ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳ ಪ್ರಚಾರ ಚುರುಕುಗೊಂಡಿದೆ. ಮೇ 10ರಂದು ಚುನಾವಣೆ ನಡೆಯಲಿದ್ದು, ಮೇ 13ರಂದು ಫಲಿತಾಂಶ ಪ್ರಕಟವಾಗಲಿದೆ. ಆದರೆ ನಾಳೆಯಿಂದಲೇ ಮತದಾನ ಆರಂಭವಾಗಲಿದೆ ಎಂಬುದು ಗಮನಿಸಬೇಕಾದ ಅಂಶ.
ನಾಳೆ ಏಪ್ರಿಲ್ 29ರಿಂದ ಮತದಾನ ಪ್ರಕ್ರಿಯೆ ಆರಂಭವಾಗಲಿದೆ. ಬ್ಯಾಲೆಟ್ ಪೇಪರ್ ವೋಟಿಂಗ್ ನಾಳೆಯಿಂದ ಮೇ 6ವರೆಗೆ ನಡೆಯಲಿದೆ. ಬ್ಯಾಲೇಟ್ ಪೇಪರ್ ಮತದಾನದಲ್ಲಿ 80 ವರ್ಷ ಮೇಲ್ಪಟ್ಟ ವೃದ್ಧರು, ವಿಕಲಚೇತನರು, ಚುನಾವಣಾ ಕರ್ತವ್ಯದಲ್ಲಿ ಭಾಗಿಯಾಗುವ ಪೊಲೀಸ್, ಚುನಾವಣಾ ಸಿಬ್ಬಂದಿಗಳು ಮಾತ್ರ ಮತದಾನ ಮಾಡಬಹುದು.
ಇನ್ನುಳಿದವರು ಮೇ 10ರಂದು ಮತದಾನ ಮಾಡಬೇಕು. 80 ವರ್ಷಕ್ಕಿಂತ ಮೇಲ್ಪತ್ಟವರು ಒಟ್ಟು 80,250 ಮತದಾರರಿದ್ದಾರೆ. ಇದರಲ್ಲಿ 9,152 ಜನ ಬೆಂಗಳೂರಿನಲ್ಲಿದ್ದಾರೆ. ಇವರೆಲ್ಲರೂ ಮನೆಯಿಂದ ಮತದಾನಕ್ಕೆ ನೋಂದಾಯಿಸಿದ್ದಾರೆ. 19,279 ವಿಕಲ ಚೇತನರು, 13,771 ಅಗತ್ಯ ಸೇವೆ ಒದಗಿಸುವವರು ನೋಂದಾಯಿಸಿದ್ದಾರೆ.
ಇನ್ನು 80 ವರ್ಷ ಮೇಲ್ಪಟ್ಟವರಿಗೆ ಚುನಾವಣಾ ಸಿಬ್ಬಂದಿ ಮನೆ ಬಾಗಿಲಿಗೆ ಬ್ಯಾಲೆಟ್ ಪೇಪರ್ ನೀಡುತ್ತಾರೆ. ಈ ಮೂಲಕ ಹಿರಿಯ ನಾಗರಿಕರು ಹಾಗೂ ವಿಕಲ ಚೇತನರು ಗೌಪ್ಯವಾಗಿ ಮತದಾನ ಮಾಡಬಹುದು. ಸ್ಥಳದಲ್ಲಿಯೇ ಚುನಾವಣಾ ಸಿಬ್ಬಂದಿ ಹಾಗೂ ಪೊಲಿಸರು ಕೂಡ ಉಪಸ್ಥಿತರಿರಲಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ