ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಇಲಾಖೆಯ ಅನುಮತಿ ಪಡೆಯದೇ ಅನುದಾನ ರಹಿತವಾಗಿ ಅನಧಿಕೃತವಾಗಿ ಶಾಲೆಗಳನ್ನು ನಡೆಸುತ್ತಿದ್ದಲ್ಲಿ ಅಂತಹ ಶಾಲೆಗಳ ವಿರುದ್ಧ ಕ್ರಮ ಕೈಕೊಳ್ಳಲು ಶಾಲಾ ಶಿಕ್ಷಣ ಇಲಾಖೆ ಆಯುಕ್ತರು ನಿರ್ದೇಶಿಸಿದ್ದಾರೆ.
ಖಾಸಗಿ ಶಾಲಾ ಆಡಳಿತ ಮಂಡಳಿಗಳು ಕರ್ನಾಟಕ ಶಿಕ್ಷಣ ಕಾಯ್ದೆ ನಿಯಮ 1983 ಸೆಕ್ಷನ್ 30, 31 ರ ಪ್ರಕಾರ ಯಾವುದೇ ನೋಂದಣಿ ಪಡೆಯದೇ ಹೊಸ ಶಾಲೆ, ಹೆಚ್ಚುವರಿ ವಿಭಾಗ, ಉನ್ನತೀಕರಿಸಿದ ತರಗತಿಗಳು, ಅನಧಿಕೃತ ಪಠ್ಯಕ್ರಮ, ಇಲಾಖೆಯ ಪೂರ್ವಾನುಮತಿ ಇಲ್ಲದೇ ಸ್ಥಳಾಂತರ – ಹಸ್ತಾಂತರ, ಕೇಂದ್ರ ಪಠ್ಯ ಕ್ರಮ, ಒಂದು ವೇಳೆ ಕೇಂದ್ರ ಪಠ್ಯಕ್ರಮಕ್ಕೆ ಅನುಮತಿ ಪಡೆದಿದ್ದರೆ – ರಾಜ್ಯ 1 ಪಠ್ಯಕ್ರಮವನ್ನು ಬೋಧಿಸುತ್ತಿರುವುದು, ಇವೆಲ್ಲವೂಗಳೂ ಕೂಡ ಅನಧಿಕೃತ ಎಂದು ಪರಿಗಣಿಸಲ್ಪಡುತ್ತವೆ. ಈ ಕುರಿತು ಸರಕಾರ ನೀಡಿದ ನಿರ್ದೇಶನಗಳನ್ನು ಅನುಸರಿಸಲು ಸೂಚಿಸಲಾಗಿದೆ.
1) ಶಾಲಾ ನೋಂದಣಿ ಅನುಮತಿ ಪಡೆಯದೇ ನಡೆಯುತ್ತಿರುವ ಶಾಲೆಗಳನ್ನು ನಿಯಮಾನುಸಾರ ಮುಚ್ಚುವುದು; ಯಾವುದೇ ಆಡಳಿತ ಮಂಡಳಿಯು ಖಾಸಗಿ ಶಾಲೆಯನ್ನು ಪ್ರಾರಂಭಿಸಲು ಇಚ್ಚಿಸಿದ್ದಲ್ಲಿ ಅಂತಹ ಆಡಳಿತ ಮಂಡಳಿಯು ಸಕ್ಷಮ ಪ್ರಾಧಿಕಾರದಿಂದ ಅನುಮತಿಯನ್ನು ಪಡೆದ ನಂತರವೇ ಶಾಲೆಯನ್ನು ಪ್ರಾರಂಭಿಸುವುದು ಕಡ್ಡಾಯವಾಗಿರುತ್ತದೆ. ಆದರೆ ಅನುಮತಿ/ನೋಂದಣಿ ಪಡೆಯದೇ ನಡೆಯುತ್ತಿದ್ದಲ್ಲಿ ಅಂತಹ ಶಾಲೆಗಳನ್ನು ಮುಚ್ಚಲು ಅಗತ್ಯ ಕ್ರಮ ಕೈಕೊಳ್ಳುವುದು,
2) ನೋಂದಣಿ ಇಲ್ಲದೇ ಅನಧೀಕೃತವಾಗಿ ಉನ್ನತೀಕರಿಸಿದ ತರಗತಿಗಳನ್ನು ನಡೆಸುತ್ತಿರುವ ಶಾಲೆಗಳು ; ಆಢಳಿತ ಮಂಡಳಿಯವರು ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆದು ನಡೆಯುತ್ತಿರುವ ಶಾಲಗಳಲ್ಲಿ ಕರ್ನಾಟಕ ಶಿಕ್ಷಣ ಕಾಯ್ದೆ ನಿಯಮ 1983 ಸೆಕ್ಷನ್ 32 ರ ಪ್ರಕಾರವಾಗಿ ಉನ್ನತೀಕರಿಸಲು ಅವಕಾಶ ಇರುತ್ತದೆ. ಉದಾ- 6-8, ಹಾಗೂ 9-10) ಇಂತಹ ಶಾಲೆಗಳು 45 ದಿನಗಳೊಳಗಾಗಿ ನೋಂದಣಿಯನ್ನು ಪಡೆಯಲು ನೋಟಿಸನ್ನು ನೀಡುವುದು,, ನಿಗದಿಪಡಿಸಿದ ಸಮಯದಲ್ಲಿ ನೋಂದಣಿ ಪಡೆಯದಿದ್ದಲ್ಲಿ ಇವುಗಳನ್ನು ಅನಧೀಕೃತ ತರಗತಿಗಳು ಎಂದು ಪರಿಗಣಿಸತಕ್ಕದ್ದು, ಎಸ್.ಎ.ಟಿಎಸ್.ನಲ್ಲಿ ಇಂತಹ ವಿದ್ಯಾರ್ಥಿಗಳನ್ನು ಇಂದೀಕರಣವನ್ನು ಮಾಡದಂತೆ ನಿರ್ಬಂಧವನ್ನು ವಿಧಿಸಿ ಹತ್ತಿರದ ಶಾಲೆಗೆ ಮಕ್ಕಳನ್ನು ದಾಖಲಿಸಲು ನಿಯಮಾನುಸಾರ ಶಾಲೆ ಪ್ರಾರಂಭಕ್ಕೆ ಮುನ್ನ ಕ್ರಮವಹಿಸಲಾಗುವುದು.
ರಾಜ್ಯ ಪಠ್ಯಕ್ರಮದಲ್ಲಿ ಬೋಧಿಸಲು ಅನುಮತಿಯನ್ನು ಪಡೆದು ಅನಧಿಕೃತವಾಗಿ ಕೇಂದ್ರ ಪಠ್ಯಕ್ರಮದಲ್ಲಿ ಬೋಧಿಸುತ್ತಿರುವ ಶಾಲೆಗಳು :
ರಾಜ್ಯ ಪಠ್ಯಕ್ರಮದಲ್ಲಿ ಬೋಧಿಸಲು ಅನುಮತಿಯನ್ನು ಪಡೆದ ಶಾಲೆಗಳು ರಾಜ್ಯ ಪಠ್ಯ ಕ್ರಮದಲ್ಲಿಯೇ ಬೊಧಿಸಬೇಕಾಗುತ್ತದೆ. ಕೆಲವು ಶಾಲೆಗಳು ಕೇಂದ್ರಮಾದರಿ ಪಠ್ಯಕ್ರಮಗಳನ್ನು ಬೋಧಿಸಲು ಇಚ್ಚಿಸಿದ್ದಲ್ಲಿ ರಾಜ್ಯ ಸರಕಾರದಿಂದ “ನಿರಪೇಕ್ಷಣಾ ಪ್ರಮಾಣ ಪತ್ರ” ಪಡೆದು ಸಂಬಂಧಪಟ್ಟ ಮಂಡಳಿಯಿಂದ ಅಪಿಲೇಶನ್ ಪಡೆಯದೇ ಇತರೆ ಪಠ್ಯ ಕ್ರಮದಲ್ಲಿ ಬೋಧಿಸುವಂತಿಲ್ಲ. ರಾಜ್ಯ ಪಠ್ಯಕ್ರಮವನ್ನು ಬೋಧಿಸದೇ ಇತರೆ ಪಠ್ಯ ಕ್ರಮ (ಸಿ.ಬಿ.ಎಸ್.ಸಿ, ಐ.ಸಿ.ಎಸ್.ಸಿ.ಐ.ಬಿ) ಇಂತಹ ಶಾಲೆಗಳಿಗೆ ನೋಟಿಸ ಜಾರಿ ಮಾಡಿ ಕಡ್ಡಾಯವಾಗಿ ಆನುಮತಿ ಪಡೆದ ಪಠ್ಯಕ್ರಮದಲ್ಲಿ ಬೋಧಿಸಲು ಸಂಬಂದಪಟ್ಟ ಆಢಳಿತ ಮಂಡಳಿಗೆ ಸೂಚಿಸಲಾಗಿದೆ. ಈ ರೀತಿ ಅನುಮತಿಸದ ಪಠ್ಯ ಕ್ರಮ ಅನುಸರಿಸುತ್ತಿದ್ದಲ್ಲಿ 45 ದಿನಗಳಲ್ಲಿ ನಿಯಮಾನುಸಾರವಾಗಿ ಅನುಮತಿಯನ್ನು ಪಡೆದುಕೊಳ್ಳುವುದು, ಒಂದು ವೇಳೆ ಪಡೆಯದಿದ್ದಲ್ಲಿ ಶಾಲೆಯ ನೋಂದಣಿ/ಮಾನ್ಯತೆ ಹಿಂಪಡೆಯಲು ಕ್ರಮಕೈಕೊಳ್ಳಲಾಗುವುದು.
4) ನೋಂದಣಿ ಪಡೆದ ಮಾಧ್ಯಮದಲ್ಲಿ ಬೋಧಿಸದೇ ಅನಧಿಕೃತವಾಗಿ ಬೇರೆ ಮಾಧ್ಯಮದಲ್ಲಿ ಬೋಧಿಸುತ್ತಿರುವ ಶಾಲೆಗಳು ರಾಜ್ಯ ಪಠ್ಯಕ್ರಮದಲ್ಲಿ ಯಾವ ಮಾಧ್ಯಮದಲ್ಲಿ ಅನುಮತಿ ಪಡೆಯಲಾಗಿರುತ್ತದೆಯೋ ಅದೇ ಮಾಧ್ಯಮದಲ್ಲಿ ಬೋಧಿಸತಕ್ಕದ್ದು, ಅನುಮತಿ ಪಡೆದ ಮಾಧ್ಯಮವನ್ನು ಹೊರತು ಪಡಿಸಿ ಬೇರೆ ಮಾದ್ಯಮದಲ್ಲಿ ಬೋಧಿಸುತ್ತಿದ್ದಲ್ಲಿ ಅನಧಿಕೃತವಾಗಿ ಬೇರೆ ಮಾದ್ಯಮದಲ್ಲಿ ಬೋಧಿಸುವಂತೆ ಕಾರಣಕೇಳುವ ಸೂಚನೆಯನ್ನು ಜಾರಿ ಮಾಡಲಾಗುವುದು ಮತ್ತು 45 ದಿನಗಳೊಳಗೆ ಅವರು ಬೋಧಿಸುತ್ತಿರುವ ಮಾಧ್ಯಮಕ್ಕೆ ಅನುಮತಿಯನ್ನು ಪಡೆಯದೇ ಬೋಧಿಸುತ್ತಿದ್ದಲ್ಲಿ ಆ ಶಾಲೆಯ ನೋಂದಣಿ ಮಾನ್ಯತೆಯನ್ನು ಹಿಂಪಡೆಯಲು ಸೂಕ್ತ ಕ್ರಮವನ್ನು ಕೈಕೊಳ್ಳಲಾಗುವುದು.
5) ಅನಧೀಕೃತವಾಗಿ ಹೆಚ್ಚುವರಿ ವಿಭಾಗಗಳನ್ನು ಹೊಂದಿರುವ ಶಾಲೆಗಳ ಕುರಿತು ; ಕರ್ನಾಟಕ ಶಿಕ್ಷಣ ಕಾಯ್ದೆ ನಿಯಮ 1983 ಸೆಕ್ಷನ್ 30, ಮತ್ತು 31 ರ ಪ್ರಕಾರವಾಗಿ ಶಾಲೆಯನ್ನ ಪಾರಂಭಿಸಲು ನೋಂದಣಿಯನ್ನು ನೀಡುವಂತಹ ಸಂದರ್ಬದಲ್ಲಿ ತರಗತಿವಾರು | ವಿಭಾಗಕ್ಕೆ ಮಾತ್ರ ಅನುಮತಿಯನ್ನು ನೀಡಲಾಗಿರುತ್ತದೆ. ಆದರೆ ಕೆಲವು ಶಾಲೆಗಳು ಒಂದಕ್ಕಿಂತ ಹೆಚ್ಚುವರಿ ವಿಭಾಗಗಳನ್ನು ಸ್ವ- ಇಚ್ಛೆಯಂತೆ ಇಲಾಖೆಯ ಗಮನಕ್ಕೆ ತರದೇ ಹೆಚ್ಚುವರಿ ವಿಭಾಗಗಳನ್ನು ಪ್ರಾರಂಭಿಸಿದ್ದಲ್ಲಿ ನಿಯಮಗಳಿಗೆ ಏರುದ್ಧವಾಗಿರುತ್ತದೆ. ಕಾಲಾವಕರವನ್ನು ನೀಡಲಾಗಿದೆ, ಇಂತಹ ಶಾಲೆಗಳಿಗೆ 45 ದಿನಗಳೊಳಗೆ ಅನುಮತಿಯನ್ನು ಪಡೆಯಲು
6) ಇಲಾಖೆಯ ಪೂರ್ವಾನುಮತಿ ಇಲ್ಲದೇ ಸ್ಥಳಾಂತರ ಅಥವಾ ಹಸ್ತಾಂತರಗೊಂದ ಶಾಲೆಗಳು ; ಕರ್ನಾಟಕ ಶಿಕ್ಷಣ ಕಾಯ್ದೆ ನಿಯಮ 1983 ಸೆಕ್ಷನ್ 41(5) Dobab-2006 do ನೋಂದಣಿ/ಅನಮತಿ ಪಡೆದ ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹಸ್ತಾಂತರ ಸ್ಥಳಾಂತರಕ್ಕೆ ಅವಕಾಶ ಇರುತ್ತದೆ. ಹೀಗೆ ಸ್ಥಳಾಂತರಗೊಂಡ ಶಾಲೆಯು ಜೇಷ್ಠತೆಯಲ್ಲಿ ಎಷ್ಟೇ ಹಿರಿಯದ್ದಾಗಿದ್ದರೂ ಅದನ್ನು ಹೊಸ ಶಾಲೆ ಎಂದು ಪರಿಗಣಿಸಲಾಗುವುದು. ಆದ್ದರಿಂದ ಇಲಾಖೆಯ ಅನುಮತಿಯನ್ನು ಪಡೆದ ಸ್ಥಳದಲ್ಲಿಯೇ ಶಾಲೆಯನ್ನು ನಡೆಸಬೇಕಾಗುತ್ತದೆ. ತಪ್ಪಿದ್ದಲ್ಲಿ ಸೆಕ್ಷನ್-39 ಅಡಿಯಲ್ಲಿ ನೋಂದಣಿಯನ್ನು ಹಿಂಪಡೆಯಲು ಅವಕಾಶವಿರುತ್ತದೆ. ಸ್ಥಳಾಂತರ /ಹಸ್ತಾಂತರ ಅನುಮತಿ ಪಡೆಯದೇ ನಡೆಯುತ್ತಿದ್ದಲ್ಲಿ ಇಲಾಖೆಯ ನಿಯಮಗಳಿಗೆ ವಿರುದ್ಧವಾಗಿರುತ್ತದೆ. ಒಂದು ವೇಳೆ ಸ್ಥಳಾಂತರ ಹಸ್ತಾಂತರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಲ್ಲಿ ಹೊಸ ಶಾಲೆಯಗಳ ನೋಂದಣಿ ನಿಯಮಗಳ ಪ್ರಕಾರ ಭೂಪರಿವರ್ತಿತ, ಮತ್ತು ಒದಗಿಸಬೇಕಾಗಿರುವ ಮೂಲಭೂತ ಸೌಕರ್ಯಗಳು ಸುರಕ್ಷತಾ ನಿಯಮಗಳು ಅನ್ವಯಿಸುತ್ತವೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ