Kannada NewsKarnataka NewsUncategorized

*ಸಚಿವೆ ಶಶಿಕಲಾ ಜೊಲ್ಲೆಗೆ ಉತ್ತಮ ಜನಬೆಂಬಲ* *ಐತಿಹಾಸಿಕ ಗೆಲುವು ನಿಶ್ಚಿತ* *ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿಕೆ*


ಪಕ್ಷ ಬಿಟ್ಟು ಹೋದವರಿಗೆ ಜನರೇ ಪಾಠ ಕಲಿಸಲಿದ್ದಾರೆ – ಕೇಂದ್ರ ಸಚಿವ ಪ್ರಲ್ಹಾದ ಜೋಶಿ


ಪ್ರಗತಿವಾಹಿನಿ ಸುದ್ದಿ, ನಿಪ್ಪಾಣಿ: ’ಎಲ್ಲವನ್ನು ಕೊಟ್ಟ ಬಿಜೆಪಿ ಪಕ್ಷವನ್ನು ತೊರೆದು ಬೇರೆ ಪಕ್ಷಕ್ಕೆ ತೆರಳಿದವರಿಗೆ ಜನರೇ ಪಾಠ ಕಲಿಸಲಿದ್ದಾರೆ’ ಎಂದು ಕೇಂದ್ರ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ವಾಗ್ದಾಳಿ ನಡೆಸಿದರು.


ನಿಪ್ಪಾಣಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಚಿವೆ ಶಶಿಕಲಾ ಜೊಲ್ಲೆಯವರ ನಾಮಪತ್ರ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

’ಸಚಿವೆ ಶಶಿಕಲಾ ಜೊಲ್ಲೆಯವರಿಗೆ ಉತ್ತಮ ಜನಬೆಂಬಲವಿದ್ದು ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಸ್ಥಳೀಯ ಮತಕ್ಷೇತ್ರದಿಂದ ಅವರು ಐತಿಹಾಸಿಕ ಗೆಲುವು ಸಾಧಿಸಲಿದ್ದಾರೆ. ಅದೇ ರೀತಿ ಸಂಪೂರ್ಣ ಕರ್ನಾಟಕದಲ್ಲಿ ಬಿಜೆಪಿ ಪಕ್ಷಕ್ಕೆ ಒಳ್ಳೆಯ ಬೆಂಬಲ ವ್ಯಕ್ತವಾಗುತ್ತಿದ್ದು ಪೂರ್ಣ ಬಹುಮತದೊಂದಿಗೆ ಬಿಜೆಪಿ ಸರ್ಕಾರ ರಚಸಲಿದೆ’ ಎಂದು ಅವರು ಹೇಳಿದರು.
’ಅನುದಾನದ ವಿಷಯದಲ್ಲಿ ರೈಲ್ವೆ ಇಲಾಖೆಗೆ ಕೇಂದ್ರ ಸರ್ಕಾರವು ರಾಜ್ಯಸರ್ಕಾರಕ್ಕೆ ಪ್ರತಿವರ್ಷ ೬ ರಿಂದ ೭ ಸಾವಿರ ಕೋಟಿ ರೂ. ಗಳಷ್ಟು ಅನುದಾನ ನೀಡಿದೆ. ಇದಕ್ಕಿಂತ ಮೊದಲು ಕೇವಲ ೬೦೦-೭೦೦ ಕೋಟಿ ರೂ ಅನುದಾನ ಅಷ್ಟು ಬರುತ್ತಿತ್ತು. ಮೋದಿ ಅವರ ಜನಪ್ರಿಯತೆಯನ್ನು ನೋಡಿ ಕಾಂಗ್ರೆಸ್ ದಿಕ್ಕೆಟ್ಟು ಅಪಪ್ರಚಾರ ಮಾಡುತ್ತಿದೆ. ಕಾಂಗ್ರೆಸ್ ಪಕ್ಷದಲ್ಲಿ ನಾಯಕರಿಲ್ಲ ಅದರ ಪರಿಣಾಮ ಅವರು ಅಪಪ್ರಚಾರದ ಮತ್ತು ಜನರ ದಿಕ್ಕು ತಪ್ಪಿಸಿ ತಪ್ಪು ದಾರಿಗೆಳೆಯುವ ಕೆಲಸ ಮಾಡುತ್ತಿದೆ. ಬೇರೆಯವರ ಬೆಂಬಲ ಪಡೆದು ಎರಡು ಬಾರಿ ನಾವು ಸರ್ಕಾರ ರಚಿಸಿದ್ದೆವು. ಆದರೆ ಈ ಬಾರಿ ನಮ್ಮೆಲ್ಲ ಶಕ್ತಿ ಮೀರಿ ಪ್ರಯತ್ನ ನಡೆಸಿದ್ದು ಪೂರ್ಣ ಬಹುಮತದೊಂದಿಗೆ ಬಿಜೆಪಿ ಸರಕಾರ ರಚಿಸಲಿದೆ’ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಆರ್‌ಎಸ್‌ಎಸ್ ಸಂಘ ಪ್ರಚಾರಕ ಹಾಗೂ ಸ್ಥಳೀಯ ಕ್ಷೇತ್ರದ ಉಸ್ತುವಾರಿ ವಹಿಸಿಕೊಂಡಿರುವ ಡಾ. ಅಜಿತ ಗೋಪಚಾಡೆ, ಬಾಜಿರಾವ ಪೂಜಾರಿ, ಮಹಾಲಿಂಗೇಶ ಕೋಠಿವಾಲೆ, ನಗರಸಭೆ ಅಧ್ಯಕ್ಷ ಜಯವಂತ ಭಾಟಲೆ, ಉಪಾಧ್ಯಕ್ಷೆ ನೀತಾ ಬಾಗಡೆ, ಸಭಾಪತಿ ರಾಜೇಂದ್ರ ಗುಂದೇಶಾ, ಭರತ ಚವಾಣ, ಮೊದಲಾದವರು ಇದ್ದರು.

ಪ್ರಧಾನಿ ನರೇಂದ್ರ ಮೋದಿ, ಅಮಿತ ಶಹಾ ಹಾಗೂ ಯೋಗಿ ಆದಿತ್ಯನಾಥ ಅವರನ್ನು ಒಳಗೊಂಡ ಅವರ ಮುಂದಾಳತ್ವದಲ್ಲಿ ೨೫ ಕ್ಕೂ ಹೆಚ್ಚು ರ‍್ಯಾಲಿಗಳು ಮತ್ತು ಪ್ರಚಾರಸಭೆಗಳು ನಡೆಯಲಿವೆ ಎಂದು ಸಚಿವ ಜೋಶಿ ಹೇಳಿದರು.

https://pragati.taskdun.com/congress-party-went-bankrupt-without-getting-ten-star-campaigners/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button