*ಈಜಲು ಹೋಗಿ ಕಾವೇರಿ ನದಿಯಲ್ಲಿ ಮುಳುಗಿದ ಇಬ್ಬರು ಬಾಲಕರು; ದುರ್ಮರಣ

ಪ್ರಗತಿವಾಹಿನಿ ಸುದ್ದಿ; ಮೈಸೂರು: ಬಾಲಕರಿಬ್ಬರು ಕಾವೇರಿ ನದಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ತಲಕಾಡಿನ ಕಾವೇರಿ ನಿಸರ್ಗಧಾಮದಲ್ಲಿ ನಡೆದಿದೆ.

15 ವರ್ಷದ ಲೋಹಿತ್ ಹಾಗೂ 13 ವರ್ಷದ ಯತೀಶ್ ಮೃತ ಬಾಲಕರು. ಈಜಲೆಂದು ಕಾವೇರಿ ನದಿಗೆ ಇಳಿದಿದ್ದಾಗ ಈ ದುರಂತ ಸಂಭವಿಸಿದೆ.

ಸ್ನೇಹಿತರೊಂದಿಗೆ ಬೆಂಗಳೂರಿನಿಂದ ತಲಕಾಡಿಗೆ ಆಗಮಿಸಿದ್ದ ಬಾಲಕರು ಈಜಲು ನದಿಗೆ ಇಳಿದಿದ್ದರು. ಈ ವೇಳೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಈ ವೇಳೆ 6 ಬಾಲಕರನ್ನು ರಕ್ಷಿಸಲಾಗಿದೆ.

ತಲಕಾಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


https://pragati.taskdun.com/priyank-khargereactionm-b-patil-statment/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button