂಟ್ ಇಲ್ಲದೆ ನಡುಬೀದಿಯಲ್ಲಿ ನಿಂತು ಪೋಸ್ ಕೊಟ್ಟು ಪಡ್ಡೆಗಳೆಲ್ಲ ನಿದ್ದೆಗೆಡುವಂತೆ ಮಾಡಿದ್ದಾರೆ.
ಇವರು ಬೇರಾರೂ ಅಲ್ಲ, ತೆಲುಗು ನಿರೂಪಕಿ, ನಟಿ ಶ್ರವಂತಿ ಚೋಕಾರಪು. ಅಲ್ಲು ಅರ್ಜುನ್ ರಷ್ಮಿಕಾ ಮಂದಣ್ಣ ನಟನೆಯ ಪುಷ್ಪ ಚಿತ್ರದ ಸಂದರ್ಶನದ ವೇಳೆ ಬೆಳಕಿಗೆ ಬಂದ ಶ್ರವಂತಿ ಬಿಸ್ಕಿಟ್ ಬಣ್ಣದ, ಅಚ್ಚಕೆಂಪು ಬಣ್ಣದ ಹಾರ್ಟ್ ಚಿತ್ರವಿರುವ ಸ್ವೆಟ್ಟರ್ ಧರಿಸಿ ರಸ್ತೆಯಲ್ಲಿ ನಿಂತು ನಾನಾ ರೀತಿ ಪೋಸ್ ನೀಡಿ ತಮ್ಮ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.
ಈ ಫೋಟೊ ನೋಡಿದವರೆಲ್ಲ ಅವರನ್ನೀಗ ಇನ್ಸ್ಟಾಗ್ರಾಂನಲ್ಲಿ ಫಾಲೋ ಮಾಡುತ್ತಿದ್ದು ಅಂಥವರ ಸಂಖ್ಯೆ ಇನ್ನೂ ಸಿಕ್ಕಾಪಟ್ಟೆ ಏರಿಕೆಯಾಗುತ್ತಲೇ ಇದೆ. ಆದರೆ ಕೆಲ ಅಭಿಮಾನಿಗಳು ಮಾತ್ರ “ನಮ್ಮ ಕಣ್ಣು ತಂಪು ಮಾಡಿ ಲೈಮ್ಲೈಟ್ ನಲ್ಲಿ ಇರಲು ಪ್ರಯತ್ನಿಸಬೇಡಿ” ಅಂತ ಕಿವಿಮಾತು ಹೇಳಿದ್ದಾರೆ.
“ಚೆಂದದ ಸ್ವೆಟ್ಟರ್, ಅದಕ್ಕೆ ಸೂಟಾಗುವ ಚಪ್ಪಲಿ ಸಿಕ್ಕಿದಾಗ ಪ್ಯಾಂಟ್ ಸಿಕ್ಕಿಲ್ವಾ?” ಎಂದೂ ಕುಟುಕಿದ್ದಾರೆ. ಏನೇ ಆದರೂ ‘ಹಾಫ್ ಸೂಟ್’ ನಲ್ಲಿ ಬೋಲ್ಡ್ ಆಗಿ ಕಾಣುವ ಶ್ರವಂತಿ ಪೋಸ್ ಗೆ ಕ್ಲೀನ್ ಬೋಲ್ಡ್ ಆದವರ ಸಂಖ್ಯೆಯೇ ಜಾಸ್ತಿ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ