ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ನಗರದ ರೈಲು ನಿಲ್ದಾಣದ ಎದುರಿಗಿರುವ ಮಿಲಿಟರಿ ಬಾಲಕರ ವಸತಿ ನಿಲಯಕ್ಕೆ 2023-2024ನೇ ಶೈಕ್ಷಣಿಕ ವರ್ಷಕ್ಕೆ ಯುದ್ಧ ಸಂತ್ರಸ್ಥರು ಮತ್ತು ಮಾಜಿ ಸೈನಿಕರ ಮಕ್ಕಳಿಗೆ ಪ್ರವೇಶಕ್ಕಾಗಿ ಅರ್ಜಿಗಳನ್ನು ಅಹ್ವಾನಿಸಲಾಗಿದೆ.
ವಿದ್ಯಾರ್ಥಿಗಳು ಬೆಳಗಾವಿ ನಗರದ ಶೈಕ್ಷಣಿಕ ಸಂಸ್ಥೆಗಳಲ್ಲಿ 5ನೇ ತರಗತಿಯಿಂದ ಪಿಯುಸಿ, ಡಿಪ್ಲೋಮಾ ಹಾಗೂ ಐಟಿಐದಲ್ಲಿ ವ್ಯಾಸಾಂಗಕ್ಕಾಗಿ ಪ್ರವೇಶವನ್ನು ಪಡೆದಿರಬೇಕು. ನಿಲಯದಲ್ಲಿ ಉಪಹಾರ, ಊಟ ಹಾಗೂ ವಸತಿ ಉಚಿತವಾಗಿರುತ್ತದೆ.
ಆಸಕ್ತ ಮಾಜಿ ಸೈನಿಕರು ಹಾಗೂ ಯುದ್ಧ ಸಂತ್ರಸ್ಥರು ತಮ್ಮ ಮಕ್ಕಳಿಗೆ ನಿಲಯದ ಪ್ರವೇಶಕ್ಕೆ ಅರ್ಜಿಯನ್ನು ಜಂಟಿ ನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುರ್ನವಸತಿ ಇಲಾಖೆ, ಬೆಳಗಾವಿ ಇವರ ಕಾರ್ಯಾಲಯದಿಂದ ಉಚಿತವಾಗಿ ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9449880818 ಕ್ಕೆ ಸಂಪರ್ಕಿಸಬಹುದು ಎಂದು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ