Kannada NewsKarnataka NewsLatest

ಕಿಲ್ಲಾ ಕೆರೆ ಆವರಣದಲ್ಲಿ ನಿರಂತರ ರಾಷ್ಟ್ರಧ್ವಜ ಹಾರಿಸಲು ಸೂಚನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ನಗರದ ಕಿಲ್ಲಾ ಕೆರೆಯ ಆವರಣದಲ್ಲಿರುವ ಅತೀ ಎತ್ತರದ ರಾಷ್ಟ್ರ ಧ್ವಜ ನಿರಂತರವಾಗಿ ಹಾರಾಡಬೇಕೆಂದು ಪಾಲಿಕೆ ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಉತ್ತರ ಮತಕ್ಷೇತ್ರದ ಶಾಸಕ ಆಸೀಫ್ (ರಾಜು) ಸೇಠ್ ಹೇಳಿದರು.

ಮಂಗಳವಾರ ನಗರದ ಕೋಟೆ ಕೆರೆ ಆವರಣದಲ್ಲಿರುವ ರಾಷ್ಟ್ರ ಧ್ವಜವನ್ನು ನಿರಂತರವಾಗಿ ಹಾರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಬೆಳಗಾವಿಯ ನಗರದಲ್ಲಿ ಕಿಲ್ಲಾ ಕೋಟೆಯ ಕೆರೆಯಲ್ಲಿ ರಾಷ್ಟ್ರ ಧ್ವಜ ದಿನವೂ ಹಾರಾಡಬೇಕೆಂದು ಪ್ರಣಾಳಿಕೆಯಲ್ಲಿತ್ತು. ಮೊದಲು ರಾಷ್ಟ್ರ ಧ್ವಜ ಸ್ವಾಭಿಮಾನ, ಗೌರವ, ಹೃದಯದಿಂದ ಬರಬೇಕು ಎಂದು ಇಲ್ಲಿ ಹಾರಾಡಬೇಕು ಎಂದರು.

ಪ್ರತಿಯೊಬ್ಬರೂ ದೇಶದ ಧ್ವಜದ ಬಗ್ಗೆ ಗೌರವ ನೀಡಬೇಕು. ಕೇವಲ ಮಾತಿನಲ್ಲಿ ದೇಶದ ಪರವಾಗಿ ಕೆಲಸ ಮಾಡುವುದು ಬೇಡ. ರಾಷ್ಟ್ರೀಯ ಹೆದ್ದಾರಿಯಲ್ಲಿ ಹೋಗುತ್ತಿರುವಾಗ ಎಲ್ಲರೂ ತಲೆ ಎತ್ತಿ ಧ್ವಜವನ್ನು ನೋಡುವಂತಾಗಬೇಕು ಎಂದರು.

ಎಲ್ಲರೂ ತೆರಿಗೆ ಕಟ್ಟುವುದು ರಾಜ್ಯ, ಜಿಲ್ಲೆ, ನಗರ ಅಭಿವೃದ್ಧಿಯಾಗಬೇಕು ಎಂಬ ಕಾರಣಕ್ಕೆ. ಬಾಕಿ ಉಳಿದ ಕಾಮಗಾರಿಯ ಬಗ್ಗೆ ಪಾಲಿಕೆಯ ಅಧಿಕಾರಿಗಳ ಜೊತೆಗೆ ಮಾತನಾಡಿದ್ದೇನೆ. 15 ದಿನ ಕಾಲಾವಕಾಶ ನೀಡಿದ್ದಾರೆ. ಹೈಮಾಸ್ಟ್ ಇದ್ದ ಕಡೆಗಳಲ್ಲಿ ಅದನ್ನು ದುರಸ್ಥಿತಿ ಮಾಡಬೇಕು. ಕೆಲಸ ಮಾಡದ ಗುತ್ತಿಗೆದಾರರ ಮೇಲೆ ಮುಲಾಜಿಲ್ಲದೆ ಕ್ರಮ ಕೈಗೊಂಡು ಬೇರೆ ಗುತ್ತಿಗೆದಾರರನ್ನು ನೇಮಕ ಮಾಡಲಾಗುವುದು ಎಂದರು.
ಬೆಳಗಾವಿ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆಯ ಕುರಿತು ಎರಡು- ಮೂರು ದಿನದಲ್ಲಿ ಅಧಿಕಾರಿಗಳ ಜೊತೆಗೆ ಚರ್ಚೆ ನಡೆಸಿ ಸಮಸ್ಯೆ ಬಗೆ ಹರಿಸುವ ಪ್ರಯತ್ನ ಮಾಡುತ್ತೇನೆ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ಮುಖ್ಯಮಂತ್ರಿ ಮಾಡುವುದರಲ್ಲಿ ಹೈಕಮಾಂಡ್ ತಿರ್ಮಾನ ಕೈಗೊಳ್ಳುತ್ತದೆ. ಅಲ್ಲದೆ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಡಿಸಿಎಂ ಆಗಬೇಕು ಎಂದು ಈ ಹಿಂದೆ ಭಾಷಣದಲ್ಲಿ ಹೇಳಿದ್ದೆ. ಅವರು ಪಕ್ಷ ಸಂಘಟನೆಯಲ್ಲಿ ಸಾಕಷ್ಟು ಶ್ರಮ ಪಟ್ಟಿದ್ದಾರೆ. ಈಗಲೂ ನನ್ನ ವೈಯಕ್ತಿ ಆಸೆ ಇದೆ. ಅವರು ಡಿಸಿಎಂ ಆಗಬೇಕು ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ಮಾಜಿ ಶಾಸಕ ಫಿರೋಜ್ ಸೇಠ್ ಮಾತನಾಡಿ, ಕಳೆದ 2018ರಲ್ಲಿ ಪೂರ್ಣಗೊಳ್ಳಬೇಕಿದ್ದ ಕೆಲ ಕಾಮಗಾರಿಗಳನ್ನು ಕೆಲವರು ರಾಜಕಾರಣ ಮಾಡಿ ಬಂದ್ ಮಾಡಿದ್ದಾರೆ. ನಿಜವಾದ ಸ್ಮಾರ್ಟ್ ಸಿಟಿಯ ಕಾಮಗಾರಿಯನ್ನು ಪ್ರಾರಂಭಿಸಬೇಕು. ಪ್ರಾರಂಭದಲ್ಲಿ ಇದ್ದ ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿ ಪುನಃ ಪ್ರಾರಂಭವಾಗಬೇಕು. ಈ ಹಿಂದಿನ ಯೋಜನೆಯನ್ನು ಪರಿಶೀಲನೆ ಮಾಡಲು ಶಾಸಕ ರಾಜು ಸೇಠ್ ಗೆ ತಿಳಿಸಿದ್ದೇನೆ. ಎಲ್ಲ ಅಧಿಕಾರಿಗಳು ಉತ್ತಮವಾದ ಆಡಳಿತ ಮಾಡಲು ನಮ್ಮ ಸಹಕಾರ ಸದಾ ಇರುತ್ತದೆ ಎಂದರು.

ಬೆಳಗಾವಿ ಸ್ಮಾರ್ಟ್ ಸಿಟಿ ಕಾಮಗಾರಿಯಾಗುತ್ತಿರುವುದು ಸಾರ್ವಜನಿಕರ ಹಣದಿಂದ. ಇದರಲ್ಲಿ ಭ್ರಷ್ಟಾಚಾರ ಮಾಡುವುದನ್ನು ಯಾರೂ ಸಹಿಸುವುದಿಲ್ಲ. ಅಶೋಕನಗರದಲ್ಲಿ ಕ್ರೀಡಾಂಗಣ ಇಲ್ಲಿಯವರೆಗೂ ಪೂರ್ಣಗೊಂಡಿಲ್ಲ. ಅಲ್ಲದೆ, ಕೆಲ ಕಡೆಗಳಲ್ಲಿ ವಿದ್ಯುತ್ ಕಂಬ ಸರಿಯಾಗಿ ಅಳವಡಿಸಿಲ್ಲ. ಎಲ್ಲೆಲ್ಲಿ ವಿದ್ಯುತ್ ಕಂಬ ಬೇಕು ಅಲ್ಲಲ್ಲಿ ಅಳವಡಿಕೆ ಮಾಡಬೇಕೆಂದು ಶಾಸಕರಿಗೆ ವಿನಂತಿ ಮಾಡಿದ್ದೇನೆ ಎಂದರು.

ಈ ಸಂದರ್ಭದಲ್ಲಿ ಪಾಲಿಕೆಯ ಸದಸ್ಯ ಸಮೀವುಲ್ಲಾ ಮಾಡಿವಾಲೆ, ಗಜು ಧರನಾಯಕ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

https://pragati.taskdun.com/young-woman-abducted-by-thugs-demanding-money-complaint-filed/
https://pragati.taskdun.com/k-n-rajannareactionsiddaramaiahcm/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button