ಪ್ರಗತಿವಾಹಿನಿ ಸುದ್ದಿ, ನಿಪ್ಪಾಣಿ: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಸ್ಥಳೀಯ ನಗರದ ವಿವಿಧ ವಾರ್ಡ್‌ಗಳಲ್ಲಿ ಬಸವಜ್ಯೋತಿ ಯೂಥ್ ಫೌಂಡೇಶನ್ ಅಧ್ಯಕ್ಷ ಬಸವಪ್ರಸಾದ ಜೊಲ್ಲೆ ಮನೆಮನೆಗೆ ತೆರಳಿ ಬಿಜೆಪಿ ಅಭ್ಯರ್ಥಿ ಸಚಿವೆ ಶಶಿಕಲಾ ಜೊಲ್ಲೆ ಪರ ಮತಯಾಚಿಸಿದರು.
ವಾರ್ಡ್ ನಂ.೩, ೪, ೧೦, ೧೪, ೧೫, ೧೮, ೨೫ ಮತ್ತು ೨೬ರಲ್ಲಿ ಅವರು ಮನೆ ಮನೆಗೆ ತೆರಳಿ ಬಿಜೆಪಿ ಅಭ್ಯರ್ಥಿ ಶಶಿಕಲಾ ಜೊಲ್ಲೆಯವರು ಮಾಡಿರುವ ಅಭಿವೃದ್ದಿ ಕಾರ್ಯಗಳ ಮಾಹಿತಿ ನೀಡಿದರು. ಕ್ಷೇತ್ರದಲ್ಲಿ ಮುಂದೆಯೂ ಅಭಿವೃದ್ಧಿ ಕಾರ್ಯಗಳು ನಿರಂತರವಾಗಿರಲು ಸಚಿವೆ ಜೊಲ್ಲೆಯವರನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಜಯವಂತ ಭಾಟಲೆ, ಮಾಜಿ ಉಪಾಧ್ಯಕ್ಷ ಸುನಿಲ ಪಾಟೀಲ, ಬಿಜೆಪಿ ನಗರ ಘಟಕ ಅಧ್ಯಕ್ಷ ಪ್ರಣವ ಮಾನವಿ, ಅಭಯ ಮಾನವಿ, ನಗರಸಭೆ ಸದಸ್ಯರಾದ ಗೀತಾ ಪಾಟೀಲ, ಸೋನಾಲಿ ಉಪಾಧ್ಯೆ, ವಿಜಯ ಟವಲೆ, ದೀಪಕ ಶಿಂಧೆ, ಬಾಳಾಸಾಹೇಬ ಜೋರಾಪುರೆ, ರೋಹನ ಕೋಠಿವಾಲೆ, ಅನಿತಾ ಮೈಶಾಳೆ, ಅರುಣ ಮುದಕುಡೆ, ಅಭಿನಂದನ ಮುದಕುಡೆ, ಡಾ. ಮಹೇಶ ಐನಾಪುರೆ, ರವೀಂದ್ರ ಚಂದ್ರಕುಡೆ, ಮುಕುಂದ ಗಡಕರಿ, ಬಂಡಾ ಘೋರ್ಪಡೆ, ಯುವಮೋರ್ಚಾ ಅಧ್ಯಕ್ಷ ಪ್ರಸಾದ ಔಂಧಕರ, ಅರುಣ ಕಾಶಿದಕರ, ರವಿ ಮಠಪತಿ, ವಿನಾಯಕ ರಾನಮಳೆ, ಶಾಂತಿನಾಥ ಮುದಕುಡೆ, ಮಂಗಲ ರುದ್ರಗೌಡ, ಮೊದಲಾದವರು ಸಹಿತ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ