ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯದ ಕಾಂಗ್ರೆಸ್ ಸರಕಾರದ 34 ನೂತನ ಸಂಪುಟ ದರ್ಜೆ ಸಚಿವರಿಗೆ ಅಧಿಕೃತವಾಗಿ ಖಾತೆಗಳನ್ನು ಹಂಚಿಕೆ ಮಾಡಲಾಗಿದೆ. ಯಾರಿಗೆ ಯಾವ ಖಾತೆ ಎಂಬ ವಿವರ ಇಲ್ಲಿದೆ.
ಸಚಿವರ ಖಾತೆ ಹಂಚಿಕೆ ಅಧಿಕೃತ ಪಟ್ಟಿ ಇಲ್ಲಿದೆ
- ಸಿದ್ದರಾಮಯ್ಯ– ಮುಖ್ಯಮಂತ್ರಿ, ಹಣಕಾಸು, ಐಟಿ-ಬಿಟಿ, ಗುಪ್ತಚರ, ವಾರ್ತಾ, ಐಟಿ-ಬಿಟಿ, ಮೂಲಸೌಕರ್ಯ ಅಭಿವೃದ್ಧಿ ಖಾತೆ
- ಡಿಕೆ ಶಿವಕುಮಾರ್– ಉಪಮುಖ್ಯಮಂತ್ರಿ ಜಲಸಂಪನ್ಮೂಲ, ಬೆಂಗಳೂರು ನಗರಾಭಿವೃದ್ಧಿ
- ಡಾ. ಜಿ.ಪರಮೇಶ್ವರ್– ಗೃಹ
- ಎಚ್ ಕೆ ಪಾಟೀಲ್– ಕಾನೂನು ಮತ್ತು ಸಂಸದೀಯ, ಪ್ರವಾಸೋದ್ಯಮ
- ಕೆ.ಹೆಚ್.ಮುನಿಯಪ್ಪ– ಆಹಾರ ಮತ್ತು ನಾಗರಿಕ ಸರಬರಾಜು ವ್ಯವಹಾರ
- ರಾಮಲಿಂಗರೆಡ್ಡಿ– ಸಾರಿಗೆ ಮತ್ತು ಮುಜರಾಯಿ
- ಎಂ.ಬಿ.ಪಾಟೀಲ್– ಬೃಹತ್ ಮತ್ತು ಮಧ್ಯಮ ಕೈಗಾರಿಕೆ
- ಕೆ.ಜೆ.ಜಾರ್ಜ್– ಇಂಧನ
- ದಿನೇಶ್ ಗುಂಡೂರಾವ್– ಆರೋಗ್ಯ ಮತ್ತು ಕುಟುಂಬ ಕಲ್ಯಾಣ
- ಹೆಚ್ ಸಿ ಮಹದೇವಪ್ಪ– ಸಮಾಜಕಲ್ಯಾಣ
- ಸತೀಶ್ ಜಾರಕಿಹೊಳಿ– ಲೋಕೋಪಯೋಗಿ
- ಕೃಷ್ಣ ಬೈರೇಗೌಡ– ಕಂದಾಯ
- ಪ್ರಿಯಾಂಕ್ ಖರ್ಗೆ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್
- ಶಿವಾನಂದ ಪಾಟೀಲ್-ಜವಳಿ, ಸಕ್ಕರೆ, ಸಹಕಾರ ಇಲಾಖೆಯ ಕೃಷಿ ಮಾರುಕಟ್ಟೆ
- ಜಮೀರ್ ಅಹಮದ್ ಖಾನ್– ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತ ವ್ಯವಹಾರಗಳು
- ಶರಣುಬಸಪ್ಪ ದರ್ಶನಾಪುರ– ಸಣ್ಣ ಕೈಗಾರಿಕೆ, ಸಾರ್ವಜನಿಕ ಉದ್ದಿಮೆಗಳು
- ಈಶ್ವರ ಖಂಡ್ರೆ– ಅರಣ್ಯ ಮತ್ತು ಪರಿಸರ ಖಾತೆ
- ಚಲುವರಾಯಸ್ವಾಮಿ– ಕೃಷಿ
- ರಹೀಂ ಖಾನ್– ಪೌರಾಡಳಿತ, ಹಜ್ ಖಾತೆ
- ಸಂತೋಷ ಲಾಡ್– ಕಾರ್ಮಿಕ
- ಡಾ.ಶರಣುಪ್ರಕಾಶ್ ಪಾಟೀಲ್ -ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ
- ಆರ್.ಬಿ.ತಿಮ್ಮಾಪುರ– ಅಬಕಾರಿ
- ಕೆ.ವೆಂಕಟೇಶ್– ಪಶುಸಂಗೋಪನೆ ಮತ್ತು ರೇಷ್ಮೆ ಇಲಾಖೆ
- ಶಿವರಾಜ್ ತಂಗಡಗಿ– ಹಿಂದುಳಿದ ವರ್ಗ , ಕನ್ನಡ ಮತ್ತು ಸಂಸ್ಕೃತಿ
- ಡಿ.ಸುಧಾಕರ್– ಯೋಜನೆ ಮತ್ತು ಸಾಂಖ್ಯಿಕ ಇಲಾಖೆ
- ಬಿ.ನಾಗೇಂದ್ರ: ಯುವಜನ ಸೇವೆ ಮತ್ತು ಕ್ರೀಡೆ, ಪರಿಶಿಷ್ಟ ಪಂಗಡ ಕಲ್ಯಾಣ
- ಕೆ.ಎನ್.ರಾಜಣ್ಣ– ಸಹಕಾರ
- ಬೈರತಿ ಸುರೇಶ್– ನಗರಾಭಿವೃದ್ಧಿ, ಪಟ್ಟಣ ಯೋಜನೆ(ಬೆಂಗಳೂರು ಹೊರತು ಪಡಿಸಿ)
- ಲಕ್ಷ್ಮಿ ಹೆಬ್ಬಾಳ್ಕರ್– ಮಹಿಳಾ ಮತ್ತು ಮಕ್ಕಳ ಕಲ್ಯಾಣಾಭಿವೃದ್ಧಿ, ವಿಕಲಚೇತನರು ಮತ್ತು ಹಿರಿಯ ನಾಗರಿಕರ ಕಲ್ಯಾಣ
- ಮಂಕಾಳ ವೈದ್ಯ– ಮೀನುಗಾರಿಕೆ, ಬಂದರು, ಒಳನಾಡು ಸಾರಿಗೆ
- ಮಧು ಬಂಗಾರಪ್ಪ– ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ
- ಡಾ.ಎಂ.ಸಿ.ಸುಧಾಕರ್– ಉನ್ನತ ಶಿಕ್ಷಣ
- ಎನ್.ಎಸ್.ಬೋಸರಾಜ್: ಸಣ್ಣ ನೀರಾವರಿ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ