ಯಾವ ನೈತಿಕತೆಯಿಂದ ಮತ ಕೇಳ್ತೀರಿ? ಕಾಂಗ್ರೆಸ್, ಎನ್ ಸಿಪಿಗೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಪ್ರಶ್ನೆ; ಸಚಿವೆ ಶಶಿಕಲಾ ಜೊಲ್ಲೆ ಪರ ಸ್ಮೃತಿ ಇರಾನಿ ಭರ್ಜರಿ ಪ್ರಚಾರ
ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ: ಕೊರೊನಾ ಸಂದರ್ಭದಲ್ಲಿ ಜನರ ಸಂಕಷ್ಟ ನೀಗಿಸಿದ್ದು ಬಿಜೆಪಿ ಹೊರತು ಕಾಂಗ್ರೆಸ್. ಎನ್ ಸಿಪಿ ಅಲ್ಲ. ಯಾವ ನೈತಿಕತೆಯಿಂದ ಜನರ ಬಳಿ ಮತ ಕೇಳತೀರಾ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸ್ಮೃತಿ ಇರಾನಿ ಕಾಂಗ್ರೆಸ್ ಮತ್ತು ಎನ್ ಸಿಪಿ ನಾಯಕರ ವಿರುದ್ಧ ಹರಿಹಾಯ್ದರು.
ನಿಪ್ಪಾಣಿ ವಿಧಾನಸಭೆ ಬಿಜೆಪಿ ಅಭ್ಯರ್ಥಿ ಸಚಿವೆ ಶಶಿಕಲಾ ಜೊಲ್ಲೆ ಪರ ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ನಿಪ್ಪಾಣಿ ಕ್ಷೇತ್ರದಲ್ಲಿ ಹೆಚ್ಚಿಗೆ ರೈತರು ಇದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿ ರೈತರಿಗೆ 10 ಸಾವಿರ ರೂ ಪರಿಹಾರ ನೀಡಿದ್ದಾರೆ. ಮಹಿಳೆಯರ ಸಬಲಿಕರಣವಾಗಲು ಅನೇಕ ಯೋಜನೆಗಳನ್ನು ಬಿಜೆಪಿ ರೂಪಿಸಿದೆ ಎಂದರು.
ದಲಿತರ ವಿರೋಧಿ ಎಂದು ಕಾಂಗ್ರೆಸ್ ಆರೋಪಿಸುತ್ತಾ ಬಂದಿದೆ. ಆದರೆ ದಲಿತರನ್ನು ರಾಷ್ಟ್ರಪತಿ ಮಾಡಿದ್ದು ಬಿಜೆಪಿ ಎಂಬ ಹೆಗ್ಗಳಿಕೆ ಇದೆ. ಆಧಿವಾಸಿ ಮಹಿಳೆಗೆ ರಾಷ್ಟ್ರಪತಿ ನೀಡಿ ಮಹಿಳೆಯರ ಗೌರವ ಹೆಚ್ಚಿಸಿದೆ ಎಂದರು.
ಕೋವಿಡ್ ವ್ಯಾಕ್ಸಿನ್ ವನ್ನು ವಿದೇಶಿದಿಂದ ತನ್ನಿ ಎಂದು ಕಾಂಗ್ರೆಸ್ ನಾಯಕರು ಹೇಳಿದರು. ಆದರೆ ಭಾರತದಲ್ಲಿ ವ್ಯಾಕ್ಸಿನ್ ತಯಾರಿಸಿ ಇಡೀ ವಿಶ್ವಕ್ಕೆ ಹಂಚಿದೆ. ಡಿ.ಕೆ.ಶಿವಕುಮಾರ, ಸಿದ್ದರಾಮಯ್ಯ ಇದ್ದರೆ ಉಚಿತವಾಗಿ ವ್ಯಾಕ್ಸಿನ್ ನೀಡುತ್ತಿರಲಿಲ್ಲ ಎಂದರು.
ನಿಪ್ಪಾಣಿ ಮತಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಸಚಿವೆ ಶಶಿಕಲಾ ಜೊಲ್ಲೆ ಶ್ರಮೀಸಿದ್ದಾರೆ. ಅವರಿಗೆ ಮತ ನೀಡಿ ಆಯ್ಕೆ ಮಾಡಬೇಕು ಎಂದರು.
ಕೇಂದ್ರ ಶಿಕ್ಷಣ ಇಲಾಖೆಯ ರಾಜ್ಯಸಚಿವೆ ಅಣ್ಣಪೂರ್ಣಾದೇವಿ ಮಾತನಾಡಿ. ಕೇಂದ್ರ ಸರಕಾರದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರದಲ್ಲಿ ಮಹಿಳೆಯರ ಸಶಕ್ತವಾಗಲು ಹಲವು ಯೋಜನೆ ರೂಪಿಸಿ ಮಹಿಳೆಯರ ಪ್ರಗತಿಗೆ ಹೆಚ್ಚಿನ ಒತ್ತು ನೀಡಿದ್ದಾರೆ. ಮಹಿಳೆಯರ ಆರೋಗ್ಯದ ಹಿತ ಕಾಪಾಡಲು ಉಜ್ವಲಾ ಯೋಜನೆ ರೂಪಿಸಿ ಕೋಟ್ಯಾಂತರ ಮಹಿಳೆರಿಗೆ ಅನುಕೂಲ ಕಲ್ಪಿಸಲಾಗಿದೆ. ಕೇಂದ್ರ ಸರಕಾರ ಕೋವಿಡ್ ನಿಯಂತ್ರಿಸಲು ಪ್ರಯತ್ನ ಮಾಡಿದೆ. ಕೋವಿಡ್ ಲಸಿಕೆ ಕಂಡು ಹಿಡಿದು ದೇಶ ವಿದೇಶಿಗಳ ರಾಷ್ಟ್ರ ಜನರ ಆರೋಗ್ಯ ಕಾಪಾಡಿರುವ ಸಂತೃಪ್ತಿ ಸರಕಾರಕ್ಕೆ ಇದೆ.
ದೇಶದಲ್ಲಿ ಇರುವ ಡಬಲ್ ಇಂಜನ ಸರಕಾರದಿಂಸ ದೇಶದ ಪ್ರತಿಯೊಬ್ಬ ನಾಗರಿಕನಿಗೂ ಸರಕಾರದ ಯೋಜನೆ ಲಭಿಸಿದೆ ಎಂದರು.
ಬಿಜೆಪಿ ಅಭ್ಯರ್ಥಿ ಶಶಿಕಲಾ ಜೊಲ್ಲೆ ಮಾತನಾಡಿ. ನಿಪ್ಪಾಣಿ ಕ್ಷೇತ್ರದಲ್ಲಿ ಎರಡು ಭಾರಿ ಅಯ್ಕೆ ಮಾಡಿ ಜನರ ಸೇವೆಗೆ ಅನುಕೂಲ ಕಲ್ಪಿಸಿದ್ದೀರಿ.ಈಗ ಹ್ಯಾಟ್ರಿಕ್ ಗೆಲುವಿಗೆ ನಿಮ್ಮೇಲ್ಲರ ಸಹಕಾರ ಬೇಕಾಗಿದೆ ಎಂದರು. ಕ್ಷೇತ್ರದಲ್ಲಿ ಕುಡಿಯುವ ನೀರು. ಜಲಜೀವನ ಮಿಷನ್. ರಸ್ತೆ. ಚರಂಡಿ ಹೀಗೆ ಹಲವು ಯೋಜನೆ ಅನುಷ್ಟಾನ ಮಾಡಲಾಗಿದೆ ಎಂದರು.
ಮೇಲೆ ಸಂಸದ ಅಣ್ಣಾಸಾಹೇಬ ಜೊಲ್ಲೆ. ಹಾಲಸಿದ್ದನಾಥ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಚಂದ್ರಕಾಂತ ಕೊಠಿವಾಲೆ. ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಶಾಂಭವಿ ಅಶ್ವಥಪೂರ. ನಿಪ್ಪಾಣಿ ನಗರಾಧ್ಯಕ್ಷ ಜಯವಂತ ಬಾಟಲೆ. ಪವನ ಮಾನ್ವಿ. ರುಷಭ ಜೈನ. ಭಾರತಿ ಮಗದುಮ್ಮ. ನೀತಾ ಬಾಗಡೆ. ರಾಜೇಶ ಗುಂದೇಶಾ.ಬಸವಪ್ರಸಾದ ಜೊಲ್ಲೆ ಮುಂತಾದವರು ಇದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ